Bengaluru Bmtc: ಬೆಂಗಳೂರಿನಲ್ಲಿ ಸಾರಿಗೆ ಬಸ್ ಅಪಘಾತಕ್ಕೆ ಇದೇ ಮುಖ್ಯ ಕಾರಣ: ಬಿಜೆಪಿ vs ಕಾಂಗ್ರೆಸ್ ಟ್ವೀಟ್ ವಾರ್
Bengaluru Bmtc Transport: ಕರ್ನಾಟಕದ ಸಾರಿಗೆ ಬಸ್ ಅಪಘಾತಗಳು ಬಿಜೆಪಿ vs ಕಾಂಗ್ರೆಸ್ ಯಾವ ಅವಧಿಯಲ್ಲಿ ಹೆಚ್ಚಾಗಿದೆ ಎನ್ನುವ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಟ್ವೀಟ್ ವಾರ್ ಶುರುವಾಗಿದೆ. ಲಂಗು ಲಗಾಮು ಇಲ್ಲದೇ ಇರುವುದು ಬಿಜೆಪಿ ಕರ್ನಾಟಕದ ಸುಳ್ಳು ಪ್ರಚಾರಗಳಿಗೆ. ತಮ್ಮ ಅವಧಿಯಲ್ಲಿನ ದುರಾಡಳಿತದಿಂದ ಎಷ್ಟು ಅಪಘಾತವಾಗಿತ್ತು ಎಂಬುದನ್ನು ಮರೆತು ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಪಘಾತಗಳ ಸಂಖ್ಯೆ ನೋಡಿದರೆ ವಾಸ್ತವ ಅನಾವರಣಗೊಳ್ಳುತ್ತದೆ.
ಸಾರಿಗೆ ಬಸ್ ಅಪಘಾತ ಪ್ರಕರಣಗಳು
2020 - 1352
2021 - 1516
2022 - 1598

ಖಾಸಗಿ ಬಸ್ ಅಪಘಾತ ಪ್ರಕರಣಗಳು
2020- 785
2021- 849
2022- 863
ಬಿಜೆಪಿ ಅವಧಿಯಲ್ಲಿ ಪ್ರತಿ ವರ್ಷ ಸಾವಿರಾರು ಅಪಘಾತವಾಗಿದ್ದಾಗ ಬಾಯಿಗೆ ಬೀಗ ಹಾಕಿಕೊಂಡಿದ್ದವರು, ಈಗ ಅಪಘಾತಗಳ ಬಗ್ಗೆ ಮಾತನಾಡುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. 5 ವರ್ಷದ ಆಡಳಿತದ ಅವಧಿಯಲ್ಲಿ ಹೊಸ ಬಸ್ಸುಗಳನ್ನೇ ಸೇರ್ಪಡೆ ಮಾಡದೇ ಗುಜರಿ ಡಕೋಟಾ ಬಸ್ಸುಗಳನ್ನು ದಯಪಾಲಿಸಿ ಹೋಗಿರುವ ಬಿಜೆಪಿಯ ಉಡುಗೊರೆಯ ಫಲವಿದು. ತಮ್ಮ ಅವಧಿಯಲ್ಲಿ ಹೊಸ ಬಸ್ಸುಗಳ ಸೇರ್ಪಡೆ ಇಲ್ಲದೆ, ಹೊಸ ನೇಮಕಾತಿಯಾಗದೇ, ನೌಕರರಿಗೆ ಸರಿಯಾಗಿ ವೇತನ ಪಾವತಿ ಮಾಡಲಾಗದ ಕರಾಳ ದಿನಗಳನ್ನು ಬಿಜೆಪಿಗರು ಮರೆತಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಸಾರಿಗೆ ಇಲಾಖೆಯ 67% ಬಸ್ಸುಗಳು ನಿಗದಿತ ವಯೋಮಾನ ಪೂರೈಸಿ, ರದ್ಧತಿಯ ಅಂಚಿನಲ್ಲಿದ್ದವು. ಆದರೂ ಕಾರ್ಯಾಚರಣೆ ಮಾಡುತ್ತಿದ್ದವು. ನಮ್ಮ ಸರ್ಕಾರ ಕಾರ್ಯದಕ್ಷತೆಯಿಂದ ಬಸ್ಸುಗಳ ಪುನಶ್ಚೇತನ ಕಾರ್ಯ ಮಾಡಲಾಯಿತು. ಇದರಿಂದ ಬಸ್ಸುಗಳ ಕಾರ್ಯಾಚರಣೆಗೆ ಸಹಕಾರಿ ಆಯಿತು. ನಮ್ಮ 2 ವರ್ಷ 8 ತಿಂಗಳ ಅವಧಿಯಲ್ಲಿ 7800 ಹೊಸ ಬಸ್ಸುಗಳನ್ನು ಸೇರ್ಪಡೆಯಾಗಿದ್ದು, 10,000 ನೇಮಕಾತಿ, 2400 ಕ್ಕೂ ಹೆಚ್ಚು ಬಸ್ಸುಗಳ ಪುನಶ್ಚೇತನ ಕಾರ್ಯ ಮಾಡಿದ್ದೇವೆ.
ಬೆಂಗಳೂರಲ್ಲಿ ಸಾರಿಗೆ ಬಸ್ ಅಪಘಾತಕ್ಕೆ ಮುಖ್ಯ ಕಾರಣ
ಇನ್ನು ಅಪಘಾತದ ವಿಚಾರಕ್ಕೆ ಬಂದರೆ, ಬೆಂಗಳೂರಿನಲ್ಲಿಯೇ ಅಪಘಾತ ಹೆಚ್ಚಾಗಲು ಕಾರಣ, ಕೇಂದ್ರ ಬಿಜೆಪಿ ಸರ್ಕಾರವು ಖಾಸಗಿ ಕಂಪನಿಗಳಿಗೆ ಅನುದಾನ ನೀಡಿ ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆದು, ಖಾಸಗಿ ಚಾಲಕರನ್ನು ನಿಯೋಜಿಸಿರುವುದು. ನಮ್ಮ ಸರ್ಕಾರ ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆದು ಎಲೆಕ್ಟ್ರಿಕ್ ಬಸ್ಸುಗಳ ಅಪಘಾತಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಪರಾಮರ್ಶೆ ನಡೆಸಲು ಸಹ ಕೋರಿದೆ. ಅಧಿಕಾರವಿದ್ದಾಗ ಏನೂ ಸಾಧನೆ ಮಾಡದ ಬಿಜೆಪಿ, ಈಗ ಪ್ರತಿನಿತ್ಯ ಸುಳ್ಳು ಆರೋಪದ ಟ್ಟೀಟ್ ಮಾಡಿ ಏನೂ ಸಾಧಿಸಲು ಹೊರಟಿದೆ? ನಿಮ್ಮ ಈ ನಾಟಕ ನೋಡುತ್ತಿದ್ದರೆ ಕೈಲಾಗದವನು ಮೈ ಪರಚಿಕೊಂಡಂತೆ ಎಂಬ ಗಾದೆ ನೆನಪಾಗುತ್ತಿದೆ.
Bengaluru Bmtc ಬಿಜೆಪಿ ಟ್ವೀಟ್
ಪ್ರತಿನಿತ್ಯ ಜೀವವನ್ನು ಕೈಯಲ್ಲಿ ಹಿಡಿದು ಬಸ್ಸಿನಲ್ಲಿ ಸಾಗಬೇಕಾದ ದುಸ್ಥಿತಿಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕನ್ನಡಿಗರಿಗೆ ಕರುಣಿಸಿದೆ. ಕಳೆದ ಮೂರು ವರ್ಷಗಳಲ್ಲಿ ಖಾಸಗಿ ಬಸ್‌ಗಳಿಗೆ ಹೋಲಿಕೆ ಮಾಡಿದರೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳೇ ಹೆಚ್ಚು ಅಪಘಾತವಾಗಿವೆ ಎಂದು ವರದಿಯಾಗಿವೆ. ಬೆಂಗಳೂರು ನಗರದಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಅಪಘಾತ ಸಂಭವಿಸಿದ್ದು, 2025 ರಲ್ಲಿ 216 ಅಪಘಾತ ಆಗಿರುವ ಕುರಿತು ವರದಿಯಾಗಿದೆ. ಸಚಿವ ರಾಮಲಿಂಗಾ ರೆಡ್ಡಿ ಅವರೇ, ನಿಮ್ಮ ಅವಧಿಯಲ್ಲಿ ನಿಮ್ಮ ಸಂಸ್ಥೆಯ ಬಸ್ಸುಗಳ ಹಣೆಬರಹವನ್ನು ನೀವೇ ಒಮ್ಮೆ ನೋಡಿ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿತ್ತು.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್‌ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications