ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರೇಕ್ ಫೇಲ್ : ನಾಲ್ವರ ಬಲಿ ಪಡೆದ ಬಿಎಂಟಿಸಿ ಬಸ್

|
Google Oneindia Kannada News

ಬೆಂಗಳೂರು, ಡಿ. 25 : ಬಿಎಂಟಿಸಿ ಬಸ್‌ ಬ್ರೇಕ್ ವಿಫಲಗೊಂಡು ನಡೆದ ಸರಣಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಲಿಂಗಾರಾಜಪುರದಲ್ಲಿ ಬುಧವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸರಣಿ ಅಪಘಾತದಲ್ಲಿ ಮೃತಪಟ್ಟವರನ್ನು ಮಹಮದ್ ಹುಸೇನ್ (45), ಅಸ್ಲಾಂ (46) ಮತ್ತು ಸಯ್ಯದ್ ಮುನೀರ್ (55) ಎಂದು ಗುರುತಿಸಲಾಗಿದ್ದು, ಒಬ್ಬರ ಗುರುತು ಪತ್ತೆಯಾಗಿಲ್ಲ. ರಮೇಶ್ ಮತ್ತು ಸುಶೀಲಮ್ಮ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. [ಬಿಎಂಟಿಸಿ ಬಸ್ ದರ ಎಷ್ಟು ಕಡಿಮೆ ಆಗುತ್ತೆ]

bmtc

ಘಟನೆ ವಿವರ : ಶಿವಾಜಿನಗರದಿಂದ ಹೆಣ್ಣೂರಿಗೆ ಹೊರಟಿದ್ದ ಕೆಎ-01 ಎಫ್-3724 ನಂಬರ್‌ ಬಿಎಂಟಿಸಿ ಬಸ್ಸಿನ ಬ್ರೇಕ್ ಲಿಂಗರಾಜಪುರ ಮೇಲುರಸ್ತೆಯಿಂದ ಕೆಳಕ್ಕೆ ಇಳಿಯುತ್ತಿದ್ದಂತೆ ವಿಫಲಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್ ಒನ್ ವೇಯಲ್ಲಿ ಅಡ್ಡಾದಿಡ್ಡಿ ಚಲಿಸಿದೆ. [ಬಿಎಂಟಿಸಿ ಮಾಸಿಕ ಪಾಸು ಪಡೆಯುವುದು ಹೇಗೆ?]

ನಂತರ ರಸ್ತೆ ವಿಭಜಕವನ್ನು ಹತ್ತಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಗೂಡ್ಸ್ ಆಟೋ, ದ್ವಿಚಕ್ರ ವಾಹನಗಳು, ಕಾರು ಮತ್ತು ಟಾಟಾ ಸುಮೋಗೆ ಡಿಕ್ಕಿ ಹೊಡೆದಿದೆ. ಆರು ವಾಹನಗಳು ಬಸ್ಸಿಗೆ ಸಿಲುಕಿ ಜಖಂಗೊಂಡರೆ, ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಗಳು ಗಾಯಗೊಂಡಿದ್ದಾರೆ.

ಸಚಿವ, ಆಯುಕ್ತರ ಭೇಟಿ : ಅಪಘಾತ ನಡೆದ ಸ್ಥಳಕ್ಕೆ ಗೃಹ ಸಚಿವ ಕೆ.ಜೆ.ಜಾರ್ಜ್, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಸಚಿವರು ಹೇಳಿದರು.

ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಸ್‌ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಾರಿಗೆ ಸಚಿವರು ಬೆಂಗಳೂರಿನಲ್ಲಿ ಇಲ್ಲದ ಕಾರಣ ಸ್ಥಳಕ್ಕೆ ಆಗಮಿಸಿರಲಿಲ್ಲ.

English summary
Four persons were killed when a Bangalore Metropolitan Transport Corporation (BMTC) bus collided with a goods auto, two two-wheelers and a bicycle on the Lingarajapuram flyover, Bengaluru on Wednesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X