Viral Video: ಬೆಂಗಳೂರಿನಲ್ಲಿ ಸೂಪರ್ ಕಾರ್ ವಿಡಿಯೋ ಮಾಡಲು ಹೋಗಿ ಬೈಕ್ ಅಪಘಾತ: ಪಾರಾದ ಸವಾರರು
ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಅಂತಹದ್ದರಲ್ಲಿ ವಿಡಿಯೋ ಮಾಡಿಕೊಂಡು, ಮೈಮರೆತರೆ ಅಪಘಾತವಾಗದೆ ಇನ್ನೇನಾಗುತ್ತದೆ. ಇಂತಹದ್ದೇ ಒಂದು ಘಟನೆ ನಗರದಲ್ಲಿ ನಡೆದಿದ್ದು, ಬೈಕ್ ಸವಾರರು ಅದೃಷ್ಟವಶಾತ್ ಪಾರಾಗಿದ್ದಾರೆ.
ಸ್ಕೂಟಿಯಲ್ಲಿ ಚಲಿಸುತ್ತಿದ್ದ ಸವಾರರು ತಮ್ಮ ಮುಂದೆ ಸಾಗುತ್ತಿದ್ದ ಸೂಪರ್ ಕಾರಿನ ವಿಡಿಯೋ ಚಿತ್ರೀಕರಣ ಮಾಡಲು ಹೋಗಿದ್ದು, ಹಿಂದಿನಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಸ್ಕೂಟಿಯಲ್ಲಿದ್ದ ಇಬ್ಬರು ಹಾಗೂ ಬೈಕ್‌ನಲ್ಲಿದ್ದ ಸವಾರರು ಸಂಚಾರ ದಟ್ಟಣೆಯ ರಸ್ತೆಯ ಮಧ್ಯೆ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದ ವೀಡಿಯೊವನ್ನು ಎಕ್ಸ್‌ನಲ್ಲಿ@3rdEyeDude ಬಳಕೆದಾರ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯಲ್ಲಿ ಕಪ್ಪು ಮೆಕ್ಲಾರೆನ್ ಸೂಪರ್ ಕಾರಿನ ಚಿತ್ರೀಕರಣ ಮಾಡುವಾಗ ಘಟನೆ ನಡೆದಿದೆ.
ವೈರಲ್ ಆದ ವಿಡಿಯೋ
ತಮ್ಮ ಫೋನ್‌ಗಳಲ್ಲಿ ಕಾರಿನ ದೃಶ್ಯಗಳನ್ನು ರೆಕಾರ್ಡ್ ಮಾಡಲು ಪ್ರಯತ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಮೋಟಾರ್ ಬೈಕ್ ಮತ್ತು ಸ್ಕೂಟಿ ಡಿಕ್ಕಿ ಹೊಡೆದವು. ಬೇರೆ ವಾಹನಗಳು ಹಾದು ಹೋಗುತ್ತಿದ್ದರಿಂದ ರಸ್ತೆ ಸಂಚಾರ ದಟ್ಟಣೆಯಿಂದ ಕೂಡಿತ್ತು.
Biker 🏍 who was tailing a McLaren supercar 🏎 on Vittal Mallya road, collided with each other. People are so obsessed with capturing videos of supercars and creating Instagram reels 🤦#RoadSafety #TrafficIncident #Bengaluru pic.twitter.com/6doQEKkqE4
— ThirdEye (@3rdEyeDude) February 6, 2024
"ವಿಟ್ಟಲ್ ಮಲ್ಯ ರಸ್ತೆಯಲ್ಲಿ ಮೆಕ್ಲಾರೆನ್ ಸೂಪರ್ ಕಾರಿನ ವಿಡಿಯೋ ಮಾಡುತ್ತಿದ್ದ ಬೈಕ್ ಸವಾರ ಪರಸ್ಪರ ಡಿಕ್ಕಿ ಹೊಡೆದಿದೆ. ಸೂಪರ್‌ಕಾರ್‌ಗಳ ವೀಡಿಯೊಗಳನ್ನು ಸೆರೆಹಿಡಿಯಲು ಮತ್ತು ಇನ್‌ಸ್ಟಾಗ್ರಾಮ್ ರೀಲ್‌ಗಳನ್ನು ರಚಿಸಲು ಜನರು ತುಂಬಾ ಗೀಳನ್ನು ಹೊಂದಿದ್ದಾರೆ" ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಈ ವಿಡಿಯೋ ವೈರಲ್ ಆಗಿದ್ದು, ಇದುವರೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಆದಾಗ್ಯೂ, ಸಾಮಾಜಿಕ ಮಾಧ್ಯಮ ಬಳಕೆದಾರರು ಸವಾರರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರನು "ಕೆಲವು ಇಂಚುಗಳಿಂದ ತಪ್ಪಿಸಿಕೊಂಡಿದ್ದಾರೆ" ಎಂದು ಬರೆದಿದ್ದಾರೆ.
"ಕನಿಷ್ಠ ಎಲ್ಲರೂ ಹೆಲ್ಮೆಟ್ ಧರಿಸುತ್ತಾರೆ. ದೆಹಲಿಯಲ್ಲಿ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು ಹೆಚ್ಚಾಗಿದೆ. ಅವರು ಅಡ್ಡಾದಿಡ್ಡಿಯಾಗಿ ಸವಾರಿ ಮಾಡುತ್ತಾರೆ. ಕಾರುಗಳ ನಡುವೆ ಮತ್ತು ಸರದಿಯ ನಡುವೆ ತೀವ್ರವಾಗಿ ಅಡಚಣೆ ಉಂಟುಮಾಡುತ್ತಾರೆ. ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳನ್ನು ಡೆಲಿವರಿ ಬಾಯ್‌ಗಳು ಬಳಸುತ್ತಿದ್ದಾರೆ." ಎಂದು ಬಳಕೆದಾರನೊಬ್ಬ ದೆಹಲಿ ಸಮಸ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ನಾಲ್ಕನೇ ಬಳಕೆದಾರರು, "ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳನ್ನು ಬಳಸುವುದು - ಕಾರು ಅಥವಾ ಬೈಕುಗಳು ಯಾವಾಗಲೂ ಅಪಾಯಕಾರಿ ಆದರೆ ಜನರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ." ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications