ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿಗೆ ಬಿಡಿಎ ಹಸ್ತಾಂತರಿಸಿದ ರಸ್ತೆ, ಮೇಲ್ಸೇತುವೆಗಳ ಲಿಸ್ಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್. 22: ಬೆಂಗಳೂರಿನ ರಸ್ತೆ ಗುಂಡಿಗಳು ಜೀವಗಳನ್ನು ಬಲಿ ಪಡೆಯುತ್ತಲೆ ಇವೆ. ನಾಗರಿಕರಿಂದ, ಮಾಧ್ಯಮಗಳಿಂದ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಲೆ ಇದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಂತಿಮವಾಗಿ ಒಂದು ತೀರ್ಮಾನಕ್ಕೆ ಬಂದಿದ್ದು ತನ್ನ ವ್ಯಾಪ್ತಿಯ ರಸ್ತೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ವಹಿಸಲು ನಿರ್ಧಾರ ತೆಗೆದುಕೊಂಡಿದೆ.

Bengaluru: BDA handover roads, flyovers and underpasses to BBMP

ಬೆಂಗಳೂರಿನ ರಿಂಗ್ ರಸ್ತೆಯನ್ನು ಸೇರಿ 12 ಫ್ಲೈ ಓವರ್ ಗಳನ್ನು ಬಿಬಿಎಂಪಿ ವ್ಯಾಪ್ತಿಗೆ ನೀಡುವಂತೆ ಕಳೆದ ವರ್ಷವೇ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಬಿಡಿಎ ಹಲವಾರು ರಸ್ತೆಗಳನ್ನು ತನ್ನ ವ್ಯಾಪ್ತಿಯಲ್ಲೇ ಇಟ್ಟುಕೊಂಡಿತ್ತು. [ಬೆಂಗಳೂರು ರಸ್ತೆಗಳಲ್ಲಿರುವ ಗುಂಡಿಗಳ ಲೆಕ್ಕ - ವರದಿ]

2014 ರ ಏಪ್ರಿಲ್ 4 ರಂದೇ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಬಿಡಿಎ ತನ್ನ ವ್ಯಾಪ್ತಿಯ ಎಲ್ಲ ರಸ್ತೆ ಮತ್ತು ಮೇಲ್ಸೇತುವೆಗಳನ್ನು ಬಿಬಿಎಂಪಿ ನಿರ್ವಹಣೆಗೆ ನೀಡುತ್ತಿದ್ದು ನಿರ್ವಹಣೆಗೆ ವಾರ್ಷಿಕವಾಗಿ 60 ಕೋಟಿ ರು. ಬಿಬಿಎಂಪಿಗೆ ಬೇಕಾಗುತ್ತದೆ.[ನಿಮ್ಮ ಏರಿಯಾದಲ್ಲೂ ರಸ್ತೆ ಗುಂಡಿ ಇದ್ದರೆ ಚಿತ್ರ ತೆಗೆದು ಕಳಿಸಿ]

ಬಿಡಿಎ ಬಿವಿಎಂಪಿಗೆ ನೀಡುತ್ತಿರುವ ಮೇಲ್ಸೇತುವೆ, ರಸ್ತೆ, ಅಂಡರ್ ಪಾಸ್ ಗಳು
* ರಿಂಗ್ ರೋಡ್ ನ 56 ಕಿಮೀ
* ಹೆಬ್ಬಾಳ ಮೇಲ್ಸೇತುವೆ
* ಎಚ್ ಎಸ್ ಆರ್ ಲೇಔಟ್
* ಮಾರತ್ತಹಳ್ಳಿ ರೈಲ್ವೆ ಸೇತುವೆ
* ರಾಮಮೂರ್ತಿ ನಗರ ಅಂಡರ್ ಪಾಶ್
* ಇಬ್ಲುರ್ ಮೇಲ್ಸೇತುವೆ
* ಅಗರ ಮೇಲ್ಸೇತುವೆ
* ಮಾಗಡಿ ರಸ್ತೆ ಮತ್ತು ಕಾರ್ಡ್ ರೋಡ್ ಜಂಕ್ಷನ್
* ನಾಯಂಡಹಳ್ಳಿ ರೈಲ್ವೆ ಕೆಳಸೇತುವೆ
* ವೀರಣ್ಣ ಪಾಳ್ಯ ಮೇಲ್ಸೇತುವೆ
* ಕಲ್ಯಾಣನಗರ ಮೇಲ್ಸೇತುವೆ
* ಭದ್ರಪ್ಪ ಲೇಔಟ್ ಮೇಲ್ಸೇತುವೆ

English summary
Bengaluru Development Authority (BDA) has decided to handover all the roads in the city developed and hitherto maintained by it to Bruhat Bengaluru Mahanagara Palike (BBMP) for their maintenance. The state governmentordered the BDA to handover 12 flyovers and underpasses along the Outer Ring Road to BBMP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X