ಬೆಂಗಳೂರು ಮೂಲದ ಮೇಜರ್ ಸ್ವಾತಿ ಶಾಂತಕುಮಾರ್‌ಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ
ಬೆಂಗಳೂರು: ಮೂಲತಃ ಬೆಂಗಳೂರಿನವರಾದ ಭಾರತೀಯ ಸೇನೆಯ ಅಧಿಕಾರಿ ಮೇಜರ್ ಸ್ವಾತಿ ಶಾಂತಕುಮಾರ್ ಅವರಿಗೆ ಪ್ರತಿಷ್ಠಿತ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಡುವ ಲಿಂಗ ಸಮಾನತೆ ಪ್ರತಿಪಾದಕ ಪ್ರಶಸ್ತಿ-2025 (ಸೆಕ್ರೆಟರಿ ಜನರಲ್ ಪ್ರಶಸ್ತಿ) ಸಿಕ್ಕಿದೆ. ಈ ಬಗ್ಗೆ ವಿಶ್ವಸಂಸ್ಥೆಯ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್ ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮೇಜರ್ ಸ್ವಾತಿ ಕುಮಾರ್ ಅವರು ಸದ್ಯ ದಕ್ಷಿಣ ಸುಡಾನ್‌ನಲ್ಲಿನ ಯುಎನ್ ಶಾಂತಿ ಮಿಷನ್‌ನಲ್ಲಿ (UNMISS) ಸೇವೆ ಸಲ್ಲಿಸುತ್ತಿದ್ದಾರೆ.
ಮೇಜರ್ ಸ್ವಾತಿ ಅವರ "Equal Partners, Lasting Peace" (ಸಮಾನ ಪಾಲುದಾರರು, ಶಾಶ್ವತ ಶಾಂತಿ) ಎಂಬ ಯೋಜನೆ ಲಿಂಗಸಮಾನತೆ ಹಾಗೂ ಒಳಗೊಂಡ ಶಾಂತಿ ಪ್ರಕ್ರಿಯೆಗಳ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸಿದೆ. ಯುಎನ್‌ನ ಲಿಂಗಸಮಾನತೆ ಉತ್ತೇಜನ ಹಾಗೂ ಶಾಂತಿ ಸ್ಥಾಪನೆಗೆ ಸಂಬಂಧಿಸಿದ ಆದೇಶಗಳಿಗೆ ಸಂಪೂರ್ಣವಾಗಿ ಹೊಂದಿಕೆಯಾಗುವ ಯೋಜನೆಗಳಿಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಬಾರಿ ಜಾಗತಿಕ ಮಟ್ಟದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಮೇಜರ್ ಸ್ವಾತಿ ಅವರ ಯೋಜನೆಯು ಜೆಂಡರ್ ವಿಭಾಗದಲ್ಲಿ ಆಯ್ಕೆಯಾಗಿ ಪ್ರಶಸ್ತಿ ಗೆದ್ದಿದೆ.

ವಿಶ್ವದ ವಿವಿಧ ವಿಶ್ವ ಶಾಂತಿ ಮಿಷನ್‌ಗಳು ಹಾಗೂ ಏಜೆನ್ಸಿಗಳಿಂದ ಬಂದ ನಾಮನಿರ್ದೇಶನಗಳ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ, ನಾಲ್ಕು ಅಂತಿಮ ಸ್ಪರ್ಧಿಗಳ ಪೈಕಿ ಮೇಜರ್ ಸ್ವಾತಿ ಅವರ ಯೋಜನೆಗೆ ಜಾಗತಿಕ ಮತದಾನದಲ್ಲಿ ಅತಿ ಹೆಚ್ಚು ಬೆಂಬಲ ಸಿಕ್ಕಿದೆ. ವಿಶ್ವದ ಎಲ್ಲ ಭಾಗಗಳಿಂದ ವಿಶ್ವಸಂಸ್ಥೆಯ ಸಿಬ್ಬಂದಿ ಈ ಮತದಾನದಲ್ಲಿ ಭಾಗವಹಿಸಿದ್ದರು.
ಈ ಕುರಿತು ಮಾತನಾಡಿದ ಕಾರ್ಯದರ್ಶಿ ಜನರಲ್ ಆಂಟೋನಿಯೊ ಗುಟೆರೆಸ್, ದಕ್ಷಿಣ ಸುಡಾನ್ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ಮಿಷನ್‌ನಲ್ಲಿ ಲಿಂಗಸಮಾನತೆಯ ಆಧಾರದ ಶಾಂತಿ ಕಾರ್ಯಾಚರಣೆಗಳನ್ನು ಬಲಪಡಿಸಿದ ಮಹತ್ವದ ಪ್ರಯತ್ನ ಎಂದು ಮೇಜರ್ ಸ್ವಾತಿ ಅವರ ಯೋಜನೆಯನ್ನು ಶ್ಲಾಘಿಸಿದ್ದಾರೆ. ಭಾರತೀಯ ತಂಡವನ್ನು ಪರಿಣಾಮಕಾರಿಯಾಗಿ ನಿಯೋಜಿಸಿ, ನೆಲಮಟ್ಟದ ಸಮುದಾಯಗಳೊಂದಿಗೆ ಆಳವಾದ ಸಂಪರ್ಕ ಸಾಧಿಸಿದ್ದು ಈ ಯೋಜನೆಯ ಪ್ರಮುಖ ಅಂಶವಾಗಿದೆ.
5,000 ಮಹಿಳೆಯರಿಗೆ ರಕ್ಷಣೆ
ಮೇಜರ್ ಸ್ವಾತಿ ಅವರ ನೇರ ನೇತೃತ್ವದಲ್ಲಿ ತಂಡವು ಅಲ್ಪ ಹಾಗೂ ದೀರ್ಘ ದೂರದ ಗಸ್ತುಗಳು, ನದಿ ಮಾರ್ಗದ ಸಂಯುಕ್ತ ಗಸ್ತು ಹಾಗೂ ವಾಯು ಗಸ್ತು ಸೇರಿ ವಿವಿಧ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದೆ. ಇದರಿಂದ ದಕ್ಷಿಣ ಸುಡಾನ್‌ನ ಅತ್ಯಂತ ದೂರದ ಜಿಲ್ಲೆಗಳವರೆಗೂ ಶಾಂತಿ ಕಾರ್ಯಾಚರಣೆ ತಲುಪುವಂತಾಗಿದೆ. ಈ ಕಾರ್ಯಾಚರಣೆಗಳ ಫಲವಾಗಿ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಾಣವಾಗಿದ್ದು, ಸಮುದಾಯದ ನಂಬಿಕೆಯನ್ನು ಹೆಚ್ಚಿಸುವ ಜೊತೆಗೆ ಮಹಿಳೆಯರು ಸ್ಥಳೀಯ ಶಾಂತಿ ಹಾಗೂ ಭದ್ರತಾ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಕಲ್ಪಿಸಿದೆ.
ಈ ಗೌರವವು ಸಮಕಾಲೀನ ಸಂಘರ್ಷ ಪರಿಹಾರದಲ್ಲಿ ಮಹಿಳಾ ಶಾಂತಿ ರಕ್ಷಕರ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತದೆ. ವಿಶ್ವದ ಅತ್ಯಂತ ಸವಾಲಿನ ಪ್ರದೇಶಗಳಲ್ಲಿ ಒಂದರಲ್ಲಿ ಮೇಜರ್ ಸ್ವಾತಿ ಶಾಂತ ಕುಮಾರ್ ತೋರಿದ ಅಚಲ ಬದ್ಧತೆ, ಭಾರತೀಯ ಸೇನಾ ಪಡೆಗೆ ಮಾತ್ರವಲ್ಲದೆ ಭವಿಷ್ಯದ ಅಂತರರಾಷ್ಟ್ರೀಯ ಶಾಂತಿ ಮಿಷನ್‌ಗಳಿಗೆ ಮಾದರಿ ಎಂದು ಕರೆಯಲಾಗಿದೆ. ಈ ಪ್ರಶಸ್ತಿ ಮೂಲಕ ಬೆಂಗಳೂರಿನ ಹಿರಿಮೆ ಜಾಗತಿಕವಾಗಿ ಗಮನ ಸೆಳೆದಿದೆ.
ಸ್ವಾತಿ ಅವರು ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಬೆಂಗಳೂರಿನ ಲಿಂಗರಾಜಪುರದ ಖಾಸಗಿ ಕಂಪನಿ ಉದ್ಯೋಗಿ ಶಾಂತಕುಮಾರ್, ಸರ್ಕಾರಿ ಶಾಲಾ ಶಿಕ್ಷಕಿ ರಾಜಮಣಿ ದಂಪತಿಯ ಪುತ್ರಿ. ಇವರು ಕಳೆದ ಎಂಟು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಒಂದೂವರೆ ವರ್ಷದಿಂದ ದಕ್ಷಿಣ ಸೂಡನ್‌ನಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ











Click it and Unblock the Notifications