Bengaluru Auto: ಸರ್ಕಾರದಿಂದ ಆಟೋ ಪ್ರಯಾಣ ದರ ಪರಿಷ್ಕರಣೆ ಅಪಡೇಟ್
ಬೆಂಗಳೂರು, ಡಿಸೆಂಬರ್ 13: ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಆಟೋ ರಿಕ್ಷಾ ದರವನ್ನು ಬಹುಶಃ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಪರಿಷ್ಕರಿಸಲು ಚಿಂತನೆ ನಡೆಸುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನ ಆಟೋ ಚಾಲಕರ ಒಕ್ಕೂಟವು ಕಳೆದ ತಿಂಗಳು ಸಚಿವರಿಗೆ ಪತ್ರ ಬರೆದು, ಸಗಟು ಬೆಲೆ ಸೂಚ್ಯಂಕಕ್ಕೆ (ಡಬ್ಲ್ಯುಪಿಐ) ಅನುಗುಣವಾಗಿ ವಾರ್ಷಿಕವಾಗಿ ದರವನ್ನು ಪರಿಷ್ಕರಣೆ ಮಾಡುವಂತೆ ಕೋರಿತ್ತು ಎಂದು ಡಿಎಚ್ ವರದಿ ಮಾಡಿದೆ.

ಈಗಿರುವ ಕಾನೂನುಗಳನ್ನು ವಿಶೇಷವಾಗಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 67 (ಐ) ಅನ್ನು ತಿದ್ದುಪಡಿ ಮಾಡುವಂತೆ ಒತ್ತಾಯಿಸಲಾಗಿತ್ತು. ಕಾಲಕಾಲಕ್ಕೆ ಪ್ರಯಾಣ ದರಗಳನ್ನು ನಿಗದಿಪಡಿಸಬೇಕು ಎಂದು ಹೇಳಿದೆ. ಕಾಲಕಾಲಕ್ಕೆ ಎಂಬ ಪದವನ್ನು ಪ್ರತಿ ವರ್ಷ ಡಬ್ಲ್ಯುಪಿಐ ಪ್ರಕಾರ ಎಂದು ಬದಲಿಸುವಂತೆ ಪತ್ರದಲ್ಲಿ ಸಚಿವರಿಗೆ ಕೋರಿದೆ.
ಕಳೆದ 10 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಆಟೋ ಪ್ರಯಾಣ ದರವನ್ನು ಕೇವಲ ಎರಡು ಬಾರಿ ಹೆಚ್ಚಿಸಲಾಗಿದೆ. ಇದು 2013 ಮತ್ತು 2021. ಪ್ರಸ್ತುತ ದರವು ಮೊದಲ ಎರಡು ಕಿಮೀಗೆ 30 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂ. ಆಗಿದೆ. ಆಟೋ ಪ್ರಯಾಣ ದರಗಳನ್ನು ಪದೇ ಪದೇ ಪರಿಷ್ಕರಿಸುವ ಅಗತ್ಯವಿದೆ ಎಂದು ಚಾಲಕರು ಹಾಗೂ ಸಾರಿಗೆ ತಜ್ಞರು ಒಮ್ಮತ ನಿಲುವು ಹೊಂದಿದ್ದಾರೆ. ದರ ಪರಿಷ್ಠರಣೆ ಮಾಡುವುದರಿಂದ ಆಟೋ ಚಾಲಕರ ಬಗ್ಗೆ ದೂರುಗಳು ಕಡಿಮೆಯಾಗುತ್ತವೆ. ವಿಶೇಷವಾಗಿ ಹೆಚ್ಚುವರಿ ಶುಲ್ಕ ವಿಧಿಸುವ ಮತ್ತು ಸವಾರಿ ನಿರಾಕರಿಸುವ ಬಗ್ಗೆ ಅವರು ವಾದಿಸುತ್ತಾರೆ.
ನಗರದಲ್ಲಿರುವ ಸಾರಿಗೆ ತಜ್ಞ ಸತ್ಯ ಅರಿಕುತಾರಂ ಅವರು ಹೇಳುವಂತೆ ಉಡುಪಿಯಂತಹ ಸಣ್ಣ ಪಟ್ಟಣದಲ್ಲಿಯೂ ಸಹ ಆಟೋ ದರವು ಮೊದಲ 1.5 ಕಿಮೀಗೆ 40 ರೂ. ಮತ್ತು ನಂತರದ ಪ್ರತಿ ಕಿಲೋಮೀಟರ್‌ಗೆ 20 ರೂ. ವಿಧಿಸುತ್ತಾರೆ. ಆಗಾಗ್ಗೆ ಪ್ರಯಾಣ ದರ ಪರಿಷ್ಕರಣೆಗಳು ಬೆಂಗಳೂರಿನ ಚಾಲಕರಿಂದ ಅತಿರೇಕದ ಚಾಲನೆ, ರೈಡಿಂಗ್ ಕ್ಯಾನ್ಸಲ್ ಮಾಡುವುದನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ಕಳೆದ ತಿಂಗಳು ಪತ್ರ ಬರೆದ ಆಟೋ ರಿಕ್ಷಾ ಚಾಲಕರ ಒಕ್ಕೂಟದ (ಎಆರ್‌ಡಿಯು) ಡಿ ರುದ್ರಮೂರ್ತಿ, ವಾರ್ಷಿಕ ಪ್ರಯಾಣ ದರ ಪರಿಷ್ಕರಣೆಯಿಂದ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಆಟೋ ಸವಾರಿಗಳು ಹೆಚ್ಚು ವಿಶ್ವಾಸಾರ್ಹವಾಗುತ್ತವೆ, ಅಲ್ಲದೆ ಚಾಲಕರು ಸವಾರಿ ಅಥವಾ ಹೆಚ್ಚಿನ ಶುಲ್ಕವನ್ನು ನಿರಾಕರಿಸುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಏರುತ್ತಿರುವ ಇಂಧನ ವೆಚ್ಚವನ್ನು ಪರಿಗಣಿಸಿ ದರಗಳನ್ನು ಪರಿಷ್ಕರಣೆ ಮಾಡಬೇಕು. ಪ್ರಯಾಣ ದರ ಪರಿಷ್ಕರಣೆಯ ವಿಧಾನಗಳನ್ನು ರೂಪಿಸಿ ವರದಿ ಸಲ್ಲಿಸುವಂತೆ ಸಾರಿಗೆ ಆಯುಕ್ತರಿಗೆ ತಿಳಿಸಿದ್ದೇನೆ. ಆದಾಗ್ಯೂ, ವಾರ್ಷಿಕ ದರ ಪರಿಷ್ಕರಣೆ ಸಾಧ್ಯವಿಲ್ಲ. ಬದಲಾಗಿ ಪ್ರತಿ ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಮಾಡಬಹುದು ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ಮುಗಿದ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ನವೆಂಬರ್ 30 ರವರೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರು 1,559 ಆಟೋ ಚಾಲಕರ ಮೇಲೆ ಹೆಚ್ಚುವರಿ ಶುಲ್ಕವನ್ನು ಕೇಳಿದ್ದಕ್ಕಾಗಿ ಮತ್ತು ಇನ್ನೂ 1,475 ಸವಾರರನ್ನು ನಿರಾಕರಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಎರಡೂ ಅಪರಾಧಗಳಿಗೆ ದಂಡ 500 ರೂ. ಆಗಿದೆ. ಪೊಲೀಸರು ಪ್ರಯಾಣಿಕರು ದೂರುಗಳನ್ನು ಸಲ್ಲಿಸಲು ಹಾಟ್‌ಲೈನ್ ಅನ್ನು ಆರಂಭಿಸಿದ್ದಾರೆ.












Click it and Unblock the Notifications