ಬೆಂಗಳೂರು; ಆಟೋ ಪ್ರಯಾಣ ದರ ಏರಿಕೆಗೆ ಮನವಿ

ಬೆಂಗಳೂರು, ಫೆಬ್ರವರಿ 24: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಜನರು ಕಂಗಾಲಾಗಿದ್ದಾರೆ. ಬೆಂಗಳೂರು ನಗರದಲ್ಲಿ ಆಟೋ ಚಾಲಕರು ಕನಿಷ್ಠ ಪ್ರಯಾಣ ದರವನ್ನು ಏರಿಕೆ ಮಾಡಬೇಕು ಎಂದು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದಾರೆ.

ನಿರ್ವಹಣಾ ವೆಚ್ಚಗಳು ಅಧಿಕವಾಗಿವೆ. 2013ರ ಬಳಿಕ ಕನಿಷ್ಠ ಪ್ರಯಾಣದರವನ್ನು ಏರಿಕೆ ಮಾಡಿಲ್ಲ ಎಂದು ಆಟೋ ಚಾಲಕರು ಹೇಳಿದ್ದಾರೆ. ಪ್ರಸ್ತುತ ಇರುವ 25 ರೂ. ಪ್ರಯಾಣ ದರವನ್ನು 36 ರೂ.ಗಳಿಗೆ ಏರಿಕೆ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

2013ರಲ್ಲಿ ಸಾರಿಗೆ ಇಲಾಖೆ ಕನಿಷ್ಠ ಪ್ರಯಾಣದರ 1.9 ಕಿ. ಮೀ. ಗೆ 20 ರಿಂದ 25 ರೂ.ಗಳಿಗೆ ಏರಿಕೆ ಮಾಡಿತ್ತು. 2019ರಲ್ಲಿ ಇಂಧನ ದರ ಹೆಚ್ಚಾದಾಗ ಪ್ರಯಾಣ ದರ ಏರಿಕೆಗೆ ಅನುಮತಿ ಕೇಳಲಾಗಿತ್ತು. ಆದರೆ, ಒಪ್ಪಿಗೆ ಸಿಕ್ಕಿರಲಿಲ್ಲ.

Bengaluru Auto Drivers Seeks Base Fare Hike

ಆಟೋ ರಿಕ್ಷಾ ಡ್ರೈವರ್ ಯೂನಿಯನ್ ಕನಿಷ್ಠ ಪ್ರಯಾಣ ದರವನ್ನು 36 ರೂ.ಗಳಿಗೆ ಏರಿಕೆ ಮಾಡಬೇಕು. ಬಳಿಕ ಪ್ರತಿ ಕಿ. ಮೀ.ಗೆ 18 ರೂ. ದರವನ್ನು ನಿಗದಿ ಮಾಡಬೇಕು ಎಂದು ಪತ್ರವನ್ನು ಬರೆದಿದೆ. ಆದರೆ, ಕೋವಿಡ್ ಪರಿಸ್ಥಿತಿಯಲ್ಲಿ ಜನರು ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ? ಎಂಬುದು ಪ್ರಶ್ನೆಯಾಗಿದೆ.

ಬೆಂಗಳೂರು ನಗರದಲ್ಲಿ ಸುಮಾರು 2 ಲಕ್ಷ ಆಟೋ ಡ್ರೈವರ್‌ಗಳಿದ್ದಾರೆ. ಆಟೋಗಳಿಗೆ ಗ್ಯಾಸ್ ಬಳಕೆ ಮಾಡುತ್ತಿದ್ದು, ಗ್ಯಾಸ್ ದರವೂ ಹಲವು ಬಾರಿ ಏರಿಕೆಯಾಗಿದೆ. ಆಟೋಗಳ ನಿರ್ವಹಣೆ ವೆಚ್ಚವೂ ಅಧಿಕವಾಗಿದೆ. ಆದ್ದರಿಂದ, ದರ ಏರಿಕೆಗೆ ಅನುಮತಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳಿಂದ ಆಟೋ ಚಾಲಕರಿಗೆ ನಷ್ಟವಾಗುತ್ತಿದೆ. ಆದರೆ, ಕನಿಷ್ಠ ಪ್ರಯಾಣ ದರವನ್ನು 36 ರೂ.ಗಳಿಗೆ ಏರಿಕೆ ಮಾಡಲು ಸಾರಿಗೆ ಇಲಾಖೆ ಒಪ್ಪಿಗೆ ನೀಡಲಿದೆಯೇ? ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+