ಕೆಎಸ್‌ಆರ್‌ಟಿಸಿ ಗುಜರಿ ಬಸ್‌ ಈಗ ಸುಸಜ್ಜಿತ 'ಸ್ತ್ರೀ ಶೌಚಾಲಯ'

ಬೆಂಗಳೂರು, ಆಗಸ್ಟ್ 27: ಕೆ‌ಎಸ್ಆರ್‌ಟಿಸಿ‌ಯ ಅನುಪಯುಕ್ತ ಬಸ್‌ ಬಳಕೆ ಮಾಡಿ ಬಳಸಿಕೊಂಡು ನಿರ್ಮಾಣ ಮಾಡಿರುವ ಸುಸಜ್ಜಿತ "ಸ್ತ್ರೀ ‌ಶೌಚಾಲಯ"ವನ್ನು ಇಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಲೋಕಾರ್ಪಣೆ ಮಾಡಿದರು.

Recommended Video

      ಇವರು ಬಂದ್ರೆ ಎದುರಾಳಿ ಕಥೆ ಫಿನಿಷ್ | Oneindia Kannada

      ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಈ ಶೌಚಾಲಯವನ್ನು ನಿರ್ಮಿಸಲಾಗಿದೆ. ಶೌಚಾಲಯ ನಿರ್ಮಾಣಕ್ಕೆ 12 ಲಕ್ಷ ರೂ.ವೆಚ್ಚವಾಗಿದೆ. ಮಹಿಳಾ ಸ್ವಾಸ್ಥ್ಯ ಸಮಾಜ ನಿಗಮದ ಕಾಳಜಿಯಾಗಿದೆ. ದೇಶದ ರಸ್ತೆ ಸಾರಿಗೆ ನಿಗಮಗಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಾಲಯವನ್ನು ಅನುಪಯುಕ್ತ‌ ಬಸ್ಸಿನಲ್ಲಿ ‌ನಿರ್ಮಿಸಲಾಗಿದೆ.

      ನಿಗಮವು ಹಲವು ಮಹಿಳಾ ಸ್ನೇಹಿ‌ ಉಪಕ್ರಮಗಳನ್ನು ಜಾರಿಗೆ ತಂದಿದೆ. ಬಸ್ ನಿಲ್ದಾಣ ಹಾಗೂ ಬಸ್ಸುಗಳನ್ನು ಮಹಿಳಾ ಸ್ನೇಹಿಯಾಗಿಸುವ ನಿಟ್ಟಿನಲ್ಲಿನ ನಮ್ಮ‌ ಪ್ರಯತ್ನವು ನಿರಂತರವಾಗಿ ಮುಂದುವರೆದಿದೆ ಎಂದು ಲಕ್ಷ್ಮಣ ಸವದಿ ತಿಳಿಸಿದರು.

      Bengaluru Airport Converts Scrap KSRTC Bus Into Ladies Toilet Under CSR Initiative

      ಇದು ಕೆಎಸ್‌ಆರ್‌ಟಿಸಿಯ ಸ್ವಚ್ಛತೆ ಯತ್ತ ಮತ್ತೊಂದು‌ ಹೆಜ್ಜೆಯಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ‌ ಪ್ರಾಧಿಕಾರಈ ಶೌಚಾಲಯದ ವೆಚ್ಚವನ್ನು ಸಾಮಾಜಿಕ ಕಳಕಳಿ ( ಸಿಎಸ್‌ಆರ್ ) ಯೋಜನೆಯಡಿ ನೀಡಿದೆ.

      ಈ ಶೌಚಾಲಯದಲ್ಲಿ ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ‌ ನ್ಯಾಪಕಿನ್ ವೆಂಡಿಂಗ್ ಯಂತ್ರ, ಇನ್ಸಿನಿರೇಟರ್, ಮಗುವಿನ ಡೈಪರ್ ಬದಲಿಸುವ ಸ್ಥಳ, ಭಾರತೀಯ ಮತ್ತು ಪಾಶ್ಚಾತ್ಯ ಶೌಚಾಲಯಗಳು, ವಾಷ್ ಬೇಸಿನ್ ಗಳು, ‌ಸೆನ್ಸಾರ್ ದೀಪಗಳು, ಸಂಪೂರ್ಣ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ ಎಂದು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+