Bengaluru: ಬೈಕ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್‌ಗೆ 500 ರೂ. ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು, AI ಕ್ಯಾಮೆರಾ ಎಡವಟ್ಟು!

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಬ್ರೇಕ್ ಹಾಕಲು ಮತ್ತು ದಂಡ ವಿಧಿಸಲು ಸಂಚಾರ ಪೊಲೀಸ್ ಇಲಾಖೆಯು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಕ್ಯಾಮೆರಾಗಳನ್ನ ಅಳವಡಿಸಿದೆ. ಆದರೆ, ಕೆಲವು ಬಾರಿ ಈ ಯಂತ್ರಗಳು ಮಾಡುವ ಎಡವಟ್ಟುಗಳು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದರ ಜೊತೆಗೆ ಪೊಲೀಸ್ ಇಲಾಖೆಗೆ ತೀವ್ರ ಮುಜುಗರ ತರುವಂತಹ ಘಟನೆಗಳಿಗೆ ಕಾರಣವಾಗುತ್ತವೆ.

ಇದೀಗ ಬೆಂಗಳೂರಿನ ಹೆಬ್ಬಾಳದಲ್ಲಿ ಇಂತಹದ್ದೇ ಒಂದು ವಿಚಿತ್ರ ಘಟನೆ ನಡೆದಿದೆ ನೋಡಿ. ಬೈಕ್ ಸವಾರನ ಬೆನ್ನಿನಲ್ಲಿದ್ದ ಗಿಟಾರ್‌ ಅನ್ನ ಹಿಂಬದಿ ಸವಾರ ಎಂದು ಭಾವಿಸಿದ ಎಐ ಕ್ಯಾಮೆರಾ, ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಬರೋಬ್ಬರಿ 500 ರೂಪಾಯಿ ದಂಡ ವಿಧಿಸಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣ ವಾಗಿದೆ.

Bengaluru AI Camera Mistakes Guitar For Pillion Rider Issues 500 Rupees Traffic Fine To Biker

ಬೆಂಗಳೂರಿನ ಹೆಬ್ಬಾಳದಲ್ಲಿ ಎಐ ಕ್ಯಾಮೆರಾ ಎಡವಟ್ಟು

ಸೌವಿಕ್ ದತ್ತ ಎಂಬುವವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೆಬ್ಬಾಳ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ತಮ್ಮ ಬೆನ್ನಿಗೆ ಒಂದು ಗಿಟಾರ್ ಅನ್ನು ನೇತು ಹಾಕಿಕೊಂಡಿದ್ದರು. ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಜಂಕ್ಷನ್‌ನಲ್ಲಿದ್ದ ಅತ್ಯಾಧುನಿಕ ಎಐ ಟ್ರಾಫಿಕ್ ಕ್ಯಾಮೆರಾ ಅವರ ಫೋಟೋವನ್ನ ಸೆರೆಹಿಡಿದಿದೆ.

ಆದರೆ, ಕ್ಯಾಮೆರಾದ ತಂತ್ರಾಂಶವು ಬೆನ್ನಿಗೆ ಕಟ್ಟಿದ್ದ ಗಿಟಾರ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಅರ್ಥೈಸಿಕೊಂಡಿದೆ. ಗಿಟಾರ್‌ಗೆ ಹೆಲ್ಮೆಟ್ ಇಲ್ಲದ ಕಾರಣ , ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ನಿಯಮ ಉಲ್ಲಂಘನೆಯ ಅಡಿಯಲ್ಲಿ ವ್ಯವಸ್ಥೆಯು ಸ್ವಯಂಚಾಲಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಗಿಟಾರ್‌ಗೆ ಟ್ರಾಫಿಕ್ ಫೈನ್: ಸಂಚಾರ ನಿರ್ವಹಣಾ ಕೇಂದ್ರದ ನೋಟಿಸ್

ಕ್ಯಾಮೆರಾ ಸೆರೆಹಿಡಿದ ಚಿತ್ರದ ಆಧಾರದ ಮೇಲೆ ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರದಿಂದ ಸೌವಿಕ್ ದತ್ತ ಅವರ ಮೊಬೈಲ್ ಸಂಖ್ಯೆಗೆ ದಂಡದ ನೋಟಿಸ್ ರವಾನೆಯಾಗಿದೆ. ಹಿಂಬದಿ ಸವಾರ ಹೆಲ್ಮೆಟ್ ಹಾಕದ ಕಾರಣಕ್ಕಾಗಿ 500 ರೂ. ದಂಡ ಪಾವತಿಸುವಂತೆ ಆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಫೈನ್‌ ಮೇಸೆಜ್‌ ನೋಡಿ ಅಚ್ಚರಿಗೊಳಗಾದ ಸೌವಿಕ್ ದತ್ತ ಅವರು, ಫೋಟೋ ಪರಿಶೀಲಿಸಿದಾಗ ಕೃತಕ ಬುದ್ಧಿಮತ್ತೆ ಕ್ಯಾಮೆರಾ ಮಾಡಿರುವ ಎಡವಟ್ಟು ಬೆಳಕಿಗೆ ಬಂದಿದೆ. ತಾವು ಒಬ್ಬರೇ ಪ್ರಯಾಣಿಸುತ್ತಿದ್ದರೂ , ಬೆನ್ನಿನಲ್ಲಿದ್ದ ಗಿಟಾರ್‌ಗೆ ದಂಡ ವಿಧಿಸಿರುವುದು ಅವರ ಅಚ್ಚರಿಗೆ ಕಾರಣವಾಗಿದೆ.

ಫೋಟೋ ವೈರಲ್ ಮತ್ತು ಸಂಚಾರ ಪೊಲೀಸರಿಗೆ ಮುಜುಗರ

ಬೈಕ್ ಸವಾರ ಸೌವಿಕ್ ದತ್ತ ಅವರು ಗಿಟಾರ್ ಸಮೇತ ಬೈಕ್ ಚಲಾಯಿಸುತ್ತಿರುವ ಮತ್ತು ಅದಕ್ಕೆ 500 ರೂಪಾಯಿ ದಂಡ ವಿಧಿಸಿರುವ ನೋಟಿಸ್‌ನ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ನೆಟ್ಟಿಗರು ಟ್ರಾಫಿಕ್ ಪೊಲೀಸರ 'ಸ್ಮಾರ್ಟ್' ಕ್ಯಾಮೆರಾದ ಕಾರ್ಯವೈಖರಿಯನ್ನ ಟ್ರೋಲ್ ಮಾಡುತ್ತಿದ್ದಾರೆ.

"ಗಿಟಾರ್‌ಗೂ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆಯೇ?" ಎಂದು ವ್ಯಂಗ್ಯವಾಡುತ್ತಿದ್ದಾರೆ. ಈ ಘಟನೆಯಿಂದಾಗಿ ಸಂಚಾರ ಪೊಲೀಸ್ ಇಲಾಖೆ ತೀವ್ರ ಮುಜುಗರಕ್ಕೀಡಾಗಿದೆ. ಈ ತಾಂತ್ರಿಕ ದೋಷದ ಬಗ್ಗೆ ಮತ್ತು ದಂಡ ರದ್ದುಪಡಿಸುವ ಕುರಿತು ಪ್ರತಿಕ್ರಿಯೆ ನೀಡಲು ಹೆಬ್ಬಾಳ ಸಂಚಾರ ಪೊಲೀಸರು ನಿರಾಕರಿಸಿದ್ದಾರೆ ಎನ್ನಲಾಗಿದೆ.

ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಅದರಲ್ಲಿ ಮಾನವನ ಹಸ್ತಕ್ಷೇಪ ಮತ್ತು ಪರಿಶೀಲನೆ ಅತ್ಯಗತ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ಎಐ ಕ್ಯಾಮೆರಾಗಳು ಸ್ವಯಂಚಾಲಿತವಾಗಿ ದಂಡ ವಿಧಿಸುವ ಮುನ್ನ, ಕನಿಷ್ಠ ಪರಿಶೀಲನೆ ನಡೆಸುವಂತಹ ವ್ಯವಸ್ಥೆಯನ್ನ ಪೊಲೀಸ್ ಇಲಾಖೆ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+