ಬೆಂಗಳೂರಿನಲ್ಲಿ 570 ಹೊಸ ಕಂಟೈನ್‌ಮೆಂಟ್ ಜೋನ್ ಸೇರ್ಪಡೆ

ಬೆಂಗಳೂರು, ಆಗಸ್ಟ್ 1: ಶುಕ್ರವಾರ ಬೆಂಗಳೂರಿನಲ್ಲಿ ಹೊಸದಾಗಿ 570 ಕಂಟೈನ್‌ಮೆಂಟ್ ಜೋನ್ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸಕ್ರಿಯ ಧಾರಕ ವಲಯಗಳ ಸಂಖ್ಯೆ 13,238ಕ್ಕೆ ಏರಿದೆ. ಇದುವರೆಗೂ ಬೆಂಗಳೂರಿನಲ್ಲಿ 20,679 ಕಂಟೈನ್ ಮೆಂಟ್‌ ಜೋನ್‌ಗಳನ್ನು ಗುರುತಿಸಲಾಗಿದೆ.

Recommended Video

      ಗೃಹ ಮಂತ್ರಿಗೆ ಕೊರೋನ, ಯಾರನ್ನು ಬಿಡದ ಕೋರೋನ.!! | Oneindia Kannada

      ಶುಕ್ರವಾರ ಬೆಂಗಳೂರಿನಲ್ಲಿ 2,220 ಮಂದಿಗೆ ಕೊವಿಡ್ ತಗುಲಿರುವುದು ದೃಢವಾಗಿತ್ತು. ಕರ್ನಾಟಕದಲ್ಲಿ ಒಟ್ಟು ಪ್ರಕರಣಗಳ ಪೈಕಿ ಶೇಕಡಾ 40ರಷ್ಟು ಕೇಸ್ ಬೆಂಗಳೂರಿನಲ್ಲಿಯೇ ವರದಿಯಾಗಿತ್ತು.

      ಬೆಂಗಳೂರು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಸಕ್ರಿಯ ಮತ್ತು ಒಟ್ಟು ಕಂಟೈನ್ ಮೆಂಟ್ ವಲಯಗಳನ್ನು ಹೊಂದಿದೆ. ನಂತರ ಕ್ರಮವಾಗಿ ಪೂರ್ವ ವಲಯ, ಪಶ್ಚಿಮ ವಲಯ, ಬೊಮ್ಮನಹಳ್ಳಿ, ಆರ್.ಆರ್.ನಗರ, ಮಹಾದೇವಪುರ, ಯಲಹಂಕ ಮತ್ತು ದಾಸರಹಳ್ಳಿಯಲ್ಲಿ ಹೆಚ್ಚು ಕಂಟೈನ್ ಮೆಂಟ್ ವಲಯ ಇದೆ.

      Bengaluru Adds 570 New Containment Zones

      ಶುಕ್ರವಾರದ ಪ್ರಕರಣಗಳ ಪೈಕಿ 20 ರಿಂದ 29 ವರ್ಷದೊಳಗಿನ ವ್ಯಕ್ತಿಗಳಿಗೆ ಹೆಚ್ಚು ಸೋಂಕು ತಗುಲಿದೆ. 301 ಪುರುಷರು ಮತ್ತು 195 ಮಹಿಳೆಯರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದಕ್ಕೂ ಮುಂಚೆ ಜುಲೈ 25ರಂದು ಈ ವಯೋಮಾನದವರಲ್ಲಿ ಹೆಚ್ಚಿನ ಹೊಸ ಪ್ರಕರಣಗಳು ವರದಿಯಾಗಿವೆ.

      ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಶುಕ್ರವಾರ ರಾಜ್ಯದಲ್ಲಿ 5483 ಹೊಸ ಕೇಸ್ ವರದಿಯಾಗಿತ್ತು. ಸತತ ನಾಲ್ಕನೇ ದಿನ 5,000ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ವರದಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+