NDA Meeting: ಇದು ಡೋಂಗಿ ಬಾಬಾ ಮತ್ತು 38 ಕಳ್ಳರ ಗ್ಯಾಂಗ್: ಎಎಪಿ ಲೇವಡಿ

ಬೆಂಗಳೂರು, ಜುಲೈ 19: ಮುಂಬರಲಿರುವ 2024ರ ಲೋಕಸಭಾ ಚುನಾವಣೆ ಸಂಬಂಧ ಪ್ರಧಾನಿ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸಭೆ ನಡೆಯಿತು. ಇದಕ್ಕೆ ಆಮ್ ಆದ್ಮಿ ಪಕ್ಷವು (AAP) ಪ್ರಧಾನಿಗೆ 'ಢೋಂಗಿ ಬಾಬಾ ಮತ್ತು 38 ಕಳ್ಳರ ಗುಂಪು'' ಎಂದು ಟೀಕಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಆಮ್ ಆದ್ಮಿ ಪಕ್ಷದ ಬೆಂಗಳೂರು ಟ್ವಿಟ್ಟರ್ ಹ್ಯಾಂಡ್‌ನಲ್ಲಿ ಪ್ರಧಾನಿಯನ್ನು ವ್ಯಂಗ್ಯವಾಗಿ ಎಡಿಟ್ ಮಾಡಿ ಫೋಟೋ ಪೋಸ್ಟ್ ಮಾಡಲಾಗಿದೆ. ಅದರಲ್ಲಿ ನೀವು ಆಲಿಬಾಬ ಮತ್ತು ನಲ್ವತ್ತು ಕಳ್ಳರ ಕತೆ ಕೇಳಿರಬಹುದು. ಅವರಂತೆ ಇದು ಢೋಂಗಿ ಬಾಬ ಮತ್ತು 38 ಕಳ್ಳರ ಗುಂಪು ಎಂದು ಪ್ರಧಾನಿ ನೇತೃತ್ವದಲ್ಲಿ ನಡೆದ ಸಭೆಯನ್ನು ಉಲ್ಲೇಖಿಸಿದೆ.

Bengaluru AAP Hits Back To PM Narendra Modi and NDA Meeting

ಎನ್‌ಡಿಎ ನಿಂದ ನಡೆದ ಸಭೆಯ ಗುಂಪು ಎಷ್ಟೋ ಜನ ತಮ್ಮ ಪಕ್ಷಕ್ಕೆ ಚೂರಿ ಹಾಕಿದವರು ಇದ್ದಾರೆ. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆ (ಐಟಿ) ಭಯದಿಂದ ಬಂದವರು ಇದ್ದಾರೆ. ಪ್ರತ್ಯೇಕ ದೇಶಕ್ಕೆ ಬೇಡಿಕೆ ಇಟ್ಟುಕೊಂಡೇ ಪಕ್ಷ ಮಾಡಿಕೊಂಡಿರುವ ತುಕುಡೆ-ತುಕುಡೆ ಗ್ಯಾಂಗಿನವರಿದ್ದಾರೆ ಎಂದು ಎಎಪಿ ಲೇವಡಿ ಮಾಡಿದೆ.

ದೊಡ್ಡ ಭ್ರಷ್ಟರನ್ನು ಕ್ಲೀನ್ ಮಾಡುವ ಬಿಜೆಪಿ

ಅಧಿಕಾರ ಇರುತ್ತದೋ ಅಲ್ಲಿಗೆ ಹೋಗುವ ಗಂಜಿ ಗಿರಾಕಿಗಳಿದ್ದಾರೆ. ನಿನ್ನೆ ತನಕ ಕಳ್ಳರಾಗಿದ್ದವರು ಇಂದು ಮಳ್ಳರಾಗಿದ್ದಾರೆ.

ಎಷ್ಟು ದೊಡ್ಡ ಭ್ರಷ್ಟ ಇದ್ದರೂ ಅವರನ್ನು ಕೇಂದ್ರ ಬಿಜೆಪಿ ಪಕ್ಷ ತನ್ನ ಜೊತೆ ಸೇರಿದ ಕೂಡಲೇ ಕ್ಲೀನ್ ಮಾಡಿಕೊಡುತ್ತದೆ ಎಂದು ಆರೋಪಿಸಿದೆ.

ಟ್ವೀಟ್‌ನಲ್ಲಿ ಎನ್‌ಡಿಎಗೆ ಸ್ವಾಗತ ಎಂದು ಹೇಳಿರುವ ಆಮ್ ಆದ್ಮಿ ಪಕ್ಷ, NDA ಎಂದರೆ 'ನರೇಂದ್ರ ಡಮ್ಮಿ ಆಫ್ ಅಂಬಾನಿ ಮತ್ತು ಅದಾನಿ' ಎಂದು ವ್ಯಾಖ್ಯಾನಿಸಿದೆ. INDIA vs NDA ಹ್ಯಾಷ್ ಟ್ಯಾಗ್ ಹಾಕಿದೆ. ಈ ಮೂಲಕ ಬೆಂಗಳೂರಿನಲ್ಲಿ ನಡೆದ ವಿರೋಧ ಪಕ್ಷಗಳ ಸಭೆ ವಿರುದ್ಧ ಮಾತನಾಡಿದ್ದ ಬಿಜೆಪಿ ನಾಯಕರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಎಎಪಿ ತಿರುಗೇಟು ನೀಡಿದೆ.

Bengaluru AAP Hits Back To PM Narendra Modi and NDA Meeting

ಆಡಳಿತ-ವಿಪಕ್ಷಗಳಿಂದ ಸಭೆ

ಮುಂಬರಲಿರುವ 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಆಡಳಿತದಿಂದ ಬಿಜೆಪಿಯನ್ನು ದೂರವಿಡಲು ವಿರೋಧ ಪಕ್ಷಗಳು ಸಜ್ಜಾಗಿವೆ. ಈ ಸಂಬಂಧ ಬೆಂಗಳೂರಿನಲ್ಲಿ ಸೋಮವಾರ ಮತ್ತು ಮಂಗಳವಾರ ಎರಡು ದಿನ ಸಭೆ ನಡೆಸಿದವು. ಕಾಂಗ್ರೆಸ್ ಸಭೆಯ ನೇತೃತ್ವ ವಹಿಸಿತ್ತು. 24 ಪಕ್ಷಗಳು ಪಾಲ್ಗೊಂಡಿದ್ದವು.

ಇದಕ್ಕೆ ಪ್ರತಿಯಾಗಿ ಪ್ರಧಾನಮಂತ್ರಿ ಮಂತ್ರಿ ಮೋದಿ ಅವರು ಮಿತ್ರ ಪಕ್ಷಗಳ ಜೊತೆಗೆ ದೆಹಲಿಯಲ್ಲಿ ಮಹತ್ವದ ಸಭೆ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿ ಎದುರಾಳಿ ಪಕ್ಷಗಳಿಗೆ ಟಕ್ಕರ್ ಕೊಟ್ಟರು. ಬಿಜೆಪಿ ಸುಮಾರು 30ಕ್ಕೂ ಹೆಚ್ಚು ಪಕ್ಷಗಳು ಸಭೆಯಲ್ಲಿದ್ದವು. ಈ ಎನ್‌ಡಿಎ ಮೈತ್ರಿ ಕೂಟಗಳಿಗೆ ಎಎಪಿ ಪ್ರಧಾನಿ ಮೋದಿ ಫೋಟೊ ಟ್ವೀಟ್ ಮಾಡಿ ಲೇವಡಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+