ರಾಜಕಾಲುವೆಗೆ ಬಿದ್ದು 7 ವರ್ಷದ ಬಾಲಕ ಸಾವು
ಶೌಚಕ್ಕೆಂದು ಹೋಗಿದ್ದ ಕಲಬುರಗಿ ಮೂಲದ ಕೂಲಿ ಕಾರ್ಮಿಕ ಭೀಮಪ್ಪ ಮತ್ತು ನಾಗಮ್ಮ ದಂಪತಿ ಪುತ್ರ ರಾಕೇಶ್ ಆಯ ತಪ್ಪಿ ರಾಜಕಾಲುವೆಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ನಾಗದೇವನಹಳ್ಳಿ ಶಾನುಭೋಗ ಬಡಾವಣೆಯಲ್ಲಿ ನಡೆದಿದೆ.
ಬೆಂಗಳೂರು, ಮಾರ್ಚ್ 2: ರಾಜ ಕಾಲುವೆಗೆ ಬಿದ್ದು 7 ವರ್ಷದ ಬಾಲಕ ಮೃತಪಟ್ಟಿರುವ ದುರಂತ ಘಟನೆ ಬೆಂಗಳೂರಿನ ನಾಗದೇವನಹಳ್ಳಿ ಶಾನುಭೋಗ ಬಡಾವಣೆಯಲ್ಲಿ ನಡೆದಿದೆ.
ಬುಧವಾರ ಶೌಚಕ್ಕೆಂದು ಹೋಗಿದ್ದ ಕಲಬುರಗಿ ಮೂಲದ ಕೂಲಿ ಕಾರ್ಮಿಕ ಭೀಮಪ್ಪ ಮತ್ತು ನಾಗಮ್ಮ ದಂಪತಿ ಪುತ್ರ ರಾಕೇಶ್ ಆಯ ತಪ್ಪಿ ರಾಜಕಾಲುವೆಗೆ ಬಿದ್ದು ಮೃತಪಟ್ಟಿದ್ದಾನೆ.[ದರೋಡೆಗೆ ಹೊಂಚು ಹಾಕುತ್ತಿದ್ದ ರೌಡಿ ಶೀಟರ್ ಮೇಲೆ ಫೈರಿಂಗ್]
ಬುಧವಾರ ಸಂಜೆ 5 ಗಂಟೆ ವೇಳೆಗೆ ರಾಜಕಾಲುವೆ ಕಾಂಕ್ರೀಟ್ ಮೇಲೆ ರಾಕೇಶ್ ಶೌಚಕ್ಕೆ ಕುಳಿತಿದ್ದ. ಈ ವೇಳೆ ಆಯತಪ್ಪಿ ಹಿಂದಕ್ಕೆ ಬಿದ್ದಿದ್ದಾನೆ. ಶೌಚಕ್ಕೆ ಹೋಗಿದ್ದ ಮಗ ಬಹಳ ಹೊತ್ತಾದರೂ ಬರದ ಹಿನ್ನಲೆಯಲ್ಲಿ ತಂದೆ ತಾಯಿ ಹುಡುಕಿಕೊಂಡು ಹೊರಟಾಗ ಮಗ ಕೊಂಡೊಯ್ದಿದ್ದ ಚೆಂಬು ಪತ್ತೆಯಾಗಿದೆ.

ಇದರಿಂದ ಸ್ಥಳದಲ್ಲಿ ಏನೋ ಅವಘಡ ನಡೆದಿದೆ ಎಂದು ಜೆಸಿಬಿ ತಂದು ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕ ಪತ್ತೆಯಾಗದ ಹಿನ್ನಲೆಯಲ್ಲಿ ಸಂಜೆ 6.30ರ ಸುಮಾರಿಗೆ ಅಗ್ನಿಶಾಮಕದಳದವರಿಗೆ ಕರೆ ಮಾಡಿ ಕರೆಸಿಕೊಳ್ಳಲಾಗಿದೆ.[ಕಮ್ಮನಹಳ್ಳಿ ಪ್ರಕರಣದ ಆರೋಪಿಗಳನ್ನು ಗುರುತಿಸಿದ ಸಂತ್ರಸ್ತೆ]
ಅಗ್ನಿಶಾಮಕದಳದವರು ಬಂದು ಹುಡುಕಾಟ ನಡೆಸಿದಾಗ ಬಿದ್ದ ಜಾಗದಲ್ಲೇ ಹೆಣ ಪತ್ತೆಯಾಗಿತ್ತು. ಸುಮಾರು 10 ಅಡಿ ಆಳವಿದ್ದ ರಾಜಕಾಲುವೆಯಲ್ಲಿ ಕೆಸರು ತುಂಬಿಕೊಂಡಿತ್ತು. ಕಾಲುವೆಗೆ ಬಿದ್ದಿದ್ದ ಬಾಲಕ ರಾಕೇಶ್ ಕೆಸರು ನೀರು ಕುಡಿದು ಸಾವನ್ನಪ್ಪಿದ್ದಾನೆ.
ಮೃತ ರಾಕೇಶ್ ಕುಟುಂಬಕ್ಕೆ ಬಿಬಿಎಂಪಿ ವತಿಯಿಂದ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮೇಯರ್ ಹೇಳಿದ್ದಾರೆ. ಇನ್ನು ಬಡ ಕೂಲಿ ಕಾರ್ಮಿಕನ ಕುಟುಂಬಕ್ಕೆ ಮನೆ ನಿರ್ಮಣ ಮಾಡಿಕೊಡಲಾಗುವುದು ಎಂದು ಶಾಸಕ ಮುನಿರತ್ನ ಭರವಸೆ ನಿಡಿದ್ದಾರೆ.
ಬಿಬಿಎಂಪಿ ಮತ್ತು ಬಡಿಎ ನಡುವಿನ ಸಮನ್ವಯ ಕೊರತೆಯಿಂದ ದುಬಾಸಿ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ ಕಾಮಗಾರಿ ಅರ್ಧಕ್ಕೆ ನಿಂತಿದೆ.ಹೀಗಾಗಿ ಕೊಳಚೆ ನೀರು ಹರಿದು ಹೋಈಗದೆ ಹೂಳು ತುಇಂಬಿಕೊಂಡಿತ್ತು. ಇದೇ ಹೂಲೀನಲ್ಲಿ ರಾಕೇಶ್ ಬಿದ್ದು ಮೃತಪಟ್ಟಿದ್ದಾನೆ.












Click it and Unblock the Notifications