BBMP Property Tax: ಆಸ್ತಿ ತೆರಿಗೆ ದಂಡ ಮೇಲೆ ಶೇ.50 ಕಡಿತ ನಿರ್ಧಾರಕ್ಕೆ ಜನರ ಮಿಶ್ರ ಪ್ರತಿಕ್ರಿಯೆ
ಬೆಂಗಳೂರು, ಫೆಬ್ರವರಿ 21: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ನಿವಾಸಿಗಳಿಗೆ ಆಸ್ತಿ ತೆರಿಗೆ ಬಾಕಿ ಮೇಲಿನ ದಂಡವನ್ನು ಅರ್ಧದಷ್ಟು ಇಳಿಕೆ ಮಾಡಲಾಗಿದೆ. ಇದಕ್ಕೆ ಖುಷಿ ಪಡೆಬೇಕಿರುವ ನಿವಾಸಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ,
ಆಸ್ತಿ ತೆರಿಗೆ ಬಾಕಿ ಮೇಲಿನ ದಂಡವನ್ನು ಸರ್ಕಾರ ಶೇಕಡಾ 50 ರಷ್ಟು ಕಡಿತಗೊಳಿಸಿ, ಅರ್ಧ ದಂಡ ಮಾತ್ರವೇ ಸಂಗ್ರಹಿಸಲು ನಿರ್ಧರಿಸಲಾಗಿತ್ತು. ಸರ್ಕಾರದ ಈ ನಿರ್ಧಾರವನ್ನು ಎಲ್ಲರು ಸ್ವಾಗತಿಸಿಲ್ಲ ಎನ್ನಲಾಗಿದೆ. ಕೆಲವು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಇದು ಜನರಿಗೆ ಸಹಾಯಕಾರಿಯಾಗಿದ್ದು, ಸರ್ಕಾರಕ್ಕೆ ಆದಾಯವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉತ್ತಮ ಆದಾಯ ಸಂಗ್ರಹಕ್ಕೆ ಇದು ಪೂರಕ
ಬಾಕಿ ಹಾಣ ಪಾವತಿ ಸಂಗ್ರಹ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅಲ್ಲದೇ ಇಂತಹ ನಿರ್ಧಾರಗಳಿಂದ ಜನರಿಗೆ ಸ್ವಲ್ಪ ಪರಿಹಾರವನ್ನು ಸಿಕ್ಕಂತಾಗುತ್ತದೆ. ಇದು ಸರ್ಕಾರಕ್ಕೆ ಉತ್ತಮ ಆದಾಯವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಸರ್ಕಾರವು ಸಂಗ್ರಹಿಸಲು ಸಾಧ್ಯವಾದಾಗ ಸಂಚಾರ ಟ್ರಾಫಿಕ್ ನಿಮಯ ಉಲ್ಲಂಘನೆ ಮೇಲಿನ ಶೇಕಡಾ 50 ರಷ್ಟು ರಿಯಾಯಿತಿಗೆ ಈ ಹಿಂದೆ ನೋಡಿದ್ದೇವೆ.
ಇಂತಹ ನಿರ್ಧಾರಗಳು ಆಶಾದಾಯಕವಾಗಿವೆ. ಈ ಪ್ರೋತ್ಸಾಹವು ಸಹ ಉತ್ತಮ ಪ್ರತಿಕ್ರಿಯೆ ಗಳಿಸುತ್ತದೆ ಎಂದು ನಾಗರಿಕ ಕಾರ್ಯಕರ್ತರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಪೌರಕಾರ್ಮಿಕರೊಬ್ಬರು ಆಸ್ತಿ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಸುಧಾರಣೆಗಳನ್ನು ಪರಿಚಯಿಸುವುದು ನಿರ್ಣಾಯಕ ಎಂದು ತಿಳಿಸಿದರು.

ಆಸ್ತಿ ತೆರಿಗೆಯೇ ಬಿಬಿಎಂಪಿಗೆ ಆದಾಯ ಮೂಲ
ಬೆಂಗಳೂರು ವಾಸಿಗಳ ಆಸ್ತಿ ತೆರಿಗೆಯು ಬಿಬಿಎಂಪಿಗೆ ಏಕೈಕ ಬೃಹತ್ ಆದಾಯದ ಮೂಲ ಎನ್ನಬಹುದು. ಅಲ್ಲದೇ ಈ ಪ್ರಕ್ರಿಯೆಯನ್ನು ಸರಳಗೊಳಿಸುವ ಮತ್ತು ಸೂಕ್ತ ರೀತಿಯಲ್ಲಿ ತೆರಿಗೆ ಬಾಕಿ ಹಣ ಸಂಗ್ರಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಅರ್ಧದಷ್ಟು ಕಡಿತದ ಕ್ರಮ ಸರಿಯಾಗಿದೆ ಎಂದು ಎಂದರು.
ಸರ್ಕಾರದ ಇಂತಹ ಕ್ರಮವು ಶ್ರದ್ಧೆಯಿಂದ ತೆರಿಗೆ ಪಾವತಿಸಿದ ಮುಗ್ಧ ತೆರಿಗೆದಾರರ ಉತ್ಸಾಹ ಕಸಿದುಕೊಳ್ಳಬಹುದು. ಏಕೆಂದರೆ ಅವರು ಇನ್ನು ಸ್ವಲ್ಪದಿನ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ, ನಮಗೂ ಅರ್ಧದಷ್ಟು ಹಣ ಉಳಿಯುತ್ತಿತ್ತು ಎಂದುಕೊಳ್ಳಬಹುದು ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತೆರಿಗೆದಾರರಿಗೂ ಮಸೂದೆಯಿಂದ ಅನುಕೂಲ
ಅಲ್ಲದೇ ರಾಜ್ಯ ಸರ್ಕಾರ ಮಂಗಳವಾರವಷ್ಟೇ ತೆರಿಗೆ ಮೇಲಿನ ದಂಡ ಕಡಿತದ ಮಸೂದೆಯನ್ನು ಅಂಗೀಕರಿಸಿದೆ. ಇದು ತೆರಿಗೆದಾರರ ಸ್ನೇಹಿ ತಿದ್ದುಪಡಿಯಾಗಿದ್ದು, ಸುಸ್ತಿದಾರರ ಮೇಲಿನ ದಂಡವನ್ನು ತೆಗೆದು ಹಾಕುವುದಿಲ್ಲ. ಬಿಬಿಎಂಪಿಯು ಸುಸ್ತಿದಾರರಿಗೆ ದಂಡ ವಿಧಿಸುವುದನ್ನು ಮತ್ತು ಅಮಾಯಕ ನಾಗರಿಕರಿಗೆ ಕಿರುಕುಳ ನೀಡದಂತೆ ಖಾತ್ರಿಪಡಿಸುವ ಸರಿಯಾದ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ ಎಂಬ ನಂಬಲಾಗಿದೆ.
ಆಸ್ತಿ ತೆರಿಗೆ ಪಾವತಿಸದ ನಗರವಾಸಿಗಳಿಗೆ ಬಬಿಬಿಎಂಪಿ ಅಧಿಕಾರಿಗಳು ನೋಟಿಸ್ ಕಳುಹಿಸುವ ಮೂಲಕ ನಾಗರಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ತಪ್ಪು ಸ್ವಯಂ ಮೌಲ್ಯಮಾಪನ ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಆಸ್ತಿ ಬಳಕೆ ಆಗುತ್ತಿದೆ. ಇಂತಹ ಕಿರುಕುಳದಿಂದ ನಾಗರಿಕರನ್ನು ರಕ್ಷಿಸುವಲ್ಲಿ ಹೆಚ್ಚು ಗಮನ ಹರಿಸಬೇಕಾಗಿದೆ. ಇದೇ ಹಾದಿಯಲ್ಲಿ ಸರ್ಕಾರದ ತೆರಿಗೆ ಮೇಲಿನ ದಂಡದ ಅರ್ಧದಷ್ಟು ಕಡಿತದ ನಿರ್ಧಾರ ಸರಿಯಾಗಿದೆ ಎಂದು ಬಿಎನ್‌ಪಿ ಶ್ರೀಕಾಂತ್ ನರಸಿಂಹನ್ ಎಂಬುವವರಿ ಹೇಳಿದ್ದಾರೆ.












Click it and Unblock the Notifications