ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗುರುವಾರ 947 ಫ್ಲಾಟ್ ಹಂಚಿಕೆ ಮಾಡಲಿದೆ ಬಿಡಿಎ

|
Google Oneindia Kannada News

ಬೆಂಗಳೂರು, ನ.26 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿಂಗಲ್ ಬೆಡ್‌ ರೂಂನ 947 ಮನೆಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದೆ. ಲಾಟರಿ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಗುರುವಾರ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಆಲೂರು, ದೊಡ್ಡಬನಹಳ್ಳಿ, ಗುಂಜೂರು, ತಿಪ್ಪಸಂದ್ರ ಮುಂತಾದ ಪ್ರದೇಶಗಳಲ್ಲಿ ಬಿಡಿಎ ನಿರ್ಮಿಸಿರುವ 947 ಸಿಂಗಲ್ ಬೆಡ್ ರೂಂ ಮನೆಗಳನ್ನು ಗುರುವಾರ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗುತ್ತದೆ. 2014ರಲ್ಲಿ ಬಿಡಿಎ ಈ ಫ್ಲಾಟ್‌ಗಳನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಿತ್ತು. [ಬಿಡಿಎಯಿಂದ 12,610 ನಿವೇಶನ ಹಂಚಿಕೆ]

BDA

ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬಿಡಿಎ ಆಯುಕ್ತ ಶ್ಯಾಂ ಭಟ್ ಹೇಳಿದ್ದಾರೆ. ಹಲವಾರು ಬಾರಿ ಫ್ಲಾಟ್ ಪಡೆಯಲು ಅರ್ಜಿ ಸಲ್ಲಿಸಿ ವಿಫಲರಾದವರಿಗೆ ಈ ಬಾರಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಲಾಟರಿ ಮೂಲಕ ಆಯ್ಕೆ ಯಾದವರಿಗೆ ಫ್ಲಾಟ್ ಹಂಚಿಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. [ಈ ಹರಾಜು ಪ್ರಕಟಣೆ ನೋಡಿ]

ಆಲೂರಿನಲ್ಲಿ 400 ಫ್ಲಾಟ್‌ಗಳಿಗೆ 171 ಅರ್ಜಿಗಳು ಮತ್ತು ಗುಂಜೂರಿನಲ್ಲಿ 238 ಫ್ಲಾಟ್‌ಗಳಿಗೆ 189 ಅರ್ಜಿಗಳು ಬಂದಿವೆ. ತಿಪ್ಪಸಂದ್ರದಲ್ಲಿ ಹೆಚ್ಚು ಬೇಡಿಕೆ ಇದ್ದು 84 ಫ್ಲಾಟ್‌ ಪಡೆಯಲು 131 ಅರ್ಜಿಗಳು ಬಂದಿವೆ. ಉಳಿದ ಕೆಲವು ಪ್ರದೇಶಗಳಲ್ಲಿ 61 ಫ್ಲಾಟ್‌ಗೆ 81 ಅರ್ಜಿಗಳು ಬಂದಿವೆ. ಲಾಟರಿ ಮೂಲಕ ಗುರುವಾರ ಫಲಾನುಭವಿಗಳ ಆಯ್ಕೆ ನಡೆಯಲಿದೆ ಎಂದು ಶ್ಯಾಂ ಭಟ್ ತಿಳಿಸಿದ್ದಾರೆ.

ಫಲಾನುಭವಿಗಳು ಲಾಟರಿ ಸಂದರ್ಭದಲ್ಲಿ ಯಾವುದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲ. ಆದರೆ, ನಿವೇಶನ ದೊರೆತ ಎರಡು ತಿಂಗಳವೊಳಗೆ ಶೇ 25ರಷ್ಟು ಹಣವನ್ನು ಪಾವತಿ ಮಾಡಬೇಕು ಎಂದು ಆಯುಕ್ತರು ಮಾಹಿತಿ ನೀಡಿದರು.

ಅಂದಹಾಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಂಗಳೂರು ನಗರ ವಾಸಿಗಳಿಗೆ ಈ ವರ್ಷ 12,610 ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ 24 ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ದಿನಗಳ ಹಿಂದೆ ತಿಳಿಸಿದ್ದಾರೆ.

English summary
The Bangalore Development Authority (BDA) will allot 947 one bedroom flats to applicants by lottery on Thursday, November 27. The flats are in Alur, Doddabanahalli, Gunjur, Kaniminike, Malagala, Thippasandra and Valegerahalli localities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X