ನನಸಾಗಲಿದೆ ಬೆಂಗಳೂರಿಗರ ಸ್ವಂತ ಮನೆ ಕನಸು

apartment
ಬೆಂಗಳೂರು, ನ.4 : ಮಹಾನಗರ ಬೆಂಗಳೂರಿನಲ್ಲಿ ಮನೆ ಕೊಂಡುಕೊಳ್ಳುವ ಜನರ ಕನಸು ನನಸಾಗುವ ಕಾಲ ಹತ್ತಿರವಾಗಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸುವ ಸಿಂಗಲ್ ಬೆಡ್ ರೂಮ್ ಮನೆ ಪಡೆಯಲು ಇರುವ ವಾರ್ಷಿಕ ಆದಾಯದ ಮಿತಿಯನ್ನು ಪರಿಷ್ಕರಣೆ ಮಾಡಲು ಬಿಡಿಎ ಮುಂದಾಗಿದೆ. ಇದರಿಂದ ಮತ್ತಷ್ಟು ಜನರ ಮನೆ ಕನಸು ಈಡೇರಲಿದೆ.

ಆರ್ಥಿಕವಾಗಿ ಹಿಂದುಳಿದವ ವರ್ಷಗದವರಿಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಅಪಾರ್ಟ್ ಮೆಂಟ್ ಗಳನ್ನು ನಿರ್ಮಿಸುತ್ತಿದೆ. ಇಲ್ಲಿ ನಿರ್ಮಿಸುವ ಸಿಂಗಲ್ ಬೆಡ್ ರೂಮ್ ಮನೆಗಳನ್ನು ಬಡವರಿಗೆ ಮಾರಾಟಮಾಡುತ್ತದೆ. ಈ ಮನೆಗಳನ್ನು ಪಡೆಯಲು ಅರ್ಜಿ ಸಲ್ಲಿಸುವವರಿಗೆ ಸದ್ಯ 1 ಲಕ್ಷ ವಾರ್ಷಿಕ ಆದಾಯದ ಮಿತಿ ನಿಗದಿಗೊಳಿಸಲಾಗಿದೆ. ಇದನ್ನು 3.5 ಲಕ್ಷಕ್ಕೆ ಏರಿಕೆ ಮಾಡಲು ಬಿಡಿಎ ನಿರ್ಧರಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಡಿಎ ಆಯುಕ್ತ ಶ್ಯಾಂ ಭಟ್, ಸದ್ಯದ ಪರಿಸ್ಥಿತಿಯಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರು ವಾರ್ಷಿಕವಾಗಿ 1 ಲಕ್ಷಕ್ಕಿಂತ ಹೆಚ್ಚಿನ ಆದಾಯಗಳಿಸುತ್ತಿದ್ದಾರೆ. ನಾವು ಮನೆ ಮಾರಾಟ ಮಾಡಲು ಅರ್ಜಿ ಆಹ್ವಾನಿಸಿದಾಗ ಸುಮಾರು 1,200 ಅರ್ಜಿಗಳು ನಮಗೆ ಬರುತ್ತಿವೆ. ಆದ್ದರಿಂದ ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ.

ಸದ್ಯ ಇರುವ 1 ಲಕ್ಷದ ಆದಾಯದ ಮಿತಿ ಸುಮಾರು 10 ವರ್ಷಗಳ ಹಿಂದೆ ನಿಗದಿ ಪಡಿಸಿದ ಮಾನದಂಡ. ಇಂದು ವಾರ್ಷಿಕ ಆದಾಯಗಳಿಕೆಯಲ್ಲಿ ಬದಲಾವಣೆಗಳಾಗಿವೆ. ಆದ್ದರಿಂದ ಸಿಂಗಲ್ ಬೆಡ್ ರೂವ್ ಮನೆ ಪಡೆಯಲು ಇರುವ ವಾರ್ಷಿಕ ಆದಾಯದ ಮಿತಿಯನ್ನು 3.5 ಲಕ್ಷಗಳಿಗೆ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಬಿಡಿಎ ಸದ್ಯ 4,388 ಸಿಂಗಲ್ ಬೆಡ್ ಮನೆಗಳನ್ನು ನಿರ್ಮಿಸುತ್ತಿದೆ. ವಲಗೇರಹಳ್ಳಿ, ಗುಂಜೂರು, ತಿಪ್ಪಸಂದ್ರ,ದೊಡ್ಡಬನಹಳ್ಳಿ ಮುಂತಾದ ಪ್ರದೇಶಗಳಲ್ಲಿ ಬಿಡಿಎ ಮನೆಗಳು ನಿರ್ಮಾಣಗೊಳ್ಳುತ್ತಿವೆ. ಇದರಲ್ಲಿ ಶೇ 50 ರಷ್ಟು ಮನೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾಗಿದೆ.

ಸಿಂಗಲ್ ಬೆಡ್ ರೂಮ್ ಮನೆಗಳ ದರ 9.5 ಲಕ್ಷದಿಂದ 11.2 ಲಕ್ಷದ ತನಕ ನಿಗದಿಗೊಳಿಸಲಾಗಿದೆ. ಬಿಡಿಎ ಪರಿಶಿಷ್ಟ ಜಾತಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡುವ ಮನೆಗಳಿಗೆ 3 ಲಕ್ಷರೂ.ಗಳ ಸಹಾಯಧನ ನೀಡುತ್ತದೆ. ಸದ್ಯ ವಾರ್ಷಿಕ ಆದಾಯ ಪರಿಷ್ಕರಣೆ ಪ್ರಸ್ತಾವನೆ ಸರ್ಕಾರ ಮುಂದಿದ್ದು, ಒಪ್ಪಿಗೆ ದೊರಕಿದ ಬಳಿಕ ಬಿಡಿಎ ಮನೆಗಳನ್ನು ಪಡೆಯಲು ಅರ್ಜಿ ಆಹ್ವಾನಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+