ಟ್ರಾಶ್ ಬ್ಯಾರಿಯರ್ ಯಂತ್ರದಿಂದ ಬೆಳ್ಳಂದೂರು ಕೆರೆ ಸ್ವಚ್ಛ!

ಬೆಂಗಳೂರು, ಏಪ್ರಿಲ್ 05: ಬೆಳ್ಳಂದೂರು ಕೆರೆಯಲ್ಲಿ ಗಿಡ ಗಂಟಿಗಳು ಬೆಳೆದುಕೊಂಡಿವೆ. ಸುತ್ತಮುತ್ತಲಿರುವ ಕಂಪನಿಗಳಿಂದ ಬರುವ ಮಲಿನಕಾರಕ ವಸ್ತುಗಳೆಲ್ಲವೂ ಸೇರಿ ನೀರು ಸಂಪೂರ್ಣವಾಗಿ ಕಲುಷಿತ ಗೊಂಡಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಕೆರೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಕಾರ್ಯವನ್ನು ಆರಂಭಿಸಿದೆ. ಕೆರೆಯಲ್ಲಿ ಟ್ರಾಶ್ ಬ್ಯಾರಿಯರ್ ಯಂತ್ರವನ್ನು ಅಳವಡಿಸಲಾಗುತ್ತಿದೆ ಇದು ಅಲ್ಲಿರುವ ಗಿಡಗಳು ಹಾಗೂ ಮಲಿನಕಾರಕ ವಸ್ತುಗಳನ್ನು ಮೇಲೆತ್ತುವಲ್ಲಿ ಸಹಕಾರಿಯಾಗಲಿದೆ.

ಈ ಕುರಿತು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಅವರು ಬೆಳ್ಳಂದೂರು ಸ್ಥಳೀಯರೊಂದಿಗೆ ಸಭೆ ನಡೆಸಿದರು. ಕೆರೆಯ ಸುತ್ತಮುತ್ತಲಿನ ಕಡಿಮೆ ಹಾಗೂ ಅಧಿಕ ಅವಧಿಯಲ್ಲಿ ನಡೆಯುವ ಕೆರೆಯ ಪುನರುಜ್ಜೀವನ ಕಾರ್ಯದ ಬಗ್ಗೆ ವಿವರಿಸಲಾಯಿತು. ಬಿಬಿಎಂಪಿ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ ಅಧಿಕಾರಿಗಳು ಪಾಲ್ಗೊಂಡಿದ್ದರು.

BDA plans to install trash barrier to keep hyacinth off Bellandur

ಒಳಚರಂಡಿ ನೀರು ಸಂಸ್ಕರಣಾ ಘಟಕವನ್ನು ಕೆರೆಯಲ್ಲಿ ಅಳವಡಿಸುವುದು ಮುಂದಿನ ಆಲೋಚನೆ ಹೌದು ಅದನ್ನು 2020ರೊಳಗೆ ಅಳವಡಿಸಲಾಗುತ್ತದೆ. ಹಾಗಾಗಿ ಟ್ರ್ಯಾಶ್ ಬ್ಯಾರಿಯರ್ ಗಳನ್ನು ಅಳವಡಿಸಿ ಮೊದಲು ಕೆರೆಯನ್ನು ಸ್ವಚ್ಛಗೊಳಿಸಬೇಕಿದೆ.ಈ ಯಂತ್ರ ಅಳವಡಿಸಿದಾಗ ಎಲ್ಲ ಗಿಂಡಗಂಟಿಗಳು, ಮಲಿನಕಾರಕ ವಸ್ತುಗಳು ಒಂದು ಕಡೆ ಹೋಗಿ ಶೇಖರಣೆಗೊಳ್ಳುತ್ತದೆ ಇದನ್ನು ಸುಲಭವಾಗಿ ನೀರಿನಿಂದ ಮೇಲಕ್ಕೆತ್ತಬಹುದಾಗಿದೆ.

ಕೆರೆಯಿಂದ ದುರ್ನಾತ ಬರುತ್ತಿದೆ ಎಂದು ಸ್ಥಳೀಯರಿಂದ ದೂರು: ಕೆರೆಯಿಂದ ದುರ್ವಾಸನೆ ಬರುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಅವರಿಗೆ ಸುತ್ತಮುತ್ತಲಿರುವ ಅಪಾರ್ಟ್ ಮೆಂಟ್ ನಿವಾಸಿಗಳುಲಿಖಿತ ದೂರು ನೀಡಿದ್ದಾರೆ.

ಬೆಳಗಿನ ಜಾವ 2ರಿಂದ 4 ಗಂಟೆಯವರೆಗೆ ತುಂಬಾ ವಾಸನೆ ಬರುತ್ತದೆ. ಮಕ್ಕಳು ನಿದ್ದೆಯಿಂದ ಎಚ್ಚರಗೊಳ್ಳುತ್ತಾರೆ. ಹಲವು ಕಂಪನಿಗಳ ಬಗ್ಗೆ ನಮಗೆ ಅನುಮಾನವಿದೆ. ರಾತ್ರಿ ಹೊತ್ತು ರಾಸಾಯನಿಕಗಳನ್ನು ಕೆರೆಗೆ ಹರಿಯಲು ಬಿಡುತ್ತಿದ್ದಾರೆ ಎಂದು ಸ್ಥಳೀಯರಾದ ಸೊನಾಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+