ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆ ಸೈಟ್: ವಿಕಲಚೇತನರಿಗೆ ಕೋಟಾ ಹೆಚ್ಚಳ

|
Google Oneindia Kannada News

Recommended Video

ಬಿಡಿಎ ಸೈಟು ಬೇಕಾಗಿದ್ರೆ ಒಮ್ಮೆ ಇಲ್ಲಿ ನೋಡಿ | Oneindia Kannada

ಬೆಂಗಳೂರು, ಜನವರಿ 2 : ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ವಿಕಲ ಚೇತನ ಅರ್ಜಿದಾರರಿಗೆ ಶೇ. 3 ರಷ್ಟು ನಿವೇಶನ ಮೀಸಲಾತಿಯಲ್ಲದೇ ನಿವೇಶನದ ಮೂಲದರದಲ್ಲಿ ಶೇ.5ರಷ್ಟು ವಿನಾಯಿತಿ ನೀಡುವ ಮಹತ್ವಸ ನಿರ್ಧಾರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿದೆ.

ಬಿಡಿಎ ಸೈಟು ಬೇಕಾ? ಕನಸಿನ ಸೈಟು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿಬಿಡಿಎ ಸೈಟು ಬೇಕಾ? ಕನಸಿನ ಸೈಟು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ

ಪ್ರಾಧಿಕಾರದ ಹೊಸ ಬಡಾವಣೆಗಳಲ್ಲಿ ಸೈಟ್ ಹಂಚಿಕೆಗೆ 1984ರ ನಿವೇಶನ ಹಂಚಿಕೆ ನಿಯಮಾವಳಿಗಳನ್ನು ಅಳವಡಿಸಿಕೊಂಡಿದೆ. ನಿಯಮಾವಳಿಯ 11ನೇ ಉಪ ನಿಯಮದಡಿ ನಾನಾ ವರ್ಗಗಳಿಗೆ ಸೈಟಿಗೆ ಹಂಚಿಕೆ ಮಾಡುವ ಮೀಸಲು ಮಿತಿ ನಿಗದಿಯಾಗಿದೆ. ಒಟ್ಟು ಸೈಟ್ ಗಳಲ್ಲಿ ಅರ್ಧದಷ್ಟು ಸಾಮಾನ್ಯ ವರ್ಗ ಹಾಗೂ ಉಳಿದ ಶೇ.50. ರಷ್ಟನ್ನು ಮೀಸಲು ಅಡಿ ಹಂಚಲಾಗುತ್ತಿದೆ.

BDA increases disabled quota up to 3 percent

ಎರಡು ವರ್ಷಗಳ ಹಿಂದೆ ಐದು ಸಾವಿರ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸಿದ್ದ ವೇಳೆ ಮೊದಲ ಬಾರಿಗೆ ಹಿಂದುಳಿದವರಿಗೆ ಶೇ.10 ರಷ್ಟು ಸೈಟ್ ಗಳನ್ನು ಮೀಸಲಿಡಲಾಗಿತ್ತು. ವಿಕಲಚೇತನರಿಗೆ ಶೇ.1ರಷ್ಟು ಸೈಟ್ ಮಾತ್ರ ಮೀಸಲಿಟ್ಟಿದ್ದಕ್ಕೆ ಆ ವರ್ಗದವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಸೈಟ್ ಹಂಚಿಕೆ ಮೀಸಲು ವಿವರ: ಪ್ರವರ್ಗ -1- ಶೇ.2, ಪರಿಶಿಷ್ಟ ಜಾತಿ-ಶೇ.15, ಪರಿಶಿಷ್ಟ ಪಂಗಡ-ಶೇ.3, ಹಿಂದುಳಿದ ವರ್ಗ-ಶೇ.10, ಮಾಜಿ ಸೈನಿಕರು-ಶೇ.5, ರಾಜ್ಯ ಸರ್ಕಾರಿ ನೌಕರರು-ಶೇ.8, ಕೇಂದ್ರ ಸರ್ಕಾರಿ ನೌಕರರು-ಶೇ.2, ವಿಕಲಚೇತನರು-ಶೇ.3 , ಸಾಧಕರು-ಶೇ.2 ಸಾಮಾನ್ಯ ವರ್ಗ-ಶೇ.50 ಮೀಸಲಿಡಲಾಗಿದೆ.

ಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎಯಿಂದ ನಿವೇಶನ ಹಂಚಿಕೆಕೆಂಪೇಗೌಡ ಬಡಾವಣೆಯಲ್ಲಿ ಬಿಡಿಎಯಿಂದ ನಿವೇಶನ ಹಂಚಿಕೆ

ಸರ್ಕಾರಿ ನೌಕರರ ಕೋಟಾ ಬದಲು: ವಿಕಲಚೇತನರಿಗೆ ಶೇ.3 ರಷ್ಟು ಸೈಟ್ ಗಳನ್ನು ಮೀಸಲಿಡಲು ರಾಜ್ಯ ಸರ್ಕಾರಿ ನೌಕರರ ಕೋಟಾವನ್ನು ಪರಿಷ್ಕರಿಸಲಾಗಿದೆ. ಈ ಹಿಂದೆ ಶೇ.10ರಷ್ಟಿದ್ದ ಮೀಸಲನ್ನು ಶೇ.8ಕ್ಕೆ ಇಳಿಸಲಾಗಿದೆ. ಇದರಿಂದ ರಾಜ್ಯ ಸರ್ಕಾರಿ ನೌಕರರಿಗೆ ಶೇ.2 ರಷ್ಟು ಸೈಟ್ ಗಳು ಖೋತಾ ಆಗಲಿವೆ.

ಆದರೆ, ಕೇಂದ್ರ ಸಕಾರಿ ನೌಕರರಿಗೆ ನಿಗದಿಯಾಗಿದ್ದ ಶೇ.2ರಷ್ಟು ಮಿತಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಬೇರೆ ವರ್ಗದ ಕೋಟಾ ಬದಲಿಸಲು ಅಗತ್ಯ ಪ್ರಮಾಣದ ಮಿತಿ ಇಲ್ಲದ ಕಾರಣ ರಾಜ್ಯ ಸರ್ಕಾರಿ ನೌಕರರ ಕೋಟಾದಿಂದ ತೆಗೆದು ವಿಕಲಚೇತನರಿಗೆ ನೀಡಲಾಗಿದೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

English summary
Bengaluru Development authority has been increased to Three percent from one percent in the allotment of Nadaprabhu Kempegowda layout.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X