ಬೆಂಗಳೂರಲ್ಲಿ ಆಸ್ತಿ ಖರೀದಿ, ಸಮಸ್ಯೆಗಳ ಪರಿಹಾರಕ್ಕೆ ಬಿಡಿಎ ಗುಡ್‌ನ್ಯೂಸ್!
ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ದಿನದಿಂದ ದಿನಕ್ಕೆ ಬೇರೆ ಬೇರೆ ಕಾರಣಗಳಿಗೆ ಬೆಂಗಳೂರಿನಲ್ಲಿ ಭೂಮಿಯ ಬೆಲೆ ಹೆಚ್ಚಾಗುತ್ತಿರುವುದು ಇದೆ. ಇದೀಗ ಬೆಂಗಳೂರಿನ ಭೂಮಿಯ ಬೆಲೆಯು ದಿಢೀರ್ ಹೆಚ್ಚಳವಾಗಿದ್ದು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಹ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ. ಕರ್ನಾಟಕ ಸರ್ಕಾರದ ನಿರ್ದೇಶನದ ಮೇರೆಗೆ ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ)ದಲ್ಲಿ ಬದಲಾವಣೆಗಳು ನಡೆಯುತ್ತಿವೆ, ಬಿಡಿಎಯನ್ನು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸುತ್ತದೆ ಎಂದು ಹೇಳಲಾಗಿದೆ.
ಹೌದು ಬೆಂಗಳೂರು ಅಭಿವೃದ್ಧಿಯಾದಂತೆಲ್ಲವೂ ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಅದರಲ್ಲೂ ಮೆಟ್ರೋ ಲೈನುಗಳ ಅಭಿವೃದ್ಧಿ, ಸುರಂಗ ಮಾರ್ಗ ಹಾಗೂ ಡಬಲ್ ಡೆಕ್ಕರ್ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಬೆಂಗಳೂರಿನಲ್ಲಿ ರೂಪಿಸಲಾಗುತ್ತಿದೆ. ಬೆಂಗಳೂರು ಹೊರ ವಲಯ ಹಾಗೂ ಬೆಂಗಳೂರಿನ ಒಳಭಾಗ ಅಥವಾ ಹಳೆಯ ಬೆಂಗಳೂರಿನಲ್ಲೂ ಭೂಮಿಗೆ ಒಳ್ಳೆಯ ಬೆಲೆ ಬರುವುದಕ್ಕೆ ಶುರುವಾಗಿದೆ.

ಅದರಲ್ಲೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬದಲಾಗಿ, ಬೆಂಗಳೂರಿನ ಆಡಳಿತವು ಗ್ರೇಟರ್ ಬೆಂಗಳೂರಿಗೆ ಬದಲಾದ ಮೇಲೆ ಆಡಳಿತದಲ್ಲೂ ಕೆಲವೊಂದು ಮಹತ್ವದ ಬದಲಾವಣೆಗಳು ಆಗಿವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಬದಲಿಗೆ ಇದೀಗ ಬೆಂಗಳೂರಿನಲ್ಲಿ ಐದು ಪಾಲಿಕೆಗಳು ರಚನೆ ಆಗಿವೆ. ಈ ರೀತಿ ಇರುವಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಹ ಮತ್ತೊಂದು ಗುಡ್‌ನ್ಯೂಸ್ ಅನ್ನು ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮಾಡಬೇಕು ಎಂದುಕೊಂಡಿರುವವರು ಹಾಗೂ ಈಗಾಗಲೇ ಆಸ್ತಿ ಖರೀದಿ ಮಾಡಿರುವವರಿಗೆ ಕೊಟ್ಟಿದೆ.
ನೀವು ಬಿಡಿಎ ಜೊತೆ ದೀರ್ಘಕಾಲದಿಂದ ಬಾಕಿ ಇರುವ ದೂರುಗಳನ್ನು ಹೊಂದಿದ್ದರೆ ಮತ್ತು ನೀವು ಕಾನೂನಿನ ಬಲಭಾಗದಲ್ಲಿದ್ದರೆ, ನಿಮ್ಮ ಅರ್ಜಿಯ ಛಾಯಾಚಿತ್ರವನ್ನು ವಾಟ್ಸಾಪ್ ಮೂಲಕ ಬಿಡಿಎ ಸಹಾಯವಾಣಿ 9483166622 ಗೆ ಕಳುಹಿಸಬಹುದು. ಬಿಡಿಎ ಅಧ್ಯಕ್ಷರಾದ ಎನ್.ಎ ಹ್ಯಾರಿಸ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮುಕ್ತ ಸಭೆಗೆ 30 ದಿನಗಳಲ್ಲಿ ಬಿಡಿಎ ನಿಮ್ಮನ್ನು ಆಹ್ವಾನಿಸುತ್ತದೆ ಮತ್ತು ಕಾನೂನು ತೊಡಕುಗಳು ಒಳಗೊಂಡಿರದ ಹೊರತು, ನಿಮ್ಮ ದೂರನ್ನು ಸಂಪೂರ್ಣವಾಗಿ ಚರ್ಚಿಸಲಾಗುತ್ತದೆ ಮತ್ತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಇಡೀ ಪ್ರಕ್ರಿಯೆಗಳು ಬಿಡಿಎ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರವಾಗಿದ್ದು, ವಿಷಯಗಳನ್ನು ಪಾರದರ್ಶಕವಾಗಿಸುತ್ತದೆ. ಬಿಡಿಎ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಬಿಡಿಎ ಆಯುಕ್ತರಾದ ಕ್ಯಾಪ್ಟನ್ ಪಿ. ಮಣಿವಣ್ಣನ್ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications