ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Big Scam: 23 ಕೆರೆ ನಾಶ ಮಾಡಿ, 3,530 ನಿವೇಶನ ನಿರ್ಮಿಸಿದ ಬಿಡಿಎ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 16: ಬೆಂಗಳೂರಿನಲ್ಲಿ ಮಳೆ ಅವಾಂತರವನ್ನು ಸೃಷ್ಟಿಯನ್ನು ಮಾಡಿದ ಮೇಲೆ ಕೆರೆಗಳನ್ನು ನಾಶ ಮಾಡಿದ ವಿಚಾರ ಮುನ್ನೆಲೆಗೆ ಬಂದಿದೆ. ಕೆರೆಗಳನ್ನು ನಾಶ ಮಾಡಿ ಲೇಔಟ್‌ಗಳನ್ನು ನಿರ್ಮಾಣವನ್ನು ಮಾಡಿದ್ದೇ ಮಳೆ ನೀರು ಮನೆಗಳಿಗೆ ನುಗ್ಗಲು ಕಾರಣವಾಗಿದೆ ಅನ್ನುವ ಮಾತುಗಳ ನಡುವೆ ಬಿಡಿಎ ಅಕ್ರಮ ಬಯಲಾಗಿದೆ.

ಮನೆಗಳಿಗೆ ನೀರು ನುಗ್ಗಲು ಕಾರಣವಾಗಿದ್ದು ಕೆರೆಯನ್ನು ಮುಚ್ಚಿದ ಜಾಗದಲ್ಲಿ ಸೈಟ್ ಖರೀದಿ ಮಾಡಿದ್ದ ಜನರದ್ದು ಮತ್ತು ಲೇಔಟ್‌ ನಿರ್ಮಾಣವನ್ನು ಮಾಡಿರು ಬಿಡಿಎ ಎಂಬ ಹೊಣೆಗೇಡಿತನದ ಸಂಸ್ಥೆಯಿಂದಾಗಿದೆ.

ಒಡೆದ ಹುಳಿಮಾವು ಕರೆ; ಮೂವರಲ್ಲಿ ಯಾರು ಜವಾಬ್ದಾರಿ?ಒಡೆದ ಹುಳಿಮಾವು ಕರೆ; ಮೂವರಲ್ಲಿ ಯಾರು ಜವಾಬ್ದಾರಿ?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಲೇ ಬೆಂಗಳೂರಲ್ಲಿ ನಡೆದಿದೆ ಅಕ್ರಮ ಒತ್ತುವರಿಯಾಗಿರುವ ಮಾಹಿತಿ ಲಭ್ಯವಾಗಿದೆ. 2013 - 2014ರಲ್ಲಿ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವುದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ. ಬಿಡಿಎ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿ ಕೋಟಿ ಕೋಟಿ ರೂಪಾಯಿಗೆ ಮಾರಾಟವನ್ನು ಮಾಡಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ 2015ರಲ್ಲಿ ಒತ್ತುವರಿ ಕಾನೂನು ಬದ್ಧಗೊಳಿಸುವಂತೆ ಸರ್ಕಾರಕ್ಕೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ( ಬಿಡಿಎ) ಪತ್ರ ಬರೆದಿರುವುದು ತಿಳಿದು ಬಂದಿದೆ. ಬಿಡಿಎ ತಾನು ಅಕ್ರಮವನ್ನು ಎಸಗಿ ಆ ಬಳಿಕ ಜನರಿಗೆ ವಂಚನೆಯನ್ನು ಮಾಡಿ ಒತ್ತುವರಿಯನ್ನು ಕಾನೂನು ಬದ್ದಗೊಳಿಸುವಂತೆ ಕೋರಿಕೊಂಡಿದೆ.

ಕೆರೆ ಮುಚ್ಚಿದ ಜಾಗದಲ್ಲಿ 3,530 ನಿವೇಶನ

ಕೆರೆ ಮುಚ್ಚಿದ ಜಾಗದಲ್ಲಿ 3,530 ನಿವೇಶನ

ಬೆಂಗಳೂರು ನಗರದಲ್ಲಿ ಜೀವಂತವಾಗಿದ್ದ 23 ಕೆರೆಗಳನ್ನು ಮಣ್ಣು ತುಂಬಿ ಮುಚ್ಚಲಾಗಿದೆ. ಆ ಬಳಿಕ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಬಡಾವಣೆ ನಿರ್ಮಾಣವನ್ನ ಮಾಡಿದೆ. 23 ಕೆರಗಳನ್ನು ಮುಚ್ಚಿರುವ ಬಿಡಿಎ ಅದರಲ್ಲಿ ಲೇಔಟ್‌ಗಳನ್ನು ನಿರ್ಮಾಣ ಮಾಡಿದ್ದಲ್ಲದೇ 3530 ನಿವೇಶನಗಳನ್ನು ನಿರ್ಮಿಸಿ ಜನರಿಗೆ ಹಂಚಿಯನ್ನು ಮಾಡಿದೆ. ಬಿಡಿಎ ನಿವೇಶನ ಎಂದರೆ ವ್ಯವಸ್ಥಿತ ಯೋಚನೆ ಮಾಡಿ ಲೇಔಟ್ ನಿರ್ಮಾಣ ಮಾಡಿರುತ್ತಾರೆ ಎಂದು ನಂಬಿದ ಜನ ನಿವೇಶನ ಖರೀದಿಸಿ ಮನೆಯನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ವೇಳೆ ಮಳೆ ನೀರು ತನ್ನ ಮೂಲ ಸ್ಥಳಗಳಾದ ಕೆರೆ ಅಂಗಳವನ್ನು ತಲುಪಿದೆ.

ಕೆರೆ ಮುಚ್ಚಿ ಬಡಾವಣೆ ನಿರ್ಮಾಣ ಪತ್ರದ ಮೂಲಕ ಬಹಿರಂಗ

ಕೆರೆ ಮುಚ್ಚಿ ಬಡಾವಣೆ ನಿರ್ಮಾಣ ಪತ್ರದ ಮೂಲಕ ಬಹಿರಂಗ

BDA 2015ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ಮಾಹಿತಿಗಳನ್ನು ಒಳಗೊಂಡ ಪತ್ರ ಬರೆದಿತ್ತು. 23 ಕೆರೆಗಳು ತಮ್ಮ ಮೂಲ ಸ್ವರೂಪ ಕಳೆದುಕೊಂಡಿದೆ ಎಂಬ ನೆಪಕೊಟ್ಟು ಇಡೀ ಕೆರೆಗೆ ಕೆರೆಯೇ ಮುಚ್ಚಿರುವ BDA. 1985ರಲ್ಲಿ ನಡೆದ ಲಕ್ಷ್ಮಣ ರಾವ್ ಸಮಿತಿ ನಡೆಸಿದ ಕೆರೆಗಳ ಸರ್ವೇಗಳ ವರದಿಯ ಆಧಾರದ ಮೇರೆಗೆ ಬಡಾವಣೆ ನಿರ್ಮಾಣವನ್ನು ಮಾಡಿತ್ತು. ಇದೀಗ ಈ ಕೆರೆಗಳಿದ್ದ ಭಾಗದಲ್ಲಿ ಸಣ್ಣ ಮಳೆಗೂ ಪ್ರವಾಹದ ಭೀತಿ ಎದುರಿಸುತ್ತಿರುವ ಜನರು ಬಿಡಿಎ ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬಿಡಿಎ ಪತ್ರಕ್ಕೆ ಯಾವುದೇ ಉತ್ತರ ನೀಡದ ಸರ್ಕಾರ

ಬಿಡಿಎ ಪತ್ರಕ್ಕೆ ಯಾವುದೇ ಉತ್ತರ ನೀಡದ ಸರ್ಕಾರ

BDAಯಿಂದಲೇ 2014ರಲ್ಲಿ 23 ಕೆರೆಗಳ ಒತ್ತುವರಿಯನ್ನು ಮಾಡಿ 3,530 ನಿವೇಶನಗಳನ್ನು ಸೃಷ್ಟಿಸಿ ಜನರಿಗೆ ಹಂಚಿಕೆಯನ್ನು ಮಾಡಲಾಗಿದೆ. 2015ರಲ್ಲಿ ಕೆರೆ ಒತ್ತುವರಿಯನ್ನು ಕಾನೂನು ಬದ್ಧಗೊಳಿಸುವಂತೆ ಸರ್ಕಾರಕ್ಕೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ( ಬಿಡಿಎ) ಪತ್ರ ಬರೆದಿರುವುದು ತಿಳಿದು ಬಂದಿದೆ. ಆದರೆ ಸರ್ಕಾರಕ್ಕೆ ಬಿಡಿಎ ಬರೆದಿರುವ ಪತ್ರಕ್ಕೆ ಈವರೆಗೂ ಸರ್ಕಾರ ಯಾವುದೆ ಉತ್ತರವನ್ನು ನೀಡಿಲ್ಲ. ಬಿಡಿಎ ತಾನೂ ಮಣ್ಣು ತಿನ್ನುವ ಕೆಲಸವನ್ನು ಮಾಡಿ ಜನರಿಗೆ ಸಂಕಷ್ಠವನ್ನು ತಂದಿಟ್ಟಿದೆ.

ಯಾವ ಕೆರೆಯಲ್ಲಿ ಎಷ್ಟು ನಿವೇಶನ ನಿರ್ಮಾಣ

ಯಾವ ಕೆರೆಯಲ್ಲಿ ಎಷ್ಟು ನಿವೇಶನ ನಿರ್ಮಾಣ

* ಗೆದ್ದಲಹಳ್ಳಿ ಕೆರೆ - 126 ನಿವೇಶನ ನಿರ್ಮಾಣ
* ಚಿಕ್ಕಮಾರನಹಳ್ಳಿ ಕೆರೆ - 115 ನಿವೇಶನ ನಿರ್ಮಾಣ
* ಬಾಣಸವಾಡಿ ಕೆರೆ - 67 ನಿವೇಶನ ನಿರ್ಮಾಣ
* ಚನ್ನಸಂದ್ರ ಕೆರೆ - 222 ನಿವೇಶನ ನಿರ್ಮಾಣ
* ಶಿನಿವಾಗಿಲು ಅಮಾನಿಕೆರೆ - 486 ನಿವೇಶನ ನಿರ್ಮಾಣ
* ಬಿಳೇಕಹಳ್ಳಿ ಕೆರೆ - 312 ನಿವೇಶನ ನಿರ್ಮಾಣ
* ನಾಗಸಂದ್ರ ಚೆನ್ನಮ್ಮಕರೆ - 328 ನಿವೇಶನ ನಿರ್ಮಾಣ
* ತಿಪ್ಪಸಂಧ್ರ ಕೆರೆ (3ನೇ ಹಂತ) - 234 ನಿವೇಶನ ನಿರ್ಮಾಣ
* ತಿಪ್ಪಸಂದ್ರ ಕೆರೆ (2ನೇ ಹಂತ) - 13 ನಿವೇಶನ ನಿರ್ಮಾಣ
* ಅಗರ ಕೆರೆ - 113 ನಿವೇಶನ ನಿರ್ಮಾಣ
* ಎಳ್ಳುಕುಂಟೆ ಕೆರೆ - 161 ನಿವೇಶನ ನಿರ್ಮಾಣ
* ಕಾಚರಕನಹಳ್ಳಿ ಕೆರೆ - 126 ನಿವೇಶನ ನಿರ್ಮಾಣ
* ಹುಳಿಮಾವುಕೆರೆ - 153 ನಿವೇಶನ ನಿರ್ಮಾಣ
* ವೆಂಕಟರಾಯನಕೆರೆ - 130 ನಿವೇಶನ ನಿರ್ಮಾಣ
* ನಾಗರಬಾವಿ ಕೆರೆ - 37 ನಿವೇಶನ ನಿರ್ಮಾಣ
* ಚಳ್ಳಕೆರೆ - 71 ನಿವೇಶನ ನಿರ್ಮಾಣ
* ದೊಮ್ಮಲೂರು ಕೆರೆ - 10 ನಿವೇಶನ ನಿರ್ಮಾಣ
* ಮೇಸ್ತ್ರಿ ಪಾಳ್ಯ ಕೆರೆ - 23 ನಿವೇಶನ ನಿರ್ಮಾಣ
* ಬೆನ್ನಿಗಾನಹಳ್ಳಿ ಕೆರೆ - 18 ನಿವೇಶನ ನಿರ್ಮಾಣ
* ಹೆಣ್ಣೂರು ಕೆರೆ - 434 ನಿವೇಶನ ನಿರ್ಮಾಣ
* ತಲಘಟ್ಟಪುರ ಕೆರೆ - 94 ನಿವೇಶನ ನಿರ್ಮಾಣ
* ಕೇತಮಾರನಹಳ್ಳಿ ಕೆರೆ - 230 ನಿವೇಶನ ನಿರ್ಮಾಣ
* ಮಂಗನಹಳ್ಳಿ ಕೆರೆ - 27 ನಿವೇಶನ ನಿರ್ಮಾಣ

ಈ ಕೆರೆಗಳನ್ನೆಲ್ಲಾ ಮುಚ್ಚಿ ಬಿಡಿಎ ನಿವೇಶವನ್ನು ನಿರ್ಮಾಣವನ್ನು ಮಾಡಿದೆ. ಇದರಿಂದಲೇ ಕೆಲವು ನಿವೇಶನಗಳಲ್ಲಿ ಮಳೆಯಿಂದ ಸಮಸ್ಯೆಯಾಗುತ್ತಿದೆ.

English summary
BDA's illegality has been exposed amid rumors that rain water has entered the houses due to the destruction of lakes and the construction of layouts, Over 23 Layout built on Lake area. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X