BDA: ಬೆಂಗಳೂರಲ್ಲಿ ಫ್ಲಾಟ್ & ಮನೆ ಖರೀದಿಗೆ ಬಂಪರ್ ಗುಡ್‌ನ್ಯೂಸ್, ಬ್ಯಾಂಕ್ ಸಾಲವೂ ಲಭ್ಯ!
BDA: ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಬೆಂಗಳೂರಿನಲ್ಲಿ ಮನೆ ಹಾಗೂ ಫ್ಲಾಟ್ ಖರೀದಿ ಮಾಡಬೇಕು ಎನ್ನುವುದು ಹಲವರ ಕನಸು. ಇದೀಗ ಈ ವಿಚಾರದಲ್ಲಿ ಬಿಡಿಎ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ನಮ್ಮ ಬೆಂಗಳೂರು ನಗರದಲ್ಲಿ ಸ್ವಂತ ಮನೆ ಹೊಂದುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಲು ಇದೊಂದು ಸುವರ್ಣಾವಕಾಶ ಎಂದು ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ - ಬಿಡಿಎ (BDA) ವತಿಯಿಂದ ಇದೇ ಆಗಸ್ಟ್ 30 ರಂದು ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ, ಕಣಿಮಿಣಿಕೆ ವಸತಿ ಸಮುಚ್ಛಯದ ಬಳಿ "ಫ್ಲಾಟ್ ಮೇಳ"ವನ್ನು ಆಯೋಜಿಸಲಾಗಿದೆ.ಆಧುನಿಕ ತಂತ್ರಜ್ಞಾನದಿಂದ ನಿರ್ಮಿತವಾಗಿದ್ದು, ಹಸಿರು ಪರಿಸರ, ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಸಂಪರ್ಕ ಮತ್ತು ಇತರ ಹಲವು ಸೌಕರ್ಯಗಳನ್ನು ಒಳಗೊಂಡಿರುವ ಈ ಕೆಳಗಿನ ವಸತಿ ಸಮುಚ್ಚಯಗಳು ಮಾರಾಟಕ್ಕೆ ಲಭ್ಯವಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮಾಹಿತಿ ಹಂಚಿಕೊಂಡಿದೆ.

1. ಕೊಮ್ಮಘಟ್ಟ (ಎನ್.ಪಿ.ಕೆ.ಎಲ್) ಹಂತ-1 (3 BHK),
2. ಕೊಮ್ಮಘಟ್ಟ (ಎನ್.ಪಿ.ಕೆ.ಎಲ್) ಹಂತ-2 (2 BHK),
3. ಹುಣ್ಣಿಗೆರೆ ವಿಲ್ಲಾ (3&4 BHK),
4. ಆಲೂರು ಹಂತ-1 (1 BHK),
5. ಗುಂಜೂರು ಹಂತ-1 (1 BHK),
6. ಕಣಿಮಿಣಿಕೆ ಹಂತ-2 (2 BHK),
7. ಕಣಿಮಿಣಿಕೆ ಹಂತ-5 (3 BHK).
ನಿಮ್ಮ ನೆಚ್ಚಿನ ಫ್ಲಾಟ್ ಅನ್ನು ಬುಕ್ ಮಾಡಲು ಅಥವಾ ಖರೀದಿಸಲು ಈ ಮೇಳದಲ್ಲಿ ತಪ್ಪದೇ ಭಾಗವಹಿಸಿ. ಹೆಚ್ಚಿನ ಮಾಹಿತಿಗಾಗಿ ಬಿಡಿಎ (BDA) ವೆಬ್‌ಸೈಟ್ https://housing.bdabangalore.org ಗೆ ಭೇಟಿ ನೀಡಿ ಎಂದು ಹೇಳಿದೆ.
ಹಲವು ವಿನ್ಯಾಸದ ಹಾಗೂ ಹೊಸ ಮಾದರಿಯ ಫ್ಲಾಟ್‌ಗಳು ಲಭ್ಯವಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಫ್ಲಾಟ್ ಪೂರ್ಣಮೊತ್ತವನ್ನು ಪಾವತಿ ಮಾಡಿ 26QB, 16B ಸಲ್ಲಿಸಿದ್ದಲ್ಲಿ, 5 ಕೆಲಸದ ದಿನಗಳಲ್ಲಿ ಫ್ಲಾಟ್ ಅನ್ನು ನೋಂದಣಿ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.
ಬ್ಯಾಂಕ್ ಸಾಲ ಸೌಲಭ್ಯ ಇರಲಿದೆ: ಇನ್ನು ಈ ಫ್ಲಾಟ್‌ಗಳನ್ನು ಖರೀದಿ ಮಾಡಲು ಇಚ್ಛಿಸುವವರಿಗೆ ಬ್ಯಾಂಕ್‌ನ ಸಾಲದ ಸೌಲಭ್ಯ ಸಹ ಲಭ್ಯವಿರಲಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾಹಿತಿ ನೀಡಿದೆ.
ಭೂಪ್ರದೇಶ: 50 ಎಕರೆಗಳಷ್ಟು ವಿಸ್ತಾರವಾದ ಫೇಸ್ - 1, 2, 3, 4 ಮತ್ತು 5 ಅನ್ನು ಆಧುನಿಕ ತಂತ್ರಜ್ಞಾನದಲ್ಲಿ ನಿರ್ಮಿಸಲಾಗಿದ್ದು ಸುತ್ತಲೂ ಎತ್ತರದ ಮತ್ತು ಹಸಿರು ಪರಿಸರದಲ್ಲಿ ನಿರ್ಮಾಣ ಮಾಡಲಾಗಿದೆ.
ಶಿಕ್ಷಣ ವ್ಯವಸ್ಥೆ: ನಾರಾಯಣ ಗುರುಕುಲಾ ವಿಶ್ವವಿದ್ಯಾಲಯ, ಕ್ರೈಸ್ಟ್ ವಿಶ್ವವಿದ್ಯಾಲಯ, ಡೆಲ್ಲಿ ಪಬ್ಲಿಕ್ ಶಾಲೆಗಳು ಈ ಭಾಗದಲ್ಲಿ ಇವೆ.
ಸಂಪರ್ಕ: ಇನ್ನು ಈ ಭಾಗದಿಂದ ಸುತ್ತಮುತ್ತಲಿನ ಪ್ರಮುಖ ಪ್ರದೇಶಗಳಿಗೆ ಹತ್ತಿರವಾಗಿದೆ.
1. ಬೆಂಗಳೂರು - ಮೈಸೂರು ಹೆದ್ದಾರಿಯಿಂದ 1 ಕಿ.ಮೀ ದೂರದಲ್ಲಿದೆ.
2. ಚಲ್ಲಘಟ್ಟ ಮೆಟ್ರೋದಿಂದ 3 ಕಿ.ಮೀ
3. ಹೆಜ್ಜಾಲ ರೈಲು ನಿಲ್ದಾಣಕ್ಕೆ 2ಕಿ.ಮೀ.
4. ಹೆಜ್ಜಾಲ ಟೋಲ್ ಪ್ಲಾಜಾದಲ್ಲಿ ಮೆಟ್ರೋ ನಿಲ್ದಾಣ ಪ್ರಸ್ತಾಪ
5. ಜ್ಯುಡೀಷಿಯಲ್ ಲೇಔಟ್ ಮೂಲಕ ಬಿಎಂ ಎಕ್ಸ್ ಪ್ರೆಸ್ ಮಾರ್ಗವನ್ನು ಸಂಪರ್ಕಿಸುತ್ತದೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ









Click it and Unblock the Notifications