ಆದಾಯಕ್ಕಿಂತ ಖರ್ಚು ಹೆಚ್ಚು: ಬಿಬಿಎಂಪಿ ಆಡಿಟ್ ವರದಿಯಲ್ಲಿ ಕೋಟ್ಯಾಂತರ ರೂ. ಹಣ ಪಾವತಿಗೆ ಆಕ್ಷೇಪ
ಬೆಂಗಳೂರು, ಜೂನ್ 11: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಆಂತರಿಕ ಲೆಕ್ಕ ಪರಿಶೋಧಕರು ಪ್ರತಿ ವರ್ಷದಂತೆ ಈ ವರ್ಷವು ಆಡಿಟ್ ವರದಿ (ಲೆಕ್ಕ ಪರಿಶೋಧನಾ ವರದಿ) ಬಿಡುಗಡೆ ಮಾಡಿದೆ. ಇದರಲ್ಲಿ ಬಿಬಿಎಂಪಿ ಆದಾಯಕ್ಕೂ ಹಾಗೂ ಖರ್ಚಿಗೂ ಬಹಳ ವ್ಯತ್ಯಾಸಗಳಿವೆ ಎಂದು ತಿಳಿಸಿದ್ದಾರೆ.
ಬಿಬಿಎಂಪಿಯ ಆಂತರಿಕ ಲೆಕ್ಕ ಪರಿಶೋಧಕರ ಪ್ರಕಾರ, 2021-22ನೇ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ ನೀಡಿದ್ದ 625 ವ್ಯವಹಾರಗಳಲ್ಲಿ ತಪ್ಪು ನಡೆದಿರುವ ಹಾಗೂ ನಿರೀಕ್ಷೆಗೂ ಮೀರಿ ಖರ್ಚಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಈ ವ್ಯವಹಾರಗಳಲ್ಲಿ ಬಿಬಿಎಂಪಿ 2,010 ಕೋಟಿ ರೂ. ಪಾವತಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯ ನಡೆದಿರುವ ಅವ್ಯವಹಾರಗಳು ಮೌಲ್ಯವು ಬಿಬಿಎಂಪಿಯ ವಾರ್ಷಿಕ ಬಜೆಟ್‌ನ ಸರಿಸುಮಾರು ಕಾಲು ಭಾಗದಷ್ಟು ಎಂದು 'ಡಿಎಚ್' ವರದಿ ಮಾಡಿದೆ. ಲೆಕ್ಕ ಪರಿಶಿಶೋಧಕರು ಕಳೆದ ಮೇ ತಿಂಗಳಲ್ಲಿ ವರದಿ ಬಿಡುಗಡೆ ಮಾಡಿದೆ. ಅದರಲ್ಲಿ ಬಿಬಿಎಂಪಿ ಅನೇಕ ಖಾಸಗಿ ಏಜೆನ್ಸಿಗಳಿಗೆ ಪಾವತಿಸಿದ್ದ 422 ಕೋಟಿ ರೂ. ಹಣವನ್ನು ಕೂಡಲೇ ಮರುಪಡೆಯಲು ನಾಗರಿಕ ಸಂಸ್ಥೆಗೆ ನಿರ್ದೇಶಿಸಲಾಗಿದೆ.
ಬಿಬಿಎಂಪಿ ಹಣಪಾವತಿ ಬಗ್ಗೆ ಆಕ್ಷೇಪ
ಒಂದು ವೇಳೆ ಬಿಬಿಎಂಪಿ ಮರಳಿ ಪಡೆಯದಿದ್ದರೆ ಶಿಷ್ಟಾಚಾರ (ಪ್ರೋಟೋಕಾಲ್) ನಿಯಮವನ್ನು ಗಂಭೀರ ಉಲ್ಲಂಘನೆ ಆಗುತ್ತದೆ ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಈ ಮೂಲಕ ಬಿಬಿಎಂಪಿ ಆಡಳಿತ, ಹಣ ಪಾವತಿಯ ಬಗ್ಗೆ ವರದಿಯು ಆಕ್ಷೇಪ ವ್ಯಕ್ತಪಡಿಸಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಆಡಿಟ್ ಆಕ್ಷೇಪಣೆಗಳು ಮತ್ತು ವಸೂಲಾತಿಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳವಾಗಿದೆ. 2020 ರಿಂದ ಪಾಲಿಕೆಗೆ ಚುನಾಯಿತ ಮೇಯರ್ ಆಯ್ಕೆ ಆಗದೇ, ಅಧಿಕಾರಿಗಳಿಂದ ಆಡಳಿತ ನಡೆಸಲಾಗುತ್ತದೆ.

684 ಕೋಟಿ ರೂ. ಪಾವತಿಸಿಗೂ ಆಕ್ಷೇಪಣೆ
ಲೆಕ್ಕ ಪರಿಶೋಧಕರು 2018-19 ರಲ್ಲಿ 684 ಕೋಟಿ ರೂ. ಪಾವತಿಸಿದ್ದಕ್ಕೆ ಆಕ್ಷೇಪಣೆ ಎತ್ತಿದ್ದರು. ಆಗ ಕೂಡಲೇ 114 ಕೋಟಿ ರೂ. ಮರುಪಾವತಿಗೆ ಪಡೆಯುವಂತೆ ತಿಳಿಸಿದ್ದರು. ಇದೆಲ್ಲ ನೋಡಿದರೆ ಕಳೆದ ನಾಲ್ಕೈದು ವರ್ಷಗಳಲ್ಲಿ ಇದೇ ರೀತಿ ಆದಾಯಕ್ಕಿಂತ ಖರ್ಚಿನ ಲೆಕ್ಕಗಳು ಹೆಚ್ಚಾಗಿರುವುದು ಕಂಡು ಬಂದಿದೆ.
ಬಿಬಿಎಂಪಿ ಆಡಳಿತ ವಿಭಾಗದಲ್ಲಿ 112 ಕೋಟಿ ರೂ.ಗಳ ದೊಡ್ಡ ಮೊತ್ತ ಮರು ಪಡೆಯಲಾಗಿದೆ. ರಸ್ತೆ ಕಾಮಗಾರಿ (187.61 ಕೋಟಿ), ಆದಾಯ (ರೂ. 93.33 ಕೋಟಿ), ಆರೋಗ್ಯ (ರೂ. 28.11 ಕೋಟಿ), ಮತ್ತು ಶಿಕ್ಷಣ (ರೂ. 1.63 ಕೋಟಿ). ಸಾರ್ವಜನಿಕ ಸಂಗ್ರಹಣೆಯಲ್ಲಿ ಕರ್ನಾಟಕ ಪಾರದರ್ಶಕತೆ ಕಾಯಿದೆಯಲ್ಲಿ (ಕೆಟಿಪಿಪಿ) ನಿಗದಿಪಡಿಸಿದ ನಿಯಮಗಳನ್ನು ಪಾಲಿಸದ ಕಾರಣ ವಸೂಲಾತಿಗೆ ಕೋರಲಾಗಿದೆ.
ಇನ್ನೂ ಬಿಲ್ಲಿಂಗ್‌ಗಳಿಗೆ ಅನುಮೋದಿಸುವಾಗಲೂ ಡಬಲ್ ಬಿಲ್ಲಿಂಗ್, ಅಪೂರ್ಣ ಕೆಲಸಕ್ಕೆ ಪೂರ್ಣ ಪಾವತಿ ಆಗಿರುವುದು ಕಂಡು ಬದಿದೆ. ಇನ್ನೂ ಜಾಹೀರಾತುದಾರರಿಂದ ಬಾಕಿ ಸಂಗ್ರಹಿಸಲು ವಿಫಲವಾದ ಪ್ರಕರಣಗಳನ್ನು ಲೆಕ್ಕಪರಿಶೋಧಕರು ಪತ್ತೆ ಮಾಡಿದ್ದಾರೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ.












Click it and Unblock the Notifications