ಕೊಳಚೆ ನೀರನ್ನು ರಾಜಕಾಲುವೆಗೆ ಬಿಡುವ ಇಲಾಖೆ 'ಜವಾಬ್ದಾರಿ' ನೋಡಿದ್ರಾ?
ಬೆಂಗಳೂರು, ಸೆಪ್ಟೆಂಬರ್ 20: ಈ ಟ್ವೀಟ್ ನಲ್ಲಿ ಒಂದು ವಿಡಿಯೋ ಇದೆ. ಎಂ. ಲಕ್ಷ್ಮೀಕಾಂತ ಎಂಬುವವರು ಹಂಚಿಕೊಂಡಿರುವ ಈ ವಿಡಿಯೋ ನೋಡಿದರೆ ಸರಕಾರಿ ಇಲಾಖೆಗಳು ಎಷ್ಟು ಚೆನ್ನಾಗಿ ಕೆಲಸ ಮಾಡುತ್ತವೆ ಎಂಬುವುದು ಗೊತ್ತಾಗುತ್ತದೆ. ಅದರಲ್ಲೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಥ ಕೆಲಸ ಮಾಡಿದೆ ಗೊತ್ತೆ?
#BWSSBಯ #ಕರ್ಮಕಾಂಡ!
— Lakshmikantha M (@lakshmikantha_1) 19 September 2018
ಹಾಡಹಗಲೇ ರಾಜಕಾಲುವೆಗೆ (ಪುಟ್ಬಾಲ್ ಸ್ಟೇಡಿಯಂ ಪಕ್ಕದಲ್ಲಿನ ಹ್ಯಾಸ್ ಮಾಟ್ ಹಾಸ್ಪಿಟಲ್ ಎದುರುಗಡೆ) #ಸಾನಿಟರಿ #ಕೊಳಚೆನೀರು ವಿಸರ್ಜನೆ!
ಮಾನ್ಯ @CMofKarnataka @DrParameshwara @chairmanbwssb ಏನ್ರೀ ಸ್ವಾಮಿ ಇದೇನಾ ನಿಮ್ಮ ಆಡಳಿತ! ಸಾರ್ವಜನಿಕರ ಆರೋಗ್ಯ ಲೆಕ್ಕಕ್ಕಿಲ್ವಾ?@rajeev_mp @PCMohanMP @BBMPCOMM pic.twitter.com/WmENeTVz6W
ಬೆಂಗಳೂರಿನ ಫುಟ್ ಬಾಲ್ ಮೈದಾನದ ಪಕ್ಕದಲ್ಲೇ ಇರುವ ಹಾಸ್ ಮ್ಯಾಟ್ ಆಸ್ಪತ್ರೆಯ ಎದುರಿನ ರಾಜ ಕಾಲುವೆಗೆ ಕೊಳಚೆ ನೀರನ್ನು ತಂದುಬಿಟ್ಟಿದೆ. "ಏನ್ರಿ ಸ್ವಾಮಿ ಇದೇನಾ ನಿಮ್ಮ ಆಡಳಿತ! ಸಾರ್ವಜನಿಕರ ಆರೋಗ್ಯ ಲೆಕ್ಕಕ್ಕಿಲ್ವಾ?" ಎಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹಾಗೂ ಬೆಂಗಳೂರು ಜಲ ಮಂಡಳಿಯ ಅಧ್ಯಕ್ಷರನ್ನು ಪ್ರಶ್ನೆ ಮಾಡಲಾಗಿದೆ.

ಬಿಬಿಎಂಪಿ ಆಯುಕ್ತ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಾಗೂ ಸಂಸದ ಪಿ.ಸಿ.ಮೋಹನ್ ಅವರ ಗಮನಕ್ಕೂ ಈ ವಿಚಾರವನ್ನು ತರಲಾಗಿದೆ. ಬೆಂಗಳೂರಿನ ಶಾಂತಿನಗರ ಶಾಸಕ ಹ್ಯಾರಿಸ್ ಅವರ ಮನೆ ಬೀದಿಯಲ್ಲಿ ಒಳಚರಂಡಿ ಸಮಸ್ಯೆ ಆಗಿದ್ದಕ್ಕೆ ಅಲ್ಲಿನ ನೀರು ತಂದು ರಾಜಕಾಲುವೆಗೆ ಬಿಡುತ್ತಿರುವುದಾಗಿ ಹೇಳಿದ್ದಾರಂತೆ. ಅವರಿಗೆ ಆದೇಶ ನೀಡಿದವರು ಎಇ ರಮೇಶ್ ಹಾಗೂ ಎಇಇ ದಿನಕರ್ ಎಂದಿದ್ದಾರೆ. ಈ ಬಗ್ಗೆ ವಿಚಾರಿಸುವವರು ಯಾರು?












Click it and Unblock the Notifications