Breaking:ಬಿಬಿಎಂಪಿ ವಾರ್ಡ್ ಮರುವಿಂಗಡಣೆ: ಹೈಕೋರ್ಟ್‌ನಿಂದ ಅರ್ಜಿಗಳ ವಜಾ
ಬೆಂಗಳೂರು, ಸೆಪ್ಟೆಂಬರ್, 16: ಬಿಬಿಎಂಪಿ ವಾರ್ಡ್ ಪುನರ್ವಿಂಗಡಣೆ ಪ್ರಶ್ನಿಸಿದ್ದರ ಸಂಬಂಧ ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿಗಳನ್ನು ವಜಾ ಮಾಡಿದೆ. ಪ್ರತಿಪಕ್ಷಗಳ ಶಾಸಕರಿರುವ ಕ್ಷೇತ್ರಗಳ ವಾರ್ಡ್ ಸಂಖ್ಯೆ ಕಡಿತಗೊಳಿಸಲಾಗಿದೆ. ಆಡಳಿತ ಪಕ್ಷದ ಶಾಸಕರಿರುವ ವಾರ್ಡ್ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ವಾರ್ಡ್ ಪುನರ್ವಿಂಗಡಣೆ ಪ್ರಶ್ನಿಸಿದ್ದ ಅರ್ಜಿದಾರರ ವಾದ ಮಡಿಸಲಾಗಿತ್ತು.
ಶಾಸಕ ಜಮೀರ್, ಸತೀಶ್ ರೆಡ್ಡಿ ಸೇರಿದಂತೆ ಹಲವು ಅರ್ಜಿ ವಜಾ
ಹೈಕೋರ್ಟ್ ನ್ಯಾ.ಹೇಮಂತ್ ಚಂದನ್ ಗೌಡರ್ ಅರ್ಜಿದಾರಿಗೆ ಎಲ್ಲಾ ಪಕ್ಷಗಳ ಸರ್ಕಾರಗಳೂ ತಮ್ಮ ಅನುಕೂಲದಂತೆ ಪುನರ್ವಿಂಗಡಣೆ ಮಾಡುತ್ತವೆ. ಬಿಬಿಎಂಪಿ ಚುನಾವಣೆ ಶೀಘ್ರ ನಡೆಯುವ ಅಗತ್ಯವನ್ನೂ ಗಮನಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಶಾಸಕ ಜಮೀರ್ ಅಹಮದ್ ಖಾನ್, ಸತೀಶ್ ರೆಡ್ಡಿ ಸೇರಿದಂತೆ ಹಲವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ವಾರ್ಡ್ ಮೀಸಲಾತಿ ಪ್ರಶ್ನಿಸಿದ್ದ ರಿಟ್ ಅರ್ಜಿ ವಿಚಾರಣೆ
ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಶ್ನಿಸಿದ್ದ ರಿಟ್ ಅರ್ಜಿ ವಿಚಾರಣೆ. ಕೆಲ ಕ್ಷೇತ್ರಗಳ ಎಲ್ಲಾ ವಾರ್ಡ್ ಮಹಿಳೆಯರಿಗೆ ಮೀಸಲು. ಹೀಗೆ ಮೀಸಲಾತಿ ನೀಡಲು ಸರ್ಕಾರದ ಮಾನದಂಡವೇನು. ಮೀಸಲಾತಿ ಪ್ರಶ್ನಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆಯನ್ನು ನೀಡಿ ಅರ್ಜಿ ವಿಚಾರಣೆ ಸೆ.21ಕ್ಕೆ ಹೈಕೋರ್ಟ್ ಮುಂದೂಡಿದೆ.

ಶ್ರೀಘ್ರವೇ ಬಿಬಿಎಂಪಿಗೆ ಚುನಾವಣೆಗೆ ಮುಹೂರ್ತ ಫಿಕ್ಸ್
ಇನ್ನು ಹೈಕೋರ್ಟ್ ಚುನಾವಣೆ ನಡೆಯುವ ಪ್ರಸ್ತುತ ಸನ್ನಿವೇಶವನ್ನು ಮನಗಂಡಿರುವುದರಿಂದ ಬಿಬಿಎಂಪಿ ಚುನಾವಣೆ ಶೀಘ್ರವೇ ನಡೆಯುವ ಸಾಧ್ಯತೆಗಳಿವೆ. 2 ಸೆಪ್ಟೆಂಬರ್ 21ಕ್ಕೆ ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಶ್ನಿಸಿದ್ದ ರಿಟ್ ಅರ್ಜಿ ವಿಚಾರಣೆಯು ನಡೆಯುವುದರಿಂದ ಹೈಕೋರ್ಟ್ ಮೀಸಲಾತಿ ಪ್ರಶ್ನಿಸಿರುವ ಅರ್ಜಿಯನ್ನು ವಜಾ ಮಾಡಿದರೇ ಬಿಬಿಎಪಿ ಚುನಾವಣೆ ಶೀಘ್ರದಲ್ಲಿ ನಡೆಯುವ ಸಾಧ್ಯತೆಗಳಿವೆ.












Click it and Unblock the Notifications