ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿದಂಬರಂ ಬಜೆಟ್ ನಂತರ ಶಿವಪ್ರಸಾದ್ ಬಜೆಟ್

|
Google Oneindia Kannada News

ಬೆಂಗಳೂರು, ಫೆ.17 : ಅತ್ತ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ 2014-15ರ ಮಧ್ಯಂತರ ಬಜೆಟ್ ಮಂಡನೆ ಮಾಡಿ ಮುಗಿಸಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಡಾ.ಕೆ.ಶಿವಪ್ರಸಾದ್ ಮಧ್ಯಾಹ್ನ 3 ಗಂಟೆಗೆ ಬಿಬಿಎಂಪಿ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 2014-15ರ ಬಜೆಟ್ ಅನ್ನು ಸೋಮವಾರ ಮಂಡಿಸಲಿದೆ.

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನೆರವುಗಳನ್ನು ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಿರುವ ಆಯವ್ಯಯವನ್ನು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಸೋಮವಾರ ಮಧ್ಯಾಹ್ನ 3ಗಂಟೆಗೆ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಮಂಡಿಸಲಿದ್ದಾರೆ. [ಚಿದಂಬರಂ ಬಜೆಟ್ ನಲ್ಲೇನಿದೆ?]

bbmp

ಬೆಂಗಳೂರಿನ ಜನರ ಮೇಲೆ ಹೊಸ ತೆರಿಗೆ ಹೊರೆ ಹೇರದೆ, ಬೆರಳೆಣಿಕೆಯಷ್ಟು ಹೊಸ ಯೋಜನೆಗಳನ್ನು ಮಾತ್ರ ಒಳಗೊಂಡಿರುವ ಸುಮಾರು 8 ಸಾವಿರ ಕೋಟಿ ಮೊತ್ತದ ಬಜೆಟ್ ಅನ್ನು ಮಂಡಿಸಲಾಗುತ್ತದೆ. ಗುತ್ತಿಗೆದಾರರಿಗೆ ಬಿಲ್ ಪಾವತಿ ಮತ್ತು ನಡೆಯುತ್ತಿರುವ ಕಾಮಗಾರಿಗಳಿಗೆ ಅನುದಾನ ಒದಗಿಸಲು ಬಜೆಟ್ ಆದ್ಯತೆ ನೀಡುವ ಸಾಧ್ಯತೆ ಇದೆ. [ಬಿಬಿಎಂಪಿ 2013ರ ಬಜೆಟ್ ಮುಖ್ಯಾಂಶಗಳು]

ಪಾಲಿಕೆ ಈಗಾಗಲೇ 1800ಕೋಟಿ ಗುತ್ತಿಗೆದಾರರ ಬಾಕಿ ಉಳಿಸಿಕೊಂಡಿದೆ. ಇದರೊಂದಿಗೆ 1500 ಕೋಟಿಗೂ ಹೆಚ್ಚಿನ ಸಾಲದ ಹೊರೆ ಇದೆ. ನಗರದಲ್ಲಿನ ಟ್ರಾಫಿಕ್ ಜಾಮ್ ತಪ್ಪಿಸಲು ಅನೇಕ ಸಂಚಾರ ಸುಧಾರಣೆ, ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ. [ಸಿದ್ದರಾಮಯ್ಯ ಬಜೆಟ್ ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು?]

ಅಂದಹಾಗೆ ಕಳೆದ ಬಾರಿ ಮೇಯರ್ ಆಗಿದ್ದ ಡಿ.ವೆಂಕಟೇಶಮೂರ್ತಿ 10,000 ಕೋಟಿಗೂ ಮೀರಿದ ಬಜೆಟ್ ಮಂಡಿಸಿದ್ದರು. ಆದರೆ, ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈ ಬಾರಿ ಬಜೆಟ್ ಗಾತ್ರವನ್ನು 7.5ಸಾವಿರ ಕೋಟಿಯಿಂದ 8 ಸಾವಿರ ಕೋಟಿ ಮಿತಿಯಲ್ಲಿ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.

English summary
Bangaloreans, who were disappointed that the State Budget did not hold much for the city, are looking with hope at the Bruhat Bangalore Mahanagara Palike (BBMP). The civic body is all set to present its budget for 2014-15 on Monday. The budget will be presented by the chairperson of the BBMP’s Standing Committee for Taxation and Finance, M.S. Shivaprasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X