ವಿದ್ಯಾರ್ಥಿಗಳಿಗಾಗಿ ಬಿಬಿಎಂಪಿ 'ಬೆಳಕು' ವಿಶಿಷ್ಟ ಯೋಜನೆ- ಏನಿದು? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು, ಆಗಸ್ಟ್ 10: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಬಿಬಿಎಂಪಿ ಹೊಸ ಯೋಜನೆಯೊಂದನ್ನು ರೂಪಿಸಿದೆ. ಅಷ್ಟೇ ಅಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದವರ ಮಕ್ಕಳಿಗಾಗಿ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರಗಳನ್ನು ನಿರ್ಮಿಸಲಿದೆಯಂತೆ. ಇಷ್ಟಕ್ಕೂ ಈ ಯೋಜನೆ ಯಾವುದು. ಇದರ ಉದ್ದೇಶ ಏನು ? ಅನ್ನೋದರ ವಿಶೇಷ ವರದಿ 'ಒನ್‌ಇಂಡಿಯಾ ಕನ್ನಡ'ದಲ್ಲಿ.

ಬಡ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೋ, ಬಿಬಿಎ‍ಪಿ ಶಾಲೆಗಳಿಗೋ ದಾಖಲಾತಿಯನ್ನು ಮಾಡುತ್ತಾರೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಶಾಲೆಗಳು ಪ್ರಯತ್ನವನ್ನು ಮಾಡಿದರು ಕೆಲವು ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುತ್ತಾರೆ. ಕೆಲವು ಖಾಸಗಿ ಶಾಲೆಗಳಲ್ಲಿ ಶಾಲಾ ಸಮಯದ ನಂತರ ಟ್ಯೂಷನ್ ಹೇಳಿಕೊಡುವಂತೆ ಬಿಬಿಎಂಪಿಯು ಯೋಜನೆಯನ್ನು ರೂಪಿಸಿದೆ.

ಬಿಬಿಎಂಪಿ ಶಾಲೆಯಲ್ಲಿ 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶೇ 70 ಉತ್ತೀರ್ಣರಾಗಿದ್ದರು. ಈ ಫಲಿತಾಂಶವನ್ನು ಉತ್ತಮ ಪಡಿಸುವ ಸಲುವಾಗಿ ಬಿಬಿಎಂಪಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ವಿಶೇಷವಾಗಿ ಟ್ಯೂಷನ್ ತೆಗೆದುಕೊಂಡು ಮಕ್ಕಳಿಗೆ ಅನುಕೂಲ ಮಾಡಿಕೊಡಲಿದೆ.

 ಸಂಜೆ 5.30ರಿಂದ 7 ಗಂಟೆವರೆಗೆ ಟ್ಯೂಷನ್

ಸಂಜೆ 5.30ರಿಂದ 7 ಗಂಟೆವರೆಗೆ ಟ್ಯೂಷನ್

ಬಿಬಿಎಂಪಿ ಎಂದರೆ ಎಲ್ಲರೂ ಕೂಡಾ ಒಂದಲ್ಲಾ ಒಂದು ವಿಚಾರದಲ್ಲಿ ಮೂಗು ಮುರೀತಾರೆ. ಆದರೆ ಆಗಾಗ ಬಿಬಿಎಂಪಿ ಕೂಡಾ ಒಂದು ಒಳ್ಳೆ ಕೆಲಸಗಳನ್ನ ಮಾಡುತ್ತಿರುತ್ತೆ. ಆದರೆ ಅದು ಅದು ಪ್ರಚಾರಕ್ಕೆ ಬರದಂತೆ ಮತ್ತೊಂದು ತಿರುವು ಪಡೆದು ಅದೂ ಕೂಡಾ ವ್ಯರ್ಥವಾಗೋದು ಸಹಜವಾಗಿದೆ. ಆದರೆ ಈ ಬಾರಿ ಆ ರೀತಿ ಆಗಬಾರದು. ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಅನುಕೂಲವಾಗಬೇಕು ಅಂತ ಬಿಬಿಎಂಪಿ ಕಲ್ಯಾಣ ವಿಭಾಗ ರಾಜ್ಯದಲ್ಲಿಯೇ ಮೊದಲನೆ ಬಾರಿಗೆ ಒಂದು ಹೊಸ ಯೋಜನೆಯನ್ನ ರೂಪಿಸುತ್ತಿದೆ. ಅದರ ಹೆಸರೇ ವಿದ್ಯಾರ್ಥಿ ಬೆಳಕು ಶಿಕ್ಷಣ ಕೇಂದ್ರ ಅಂತ. ಇದರ ಉದ್ದೇಶ ಏನು ಅಂದ್ರೆ ಕೊಳಗೇರಿ ಪ್ರದೇಶ, ಆರ್ಥಿಕ ಹಿಂದುಳಿದವರು ಹೆಚ್ಚಾಗಿರುವ ಪ್ರದೇಶದಲ್ಲಿ ಶಿಕ್ಷಣ ದಿಂತ ಬಡ ಮಕ್ಕಳು ವಂಚಿತರಾಗಿರುತ್ತಾರೆ. ಅಷ್ಟೇ ಅಲ್ಲದೆ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಮಕ್ಕಳ ಜೊತೆ ಬಿಬಿಎಂಪಿ ಶಾಲೆಯ ಮಕ್ಕಳು ಕಾಂಪಿಟೇಟ್ ಮಾಡಲು ಸಾದ್ಯವಾಗುತ್ತಿಲ್ಲ. ಇದರಿಂದ ಸಂಜೆ 5:30 ರಿಂದ 7 ಗಂಟೆಯ ವರೆಗೂ ಉಚಿತ ಟ್ಯೂಷನ್ ನೀಡಲು ಬಿಬಿಎಂಪಿ ಚಿಂತಿಸಿದೆ.

 ಬಿಬಿಎಂಪಿ ಶಾಲಾ ಕೊಠಡಿಯಲ್ಲಿಯೇ ಟ್ಯೂಷನ್

ಬಿಬಿಎಂಪಿ ಶಾಲಾ ಕೊಠಡಿಯಲ್ಲಿಯೇ ಟ್ಯೂಷನ್

3ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಈ ಯೋಜನೆಯಿಂದ ಅನುಕೂಲವಾಗಲಿದ್ದು. ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆ, ತರಬೇತಿ, ಹೋಂ ವಕ್೯ ಮಾಡಲು ಅನುಕೂಲವಾಗುವಂತಹ ವಾತಾವರಣ ನಿರ್ಮಿಸಲಾಗುತ್ತಿದೆ. ಸದ್ಯ ಆರಂಭಿಕವಾಗಿ "ರಾಜ್ಯದಲ್ಲಿಯೇ ಮೊದಲನೇ ಬಾರಿಗೆ ಕೆಲವು ಪ್ರದೇಶಗಳಲ್ಲಿ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ ಆರಂಭಿಸಲಾಗುತ್ತಿದ್ದು. ಯೋಜನೆಗಾಗಿ ಬಿಬಿಎಂಪಿಯ ಶಾಲಾ ಕೊಠಡಿಗಳನ್ನು ಬಳಸಲಾಗುತ್ತದೆ. ಕಲಿಕೆಯ ಜತೆಗೆ ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯ ವೃದ್ಧಿ ತರಬೇತಿಯನ್ನೂ ನೀಡಲಾಗುತ್ತೆ" ಅಂತ ಬಿಬಿಎಂಪಿ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

 ಯಾವ ಏರಿಯಾ ಯಾವವ ಶಾಲೆ

ಯಾವ ಏರಿಯಾ ಯಾವವ ಶಾಲೆ

1. ಕ್ಲೀವ್ ಲ್ಯಾಂಡ್ ಟೌನ್ ಬಿಬಿಎಂಪಿ ಶಾಲಾ-ಕಾಲೇಜು
2. ಭೈರವೇಶ್ವರ ನಗರ ಬಿಬಿಎಂಪಿ ಶಾಲಾ-ಕಾಲೇಜು
3 .ಶ್ರೀರಾಮಪುರ ಬಿಬಿಎಂಪಿ ಶಾಲಾ-ಕಾಲೇಜು
4. ಕಸ್ತೂರಿ ಬಾ ನಗರ ಬಿಬಿಎಂಪಿ ಶಾಲಾ-ಕಾಲೇಜು
5. ಆಸ್ಟೀನ್‌ಟೌನ್ ಬಾಲಕರ ಶಾಲೆ
6. ಗಂಗಾನಗರ ಪಾಲಿಕೆ ಪ್ರೌಢ ಶಾಲೆ
7. ಪಾದರಾಯನಪುರ ಪಾಲಿಕೆ ಶಾಲಾ -ಕಾಲೇಜು
8. ಮತ್ತೀಕೆರೆ ಬಿಬಿಎಂಪಿ ಶಾಲಾ-ಕಾಲೇಜು
9. ವಿಜಯನಗರ ಬಿಬಿಎಂಪಿ ಶಾಲಾ-ಕಾಲೇಜು
10. ಪಿಳ್ಳಣ್ಣ ಗಾರ್ಡ್‌ನ್ ಬಿಬಿಎಂಪಿ ಶಾಲಾ-ಕಾಲೇಜು
ಈ 10 ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ ಬಿಬಿಎಂಪಿ ಶಾಲಾ ಕಟ್ಟಡದಲ್ಲಿಯೇ ಟ್ಯೂಷನ್ ನಡೆಸಲು ಸಿದ್ದತೆಯನ್ನು ನಡೆಸಿದೆ.

 ಸ್ವಯಂ ಸೇವಕರ ಮೂಲಕವು ತರಬೇತಿ

ಸ್ವಯಂ ಸೇವಕರ ಮೂಲಕವು ತರಬೇತಿ

ನೂತನ ವಿದ್ಯಾರ್ಥಿ ಬೆಳಕು ಶಿಕ್ಷಣ ಕೇಂದ್ರಗಳ ನಿರ್ವಹಣೆಗೆ ಸ್ಥಳೀಯ ಸಂಘದ ಸಂಸ್ಥೆಗಳು ಈ ಅಧ್ಯಯನ ಕೇಂದ್ರಗಳ ಉಸ್ತುವಾರಿ ನೀಡಲಿದ್ದು. ಮಕ್ಕಳ ಕಲಿಕೆಗೆ ಅಗತ್ಯವಿರುವ ಕಲಿಕಾ ಸಾಮಗ್ರಿ ನಿರ್ವಹಣಾ ಸಂಸ್ಥೆಯೇ ಪೂರೈಸಲಿದ್ದು. ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ ಸ್ವಯಂ ಸೇವಕ ಯುವಕ, ಯುವತಿಯರ ಮೂಲಕ ಮಕ್ಕಳಿಗೆ ಬೋಧನೆ, ತರಬೇತಿ ನೀಡಲು ಚಿಂತಿಸಿದ್ದು. ಈ ನೂತನ ಹೊಚ್ಚ ಹೊಸ ಯೋಜನೆ ಬಡ ಮಕ್ಕಳಿಕೆ ಅನುಕೂಲ ವಾಗಲಿದೆ.

Recommended Video

      Bihar Politics : ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಾ ಪಲ್ಟಿ ರಾಜಕೀಯ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+