Manyata Tech Park: ಬೆಂಗಳೂರು ಟೆಕ್ಕಿಗಳಿಗೆ ಸಿಹಿಸುದ್ದಿ ಕೊಟ್ಟ ಬಿಬಿಎಂಪಿ
ಬೆಂಗಳೂರು, ಮೇ. 20: ಸಿಲಿಕಾನ್ ಸಿಟಿಯಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಆಗುವ ಸ್ಥಳಗಳಲ್ಲಿ ಹೆಬ್ಬಾಳ ಜಂಕ್ಷನ್ ಕೂಡ ಒಂದು. ಹೆಬ್ಬಾಳ ಫ್ಲೈ ಓವರ್ ಮತ್ತು ಥಣಿಸಂದ್ರ ರಸ್ತೆಗಳ ಟ್ರಾಫಿಕ್ ಜಾಮ್‌ನಲ್ಲಿ ವಾಹನಗಳು ಸಿಲುಕಿಕೊಂಡರೆ ಮುಗಿಯಿತು. ಹೊರ ಬರುವುದು ನಿಜಕ್ಕೂ ಕಷ್ಟ. ಇದರಿಂದ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುವ ಟೆಕ್ಕಿಗಳು ಪರದಾಡುತ್ತಾರೆ.
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಸಾವಿರಾರು ಉದ್ಯೋಗಿಗಳ ಅನ್ನದ ತಾಣವಾಗಿದೆ. ಪ್ರತಿದಿನ ಇಲ್ಲಿಗೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ವಾಹನಗಳ ಸಂಖ್ಯೆ ಕೂಡ ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುತ್ತದೆ. ಇದನ್ನು ಪರಿಹರಿಸಲು ಬಿಬಿಎಂಪಿ ಮತ್ತು ಸಂಚಾರಿ ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ.

ಮಾನ್ಯತಾ ಪಾರ್ಕ್ ಬಳಿ ಚತುಷ್ಪಥ ರಸ್ತೆ
ಈಶಾನ್ಯ ಬೆಂಗಳೂರಿನ ರಾಯಭಾರ ಕಚೇರಿ ಮಾನ್ಯತಾ ಬ್ಯುಸಿನೆಸ್ ಪಾರ್ಕ್ ಮತ್ತು ಭಾರತನಗರವನ್ನು ಸಂಪರ್ಕಿಸುವ ಹೊಸ ಚತುಷ್ಪಥ ರಸ್ತೆ ನಿರ್ಮಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಇದರಿಂದ ವಾಹನ ಸಂಚಾರ ಸರಾಗವಾಗಲಿದ್ದು, ಟೆಕ್ಕಿಗಳಿಗೆ ತಮ್ಮ ಕೆಲಸದ ಸ್ಥಳಗಳಿಗೆ ಹೋಗಲು ಸುಲಭವಾಗಲಿದೆ.
ಥಣಿಸಂದ್ರ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಈ ಹೊಸ 750 ಮೀಟರ್ ಲಿಂಕ್ ರಸ್ತೆಯು ಪರಿಷ್ಕೃತ ಮಾಸ್ಟರ್ ಪ್ಲಾನ್ (RMP) 2015 ರ ಭಾಗವಾಗಿದೆ. ಆದರೆ ವರ್ಷಗಳಿಂದ ಹಾಗೆ ಉಳಿಸದಿದೆ. ಈ ರಸ್ತೆ ನಿರ್ಮಾಣದಿಂದ ಹೆಬ್ಬಾಳ ಜಂಕ್ಷನ್‌ನಲ್ಲಿ ಜನದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ 750 ಮೀಟರ್ ಲಿಂಕ್ ರಸ್ತೆಯು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ 750 ಮೀಟರ್ ಲಿಂಕ್ ರಸ್ತೆಯನ್ನು 2.57 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಸತ್ಯ ಕನ್‌ಸ್ಟ್ರಕ್ಷನ್ಸ್‌ಗೆ ಲಿಂಕ್ ರಸ್ತೆಯನ್ನು ನಿರ್ಮಿಸುವ ಕಾಮಗಾರಿಯನ್ನು ಬಿಬಿಎಂಪಿ ನೀಡಿದೆ.












Click it and Unblock the Notifications