Stray dogs in Bengaluru: ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಇಳಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ಸಮೀಕ್ಷೆಯಲ್ಲಿ 2019 ರಿಂದ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ 31,000 ರಷ್ಟು ಕಡಿಮೆಯಾಗಿದೆ ಎಂದು ಬಹಿರಂಗವಾಗಿದೆ. ಬಿಬಿಎಂಪಿ ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ 2.8 ಲಕ್ಷವಿದ್ದು 2019 ರಲ್ಲಿದ್ದ ಬೀದಿ ನಾಯಿಗಳ ಸಂಖ್ಯೆಗಿಂತ 31,000 ಕಡಿಮೆಯಾಗಿದೆ.

ಬೆಂಗಳೂರು ನಾಗರಿಕ ಸಂಸ್ಥೆಯು ಜುಲೈನಲ್ಲಿ ನಗರದಾದ್ಯಂತ 14 ದಿನಗಳ ಬೀದಿ ನಾಯಿ ಸಮೀಕ್ಷೆಯನ್ನು ಪ್ರಾರಂಭಿಸಿತು. 2019 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ಇಂತಹ ಕೊನೆಯ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಆಗ ಬೀದಿನಾಯಿಗಳ ಸಂಖ್ಯೆ 3.1 ಲಕ್ಷದಷ್ಟಿತ್ತು.

bbmp-survey-bengalurus-stray-dog-population

ಆದರೆ, ಬೀದಿನಾಯಿಗಳ ಸಂಖ್ಯೆ ತೀವ್ರವಾಗಿ ಕುಸಿಯಲು ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ. ಕೋವಿಡ್ ಸಮಯದಲ್ಲಿ ಆಹಾರದ ಕೊರತೆ ಅಥವಾ ಇತರ ವೈದ್ಯಕೀಯ ಕಾರಣಗಳು ಇದಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

100 ಸಿಬ್ಬಂದಿಯಿಂದ ಸಮೀಕ್ಷೆ

ಬಿಬಿಎಂಪಿಯಿಂದ 50 ಹಾಗೂ ಪಶುಸಂಗೋಪನಾ ಇಲಾಖೆಯ 50 ಸಿಬ್ಬಂದಿ ಸೇರಿದಂತೆ ಒಟ್ಟು 100 ಸಿಬ್ಬಂದಿಯನ್ನು ಸಮೀಕ್ಷೆಗೆ ನಿಯೋಜಿಸಲಾಗಿತ್ತು. ಪ್ರತಿ ವಾರ್ಡ್ ನಲ್ಲಿ ಬೈಕ್ ಗಳಲ್ಲಿ ಸಿಬ್ಬಂದಿ ಸಮೀಕ್ಷೆ ನಡೆಸಿದರು.

ಬಿಬಿಎಂಪಿ ವ್ಯಾಪ್ತಿ 709 ಚದರ ಕಿ.ಮೀ ವಿಸ್ತಾರವಾಗಿದೆ ದಕ್ಷಿಣ ವಲಯ, ಪೂರ್ವ ವಲಯ ಮತ್ತು ಪಶ್ಚಿಮ ವಲಯಗಳಲ್ಲಿ ಗರಿಷ್ಠ ಸಂಖ್ಯೆಯ ನಾಯಿಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂಟು ಎಂಟುವಲಯಗಳಲ್ಲಿ ಪೂರ್ವ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳಿದ್ದು, ದಕ್ಷಿಣ ವಲಯ ಎರಡನೇ ಸ್ಥಾನದಲ್ಲಿದೆ. ಯಲಹಂಕದಲ್ಲಿ ಕಡಿಮೆ ಸಂಖ್ಯೆಯಲ್ಲಿ ಬೀದಿ ನಾಯಿಗಳಿದ್ದು ಕೊನೆಯ ಸ್ಥಾನದಲ್ಲಿದೆ.

ಸಂತಾನಹರಣ ಚಿಕಿತ್ಸೆ

2019ರಲ್ಲಿ ನಡೆಸಿದ ಬೀದಿನಾಯಿಗಳ ಸಮೀಕ್ಷೆಯಲ್ಲಿ ಒಟ್ಟು ನಾಯಿಗಳ ಸಂಖ್ಯೆಯ ಶೇ.54 ರಷ್ಟು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿತ್ತು. ಈ ಬಾರಿ ಮಾಡಿರುವ ಸಮೀಕ್ಷೆಯ ಪ್ರಕಾರ ಬೆಂಗಳೂರಿನ ಒಟ್ಟು ಬೀದಿನಾಯಿಗಳ ಪೈಕಿ ಶೇ. 70ರಷ್ಟು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಶೇ.16 ರಷ್ಟು ಶಸ್ತ್ರ ಚಿಕಿತ್ಸೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಇನ್ನೂ 30 ಪ್ರತಿಶತ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದು ಬಾಕಿಇದ್ದು, ಮುಂದಿನ ಎರಡು-ಮೂರು ವರ್ಷಗಳಲ್ಲಿ ಸಂತಾನಹರಣ ಚಿಕಿತ್ಸೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+