ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕೊರೊನಾ ವೈರಸ್ ಹಾಟ್‌ಸ್ಪಾಟ್‌ಗಳ ಸಂಖ್ಯೆಯಲ್ಲಿ ಇಳಿಮುಖ

|
Google Oneindia Kannada News

ಬೆಂಗಳೂರು, ಏ. 16: ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಕೊಂಚ ಸಮಾಧಾನದ ಸಂಗತಿ ಬಿಬಿಎಂಪಿ ವ್ಯಾಪ್ತಿಯಿಂದ ಬಂದಿದೆ. ಬೆಂಗಳೂರಿನ ಹೊರೊನಾ ವೈರಸ್ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆಯಲ್ಲಿ ಸ್ವಲ್ಪ ಇಳಿಮುಖವಾಗಿದ್ದು, ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿದ್ದ 2 ವಾರ್ಡ್‌ಗಳನ್ನು ಪಟ್ಟಿಯಿಂದ ಬಿಡಲಾಗಿದೆ. ಈ ಹಿಂದೆ ಸೋಂಕು ಪತ್ತೆಯಾಗಿದ್ದ ಬೆಂಗಳೂರಿನ 7 ವಲಯಗಳ 34 ವಾರ್ಡ್‌ಗಳನ್ನು ಕೊರೊನಾ ಹಾಟ್‌ಸ್ಪಾಟ್‌ ಪ್ರದೇಶಗಳೆಂದು ಗುರುತಿಸಲಾಗಿತ್ತು.

ಬಿಬಿಎಂಪಿ ಇವತ್ತು ಬಿಡುಗಡೆ ಮಾಡಿರುವ ಹಾಟ್‌ಸ್ಪಾಟ್‌ ವಾರ್ಡ್‌ಗಳ ಪಟ್ಟಿಯಿಂದ 2 ವಾರ್ಡ್‌ಗಳನ್ನು ಕೈಬಿಡಲಾಗಿದೆ. ಹೀಗಾಗಿ ಹಾಟ್‌ಸ್ಪಾಟ್‌ ವಾರ್ಡ್‌ಗಳ ಸಂಖ್ಯೆ 34 ರಿಂದ 32ಕ್ಕೆ ಇಳಿಕೆಯಾಗಿದ್ದು, ಬಿಬಿಎಂಪಿಯ 7 ವಲಯಗಳ 32 ವಾರ್ಡ್‌ಗಳನ್ನು ಕೊರೊನಾ ವೈರಸ್ ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. ಕಳೆದ 28 ದಿನಗಳಿಂದ ಹೊಸ ಸೋಂಕಿತರು ಪತ್ತೆಯಾಗದ್ದರಿಂದ 2 ವಾರ್ಡ್‌ಗಳನ್ನು ಪಟ್ಟಿಯಿಂದ ಬಿಡಲಾಗಿದೆ. ಸತತವಾಗಿ 28 ದಿನಗಳ ವರೆಗೆ ಕೊರೊನಾ ವೈರಸ್ ಸೋಂಕಿತರು ಪತ್ತೆ ಆಗದಿದ್ದಲ್ಲಿ ಅಂತಹ ಪ್ರದೇಶಗಳನ್ನು ಕೊರೊನಾ ಹಾಟ್‌ಸ್ಪಾಟ್‌ ಪಟ್ಟಿಯಿಂದ ಕೈಬಿಡಲಾಗುತ್ತದೆ.

BBMP range hotspot wards have fallen from 32 to 32.

ಬಿಬಿಎಂಪಿಯ 7 ವಲಯಗಳ 32 ಹಾಟ್‌ಸ್ಪಾಟ್‌ ವಾರ್ಡ್‌ಗಳು ಹೀಗಿವೆ:

ಮಹಾದೇವಪುರ ವಲಯದ 7 ವಾರ್ಡ್‌ಗಳು: ಹಾಟ್‌ಸ್ಪಾಟ್‌ ವಾರ್ಡ್‌ಗಳೆಂದು ಗುರುತಿಸಲಾಗಿದೆ. ವಾರ್ಡ್‌ ನಂ.

25 ಹೊರಮಾವು, ವಾರ್ಡ್‌ ನಂ. 54 ಹೂಡಿ, ವಾರ್ಡ್‌ ನಂ. 82 ಗರುಡಾಚಾರ್ಯಪಾಳ್ಯ, ವಾರ್ಡ್‌ ನಂ. 84 ಹಗದೂರು, ವಾರ್ಡ್‌ ನಂ. 149 ವರ್ತೂರು.

ಪೂರ್ವ ವಲಯದ 9 ವಾರ್ಡ್‌ಗಳು: ಹಾಟ್‌ಸ್ಪಾಟ್‌ ವಾರ್ಡ್‌ಗಳೆಂದು ಗುರುತಿಸಲಾಗಿದೆ. ವಾರ್ಡ್‌ ನಂ. 49 ಲಿಂಗರಾಜಪುರ, 57 ಸಿವಿ ರಾಮನ್ ನಗರ, 58 ಹೊಸ ತಿಪ್ಪಸಂದ್ರ, 59 ಮಾರುತಿ ಸೇವಾ ನಗರ, 62 ರಾಮಸ್ವಾಮಿ ಪಾಳ್ಯ, 80 ಹೊಯ್ಸಳ ನಗರ, 93 ವಸಂತ ನಗರ ಹಾಗೂ ವಾರ್ಡ್‌ ನಂ. 112 ದೊಮ್ಮಲೂರು.

ದಕ್ಷಿಣ ವಲಯದ 9 ವಾರ್ಡ್‌ಗಳು: ವಾರ್ಡ್‌ ನಂ. 118 ಸುಧಾಮನಗರ, 124 ಹೊಸಹಳ್ಳಿ, 132 ಅತ್ತಿಗುಪ್ಪೆ, 134 ಬಾಪೂಜಿ ನಗರ, 148 ಈಜಿಪುರ, 171 ಗುರಪ್ಪನಪಾಳ್ಯ, 177 ಜೆಪಿ ನಗರ ಹಾಗೂ 179 ಶಾಖಾಂಬರಿ ನಗರ.

ಪಶ್ಚಿಮ ವಲಯದ 7 ವಾರ್ಡ್‌ಗಳು: ವಾರ್ಡ್‌ ನಂ. 64 ಜಾರಮಹಲ್, 95 ಸುಭಾಸ್ ನಗರ, 128 ನಾಗರಭಾವಿ, 67 ನಾಗಪುರ, 107 ಶಿವನಗರ, 135 ಪಾದರಾಯನಪುರ ಹಾಗೂ 139 ಕೆ ಆರ್ ಮಾರ್ಕೆಟ್.

ಬೊಮ್ಮನಹಳ್ಳಿ ವಲಯದ 2 ವಾರ್ಡ್‌ಗಳು: ವಾರ್ಡ್‌ ನಂ. 191 ಸಿಂಗಸಂದ್ರ, ವಾರ್ಡ್‌ ನಂ. 192 ಬೇಗೂರು.

ಯಲಹಂಕ ವಲಯದ 2 ವಾರ್ಡ್‌ಗಳು: ವಾರ್ಡ್ ನಂ. 6 ಥಣಿಸಂದ್ರ ಹಾಗೂ ವಾರ್ಡ್‌ ನಂ. 7 ಬ್ಯಾಟರಾಯನಪುರ

ಆರ್ ಆರ್ ನಗರ ವಲಯದ ವಾರ್ಡ್‌ ನಂ. 160 ಆರ್ ಆರ್ ನಗರ ವಾರ್ಡ್‌ನ್ನು ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿರುವ ವಾರ್ಡ್‌ಗಳಲ್ಲಿ ಸೋಂಕು ನಿಯಂತ್ರಣಕ್ಕೆ ಸಿಗದೆ ಇದ್ದಲ್ಲಿ ಸೀಲ್‌ಡೌನ್ ಬಿಬಿಎಂಪಿ ಸೀಲ್‌ಡೌನ್ ಮಾಡಬಹುದಾಗಿದೆ.

English summary
BBMP range hotspot wards have fallen from 32 to 32. Such areas will be left off the Corona Hotspot list if they are not detected by Coronavirus infection for 28 consecutive days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X