29 ಹೊಸ ಸ್ಕೈವಾಕ್ ನಿರ್ಮಾಣಕ್ಕೆ ಮುಂದಾದ ಬಿಬಿಎಂಪಿ

ಬೆಂಗಳೂರು, ಮೇ 14 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಹೊಸದಾಗಿ 29 ಸ್ಕೈವಾಕ್ ನಿರ್ಮಾಣ ಮಾಡಲು ಮುಂದಾಗಿದೆ. ಪಾಲಿಕೆ ಮೊದಲು ಘೋಷಣೆ ಮಾಡಿದ್ದ 153 ಸ್ಕೈ ವಾಕ್‌ಗಳ ನಿರ್ಮಾಣ ಕಾರ್ಯವೇ ಇನ್ನೂ ಪೂರ್ಣಗೊಂಡಿಲ್ಲ.

ಬೆಂಗಳೂರು ಸಂಚಾರಿ ಪೊಲೀಸರು ಮತ್ತು ಜನರ ಒತ್ತಡದಿಂದಾಗಿ 29 ಹೊಸ ಸ್ಕೈವಾಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ. ಅತ್ಯಗತ್ಯವಾದ ಸ್ಥಳಗಳಲ್ಲಿ ಇವುಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಬಿಎಂಪಿ ಮೊದಲು 153 ಸ್ಕೈ ವಾಕ್ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿತ್ತು. ಇವುಗಳಲ್ಲಿ 37 ಮಾತ್ರ ನಿರ್ಮಾಣಗೊಂಡಿವೆ. ಉಳಿದವುಗಳನ್ನು ನಿರ್ಮಾಣ ಮಾಡುವ ಬದಲು ಬಿಬಿಎಂಪಿ ಹೊಸದಾಗಿ 29 ಸ್ಕೈವಾಕ್ ನಿರ್ಮಾಣಕ್ಕೆ ಮುಂದಾಗಿದೆ.

skywalks

'ಹಲವು ಸ್ಕೈವಾಕ್‌ಗಳ ಕೆಲಸ ಸ್ಥಗಿತಗೊಂಡಿದೆ. ಇನ್ನೂ ಕೆಲವು ಕಡೆ, ವೈಟ್ ಟಾಪಿಂಗ್ ರಸ್ತೆ, ಮೆಟ್ರೋ ಫ್ಲೈ ಓವರ್ ಬಂದ ಕಾರಣ ಕಾಮಗಾರಿಯನ್ನು ಆರಂಭಿಸಿಲ್ಲ. ಕಲವು ಕಡೆಗಳಲ್ಲಿ ಬಿಲ್ಡರ್‌ಗಳು ಕಾಮಗಾರಿ ಆರಂಭಿಸಲು ಆಸಕ್ತಿ ತೋರಿಸುತ್ತಿಲ್ಲ' ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಪಿಪಿಪಿ ಮಾದರಿಯಲ್ಲಿ ಕೆಲವು ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ. ಅತ್ಯಗತ್ಯ ಇರುವ ಪ್ರದೇಶಗಳಲ್ಲಿ ಹೊಸ ಸ್ಕೈವಾಕ್ ನಿರ್ಮಾಣವಾಗುತ್ತಿದೆ. ಇದಕ್ಕೆ ಡಿಪಿಆರ್ ಸಿದ್ಧವಾಗಿದೆ. 50 ಕೋಟಿ ವೆಚ್ಚದಲ್ಲಿ ಇವುಗಳನ್ನು ನಿರ್ಮಾಣ ಮಾಡಲಾಗುತ್ತಿದೆ' ಎಂದು ಹೇಳಿದರು.

ಹೊಸದಾಗಿ ನಿರ್ಮಾಣವಾಗುತ್ತಿರುವ ಸ್ಕೈವಾಕ್ ಮತ್ತು ಹಳೆಯ ಸ್ಕೈವಾಕ್‌ಗಳಲ್ಲಿ ಲಿಫ್ಟ್‌ಗಳನ್ನು ಆನ್‌ಲೈನ್ ಮೂಲಕ ನಿರ್ವಹಣೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಬಾಷ್ ಕಂಪನಿ ಇವುಗಳನ್ನು ನಿರ್ವಹಣೆ ಮಾಡುವ ಸೆನ್ಸಾರ್ ಅನ್ನು ನಿರ್ಮಿಸಲು ಆಸಕ್ತಿ ತೋರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+