ಸುರಕ್ಷತಾ ನಿಯಮ ಪಾಲಿಸದ ರೂಫ್ ಟಾಪ್ ಬಾರ್ ಗಳ ಪಟ್ಟಿ ಶೀಘ್ರ ಬಿಡುಗಡೆ

ಬೆಂಗಳೂರು, ಫೆಬ್ರವರಿ 24: ನಗರದಲ್ಲಿರುವ ರೂಫ್ ಟಾಪ್ ಪಬ್ ಮತ್ತು ಬಾರ್ ಗಳಲ್ಲಿ ಅಗ್ನಿ ಅವಘಡ ಸಂಭವಿಸುತ್ತಿದೆ. ಹಾಗಾಗಿ ಸುರಕ್ಷತಾ ನಿಯಮಗಳನ್ನು ಪಾಲಿಸದ ರೂಫ್ ಟಾಪ್ ಪಬ್ ಹಾಗೂ ಬಾರ್ ಗಳ ಪಟ್ಟಿಯನ್ನು ಬಿಬಿಎಂಪಿ ಹಾಗೂ ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆ ಸಿದ್ಧಪಡಿಸಿದೆ.

ಅಗ್ನಿ ಸುರಕ್ಷತಾ ಕ್ರಮಗಳನ್ನು ಪಾಲಿಸದ ರೂಫ್ ಟಾಪ್ ಬಾರ್ ಗಳ ಪಟ್ಟಿಯನ್ನು ಮುಂದಿನ ವಾರ ಬಿಡುಗಡೆ ಮಾಡಲಿದ್ದೇವೆ ಎಂದು ಕೆಎಸ್ಎಫ್ ಇಎಸ್ ಡಿಜಿಪಿ ಎಂ.ಎನ್. ರೆಡ್ಡಿ ತಿಳಿಸಿದ್ದಾರೆ. ಅವುಗಳಿಗೆ ನೀಡಿದ್ದ ಸ್ವಾಧೀನಾನುಭವ ಪ್ರಮಾಣಪತ್ರವನ್ನು ಬಿಬಿಎಂಪಿ ರದ್ದುಪಡಿಸಲಿದೆ. ಅವುಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವಂತೆ ಬೆಸ್ಕಾಂಗೆ ಹಾಗೂ ನೀರು ಪೂರೈಕೆ ಸ್ಥಗಿತಗೊಳಿಸವಂತೆ ಜಲಮಂಡಳಿಗೆ ಪತ್ರ ಬರೆಯುತ್ತೇವೆ ಎಂದರು.

ನಗರದಲ್ಲಿ ರೂಫ್ ಟಾಪ್‌ಗಳಲ್ಲಿ ವಹಿವಾಟು ನಡೆಸುತ್ತಿರುವ ಎಲ್ಲ ಪಬ್ ಹಾಗೂ ಬಾರ್‌ಗಳೂ ಅನಧಿಕೃತ. ಈ ಪೈಕಿ ಕೆಲವನ್ನು ಗುರುತಿಸಿದ್ದು, ಶೀಘ್ರವೇ ಮುಚ್ಚಿಸಲಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಎಂ.ಎನ್‌.ಲೋಕೇಶ್‌ ತಿಳಿಸಿದರು.

BBMP prepares list of Rooftop pub and bar which is not following safety measures

ಬಿಬಿಎಂಪಿಯ ಪೂರ್ವ ವಲಯದ ಇಂದಿರಾನಗರ, ಎಚ್‌ಎಎಲ್ ಮೂರನೇ ಹಂತದಲ್ಲಿರುವ ಬಹುತೇಕ ಪಬ್ ಮತ್ತು ಬಾರ್‌ಗಳು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದವು. ಬೇರೆ ಕಡೆ ಸ್ಥಳ ಸಿಗುವವರೆಗೆ ಹಾಗೂ ಉದ್ಯೋಗಿಗಳು ಪರ್ಯಾಯ ಕೆಲಸ ಹುಡುಕಿಕೊಳ್ಳುವವರೆಗೆ ವಹಿವಾಟು ಮುಂದುವರಿಸಲು ಮಾಲೀಕರು ಅವಕಾಶ ಕೋರಿದ್ದರು. ಇದಕ್ಕೆ ಒಪ್ಪಿದ್ದೇವೆ ಎಂದು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮುಜಾಹಿದ್ ಪಾಷಾ ತಿಳಿಸಿದರು.

100 ರೂಫ್ ಟಾಪ್ ಬಾರ್ ನ್ನು ಬಿಬಿಎಂಪಿ ಮುಚ್ಚಿಸಿದೆ. 133 ಪಬ್ ಮತ್ತು ಬಾರ್ ಗಳಿಗೆ ನೋಟಿಸ್ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+