ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಠಕ್ಕೆ ಬಿದ್ದ ಬಿಬಿಎಂಪಿ, ಎಂಜಿ ರಸ್ತೆಯಲ್ಲಿ ಮತ್ತೊಂದು ಮೇಲ್ಸೇತುವೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ನಮ್ಮ ಮೆಟ್ರೋಗೆ ಹೊಂದಿಕೊಂಡಂತೆ ಮತ್ತೊಂದು ಸ್ಕೈವಾಕ್ ನಿರ್ಮಿಸಲು ಬಿಬಿಎಂಪಿ ಮುಂದಾಗಿದ್ದು ಮುಂದಿನ ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಹತ್ತು ತಿಂಗಳ ಹಿಂದೆ ಎಂಜಿ ರಸ್ತೆಯಲ್ಲಿ ಸ್ಕೈವಾಕ್ ನಿರ್ಮಿಸಲು ಬಿಬಿಎಂಪಿ ಮುಂದಾದಾಗ ನಾಗರೀಕರು ತೀವ್ರ ಹೋರಾಟದ ನಡುವೆ ಯೋಜನೆಯನ್ನು ಕೈಬಿಡಲಾಗಿತ್ತು. ಇದೀಗ ನವರಂಗ ಜ್ಯುವೆಲರಿಯಿಂದ ರಂಗೋಲಿ ಮೆಟ್ರೋ ನಿಲ್ದಾಣಕ್ಕೆ ಸ್ಕೈವಾಕ್ ನಿರ್ಮಿಸಲು ಬಿಬಿಎಂಪಿ ಮುಂದಾಗಿದ್ದು, ಗುರುವಾರ ಕಾಮಗಾರಿಗೆ ಭೂಮಿ ಪೂಜೆ ಮಾಡುವ ವಿಫಲ ಯತ್ನ ನಡೆಸಿತ್ತು.

ಬೆಂಗಳೂರು ಅಭಿವೃದ್ಧಿಗೆ 2491 ಕೋಟಿ ವೆಚ್ಚ ಮಾಡಲಿರುವ ಬಿಬಿಎಂಪಿ ಬೆಂಗಳೂರು ಅಭಿವೃದ್ಧಿಗೆ 2491 ಕೋಟಿ ವೆಚ್ಚ ಮಾಡಲಿರುವ ಬಿಬಿಎಂಪಿ

ಬಿಬಿಎಂಪಿ ಮೂಲ ಸೌಕರ್ಯ ವಿಭಾಗದ ಅಧಿಕಾರಿಗಳು ಏಕಾಏಕಿ ಗುರುವಾರ ಬೆಳಗ್ಗೆ ರತ್ನಗಂಬಳಿ ಹಾಸಿ ಭೂಮಿ ಪೂಜೆ ಮಾಡಲು ಮುಂದಾದಾಗ ಸ್ಥಳಕ್ಕೆ ಧಾವಿಸಿದ ಶಾಂತಿನಗರ ಶಾಸಕ ಎನ್‌ಎ ಹ್ಯಾರಿಸ್ ಈ ಕಾಮಗಾರಿಗೆ ಕುರಿತಂತೆ ಅನುಮತಿ ಪಡೆದ ಪತ್ರವನ್ನು ತೋರಿಸುವಂತೆ ತಾಕೀತು ಮಾಡಿದರು. ಇದರಿಂದ ಗಲಿಬಿಲಿಗೊಂಡ ಅಧಿಕಾರಿಗಳು ಹೇಳಹೆಸರಿಲ್ಲದೆ ಓಡಿ ಹೋದರು.

BBMP plans another foot over bridge in MG road

ಎಂಜಿ ರಸ್ತೆಯಲ್ಲಿ ಸ್ಕೈವಾಕ್ ನಿರ್ಮಿಸಲು ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಖಾಸಗಿ ಕಂಪನಿಗಳ ಜತೆ ಶಾಮೀಲಾಗಿರುವ ಬಿಬಿಎಂಪಿ ಅಧಿಕಾರಿಗಳು ನಗರದ ಎಲ್ಲೆಂದರಲ್ಲಿಸ್ಕೈವಾಕ್ ಹಾಗೂ ಫೂಟ್ ಬ್ರಿಡ್ಜ್ ಗಳನ್ನು ಮನಬಂದಂತೆ ನಿರ್ಮಿಸಲು ಮುಂದಾಗುತ್ತಿದ್ದಾರೆ ಎಂಬ ಆರೋಪಗಳಿವೆ.

ಕೊಲ್ಕತ್ತದಲ್ಲಿ ಮೇಲ್ಸೇತುವೆ ಕುಸಿತ, ಐದು ಜನ ಸಾವು, ಹಲವರಿಗೆ ಗಾಯ ಕೊಲ್ಕತ್ತದಲ್ಲಿ ಮೇಲ್ಸೇತುವೆ ಕುಸಿತ, ಐದು ಜನ ಸಾವು, ಹಲವರಿಗೆ ಗಾಯ

ಈ ಹಿನ್ನೆಲೆಯಲ್ಲಿ ಎಂಜಿ ರಸ್ತೆಯಲ್ಲಿ ಮತ್ತೊಂದು ಸ್ಕೈವಾಕ್ ನಿರ್ಮಿಸಲು ಪಾಲಿಕೆ ಮುಂದಾಗುತ್ತಿದ್ದಂತೆಯೇ ಶಾಸಕ ಎನ್‌ಎ ಹ್ಯಾರಿಸ್ ಸ್ಥಳಕ್ಕೆ ಧಾವಿಸಿ ದಾಖಲೆಗಳ ಪರಿಶೀಲನೆಗೆ ಮುಂದಾದರು.

ಬೆಂಗಳೂರು ಮಹಾತ್ಮ ಗಾಂಧಿ ವೃತ್ತದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಮಿಸಲು ಉದ್ದೇಶಿಸಿದ್ದ ಸ್ಕೈವಾಕ್ ಕಾಮಗಾರಿಯನ್ನು ನಾಗರಿಕರ ಪ್ರಬಲ ವಿರೋಧದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಿತ್ತು.

ಬೆಂಗಳೂರು: ಕಾರ್ಡ್ ರಸ್ತೆಯ ಮಂಜುನಾಥನಗರ ಫ್ಲೈಓವರ್ ಲೋಕಾರ್ಪಣೆ ಬೆಂಗಳೂರು: ಕಾರ್ಡ್ ರಸ್ತೆಯ ಮಂಜುನಾಥನಗರ ಫ್ಲೈಓವರ್ ಲೋಕಾರ್ಪಣೆ

ಕಬ್ಬನ್ ಪಾರ್ಕ್ ಪೋಲೀಸ್ ಠಾಣೆ ಎದುರು ಈ ಸ್ಕೈವಾಕ್ ನಿರ್ಮಾಣವಾಗಬೇಕಾಗಿದ್ದ ಕಾಮಗಾರಿ ಸ್ಥಗಿತಗೊಂಡಿದ್ದು ಈ ಸ್ಕೈ ವಾಕ್ ನಿರ್ಮಾಣವಾದರೆ ಗಾಂಧಿ ಪ್ರತಿಮೆ ವೀಕ್ಷಣೆಗೆ ಅಡ್ಡಿಯಾಗುವುದು, ಅಲ್ಲದೆ ಈ ಪ್ರದೇಶದಲ್ಲಿ ಸ್ಕೈ ವಾಕ್ ಅವಶ್ಯಕತೆ ಇಲ್ಲ ಎಂದು ಕಾಮಗಾರಿಯ ಬಗೆಗೆ ಬೆಂಗಳೂರು ನಾಗರಿಕರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರು.

ಶಿವಾಜಿನಗರ ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕ ಸೇತುವೆ ಶಿವಾಜಿನಗರ ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಸಂಪರ್ಕ ಸೇತುವೆ

ಬಿಬಿಎಂಪಿ ಈ ಕಾಮಗಾರಿ ನಿರ್ಮಾಣದ ಹಿಂಡೆ ಬೃಹತ್ ಜಾಹೀರಾತು ದಂಧೆ ಕೆಲಸ ಮಾಡಿದೆ ಎಂದು ನಾಗರಿಕರು ಆರೋಪಿಸಿದ್ದರಲ್ಲದೆ ಈ ಹಿಂದೆ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ವಿರುದ್ಧ್ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತರಿಂದ ಈ ಸ್ಕೈವಾಕ್ ಕಾಮಗಾರಿ ವಿರುದ್ಧ ತಡೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

English summary
Despite public outrage BBMP is planning to construct another foot over bridge between Navarathan Jewelry and Rangoli metro in MG Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X