ಹಲಸೂರು ಮಾರುಕಟ್ಟೆ ತೆರವುಗೊಳಿಸಲು ಬಿಬಿಎಂಪಿ ಪ್ಲಾನ್: ವ್ಯಾಪಾರಸ್ಥರಿಗೆ ಆತಂಕ
ಬೆಂಗಳೂರು, ಏಪ್ರಿಲ್ 15: ಬಿಬಿಎಂಪಿ ವ್ಯಾಪ್ತಿಗೆ ಬರುವ ಹಲಸೂರಿನಲ್ಲಿರುವ ಬಜಾರ್ ಸ್ಟ್ರೀಟ್ ತರಕಾರಿ ಮಾರುಕಟ್ಟೆಯ ಹಳೆಯದಾಗಿದ್ದು, ಅಲ್ಲಲ್ಲಿ ಶಿಥಿಲಗೊಂಡಿದೆ. ವ್ಯಾಪಾರಿಗಳ ಕಾಳಜಿಯಿಂದ ಈ ಮಾರುಕಟ್ಟೆಯನ್ನು ನೆಲಸಮ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಇದು ಇಲ್ಲಿನ ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ.
ಬಜಾರ್ ಸ್ಟ್ರೀಟ್ ಮಾರ್ಕೆಟ್‌ನ ಸಂಕೀರ್ಣವು ಸುಮಾರು 70 ವರ್ಷಕ್ಕಿಂತಲೂ ಹಳೆಯದಾಗಿದೆ. ಕಳೆದ 7 ದಶಕದಿಂದಲೂ ಮಾರಾಟಗಾರರ ಹಾಗೂ ಗ್ರಾಹಕರ ವಹಿವಾಟುಗಳು ಈ ಮಾರುಕಟ್ಟೆಯಲ್ಲಿ ನಡೆಯುತ್ತಿವೆ. ಬಿಬಿಎಂಪಿಯ ಇಂಜಿನಿಯರ್‌ಗಳು ಮಾರುಕಟ್ಟೆಯ ಕಟ್ಟಡವನ್ನು ಪರಿಶೀಲನೆ ಮಾಡಿದ್ದು, ಒಂದು ವೇಳೆ ಕಟ್ಟಡದ ಕುಸಿತವಾದರೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಬಾರದು ಎಂದು ಮುನ್ನೆಚ್ಚರಿಕೆ ವಹಿಸಲಾಗಿತ್ತಿದೆ. ಶೀಘ್ರದಲ್ಲೇ ಮಾರಾಟಗಾರನ್ನು ಸ್ಥಳಾಂತರಿಸಬೇಕಾಗಿದೆ. ಈ ಸಂಬಂಧ ಇಲ್ಲಿನ ವ್ಯಾಪಾರಿಗಳಿಗೆ ಈಗಾಗಲೇ ನೋಟಿಸ್ ಸಹನೀಡಲಾಗಿದೆ ಎಂದು ಬಿಬಿಎಂಪಿ ಉಪ ಆಯುಕ್ತ ಮುರಳೀಧರ ಕೆ ತಿಳಿಸಿದ್ದಾರೆ.
ಆದರೆ, ಮಾರುಕಟ್ಟೆಯ ವ್ಯಾಪಾರಿಗಳು ಅಂಡಿಗಳನ್ನು ಖಾಲಿ ಮಾಡಲು ಹಾಗೂ ಈ ಮಾರುಕಟ್ಟೆಯಿಂದ ಸ್ಥಳಾಂತರಗೊಳ್ಳಲು ನಿರಾಕರಿಸಿದ್ದಾರೆ. ಆದರೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದ್ದು, ಸೂಚನೆಯ ಪ್ರಕಾರ ಮಾರುಕಟ್ಟೆ ಸಂಕೀರ್ಣದಲ್ಲಿರುವ ಎಲ್ಲಾ ಅಂಗಡಿಗಳನ್ನು ಸ್ಥಳಾಂತರಿಸಬೇಕು. ಆದರೆ, ಇಲ್ಲಿನ ವ್ಯಾಪಾರಿಗಳು ನೋಟೀಸ್ ಸ್ವೀಕರಿಸಲು ಮತ್ತು ಅಂಗಡಿಗಳನ್ನು ತೆರವು ಮಾಡಲು ಉದ್ದೇಶಪೂರ್ವಕವಾಗಿಯೇ ನಿರಾಕರಿಸಿದ್ದಾರೆ. ಮಾರಾಟಗಾರರಿಗೆ ತಮ್ಮ ಭವಿಷ್ಯದ ಬಗ್ಗೆ ಚಿಂತೆಯಾಗಿದ್ದು ತೆರವು ಮಾಡುವಂತೆ ಬಿಬಿಎಂಪಿಯ ನೋಟಿಸ್ ಅಂಗಡಿಯ ಮಾರಟಗಾರಿಗೆ ಮತ್ತಷ್ಟು ಕೆರಳಿಸಿದೆ, ಬಿಬಿಎಂಪಿ ತಮ್ಮ ಹಣವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಂಗಡಿಯ ವ್ಯಾಪಾರಸ್ಥರು ಆರೋಪಿಸಿದ್ದಾರೆ.

''ಮಾರುಕಟ್ಟೆ ಮಾರಾಟಗಾರರು ಹೇಳುವಂತೆ ಬಿಬಿಎಂಪಿ ತಮ್ಮ ಜೀವನೋಪಾಯವನ್ನು ಕಸಿದುಕೊಳ್ಳಲು ಸಂಚು ರೂಪಿಸಿದೆ. ಬಿಬಿಎಂಪಿಯ ಯಾವದೇ ಅಧಿಕಾರಿಗಳು ನಮ್ಮೂಂದಿಗೆ ಈ ಬಗ್ಗೆ ಚರ್ಚೆಸಿಲ್ಲ, ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡದೇ ನೋಟಿಸ್ ನೀಡಿದರೆ ನಾವು ನಮ್ಮ ಜೀವನೋಪಾಯವನ್ನು ಹೇಗೆ ಬಿಟ್ಟು ಕೊಡಬೇಕು? ನಾನು ಕಳೆದ 30 ವರ್ಷಗಳಿಂದ ಈ ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿ ಇಟ್ಟು ವ್ಯಾಪಾರ ನಡೆಸುತ್ತಿದ್ದೇನೆ " ಎಂದು ಮಾರುಕಟ್ಟೆಯ ಮಾರಟಗಾರ ಸೈಯದ್ ಮುಕಿಯಾ ತಮ್ಮ ನೋವುನ್ನು ಹೇಳಿಕೊಂಡಿದ್ದಾರೆ.
ಮಾರುಕಟ್ಟೆಯ ಕಟ್ಟಡ ನಿರ್ವಹಣೆ ಮಾಡುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಇನ್ನೊಬ್ಬ ವ್ಯಾಪಾರಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಕಳೆದ ಮಳೆಗಾಲದಲ್ಲಿ ಹಲವು ಅಂಗಡಿಗಳು ಹಾನಿಗೀಡಾಗಿದ್ದವು. ಯಾವ ಅಧಿಕಾರಿಯೂ ನಮ್ಮ ಸಹಾಯಕ್ಕೆ ಮುಂದೆ ಬಂದಿಲ್ಲ, ನಾವೇ ಎಲ್ಲವನ್ನು ನಿರ್ವಹಿಸಬೇಕಾಗುತ್ತದೆ ಎಂದು ಅಂಗಡಿಯ ವ್ಯಾಪಾರಿ ಹೇಳಿಕೊಂಡರು.

ಈ ಮಾರುಕಟ್ಟೆಯ ಸಂಕೀರ್ಣವನ್ನು ಅದರ ಸ್ಥಿತಿಯನ್ನು ಪರಿಗಣಿಸಿ ತೆರವುಗೊಳಿಸುವ ನಿರ್ಧಾರಕ್ಕೆ ಬಂದು ನಿಂತಿರುವ ಬಿಬಿಎಂಪಿಯ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಯಾವ ಕ್ರಮ ತೆಗೆದುಕೊಳ್ಳತ್ತಾರೆ ಕಾದು ನೋಡಬೇಕಿದೆ. ಆದರೆ ಜೀವನೋಪಾಯವನ್ನು ನಂಬಿಕೊಂಡಿರುವ ಅಂಗಡಿಯ ಮಾರಟಗಾರರು ಅಂಗಡಿಗಳನ್ನು ಯಾವಾಗ ತೆರವು ಮಾಡುತ್ತಾರೆ ಖಚಿತವಾಗಿಲ್ಲ ಆದರೆ ಮಾರುಕಟ್ಟೆಯ ಮಾರಾಟಗಾರರು ಅದೇ ಸ್ಥಳದಲ್ಲಿ ಮಾರುಕಟ್ಟೆಯನ್ನು ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಿದ್ದು ಹಣ ಮಂಜೂರು ಮಾಡಿದರೆ ಕಾಮಗಾರಿಯನ್ನು ಕೈಗೊಳ್ಳುತ್ತೇವೆ ಎಂದು ಅಂಗಡಿಯ ವ್ಯಾಪಾರಸ್ಥರು ಹೇಳಿದ್ದಾರೆ.












Click it and Unblock the Notifications