ಹೋಟೆಲ್‌ಗಳಲ್ಲಿ ಸ್ಮೋಕಿಂಗ್‌ ಝೋನ್‌ ಮಾಡಲು BBMP ಆದೇಶ, ರೊಚ್ಚಿಗೆದ್ದ ಹೋಟೆಲ್‌ ಮಾಲೀಕರು

ಬೆಂಗಳೂರು, ಡಿಸೆಂಬರ್‌, 27: ನಗರ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಿಗಳು ಕೆಲಸದ ಒತ್ತಡವನ್ನು ನಿವಾರಿಸಿಕೊಳ್ಳು ಸಿಗರೇಟ್‌ ಸೇದುತ್ತಾರೆ. ತಮ್ಮ ಆರೋಗ್ಯಕ್ಕೆ ತೊಂದರೆ ಮಾಡಿಕೊಳ್ಳುವುದಲ್ಲದೆ, ಅಕ್ಕಪಕ್ಕದವರ ಆರೋಗ್ಯವನ್ನು ಲೆಕ್ಕಿಸದೇ ಸಿಗರೇಟ್‌ನ ಹೊಗೆಯನ್ನು ಬಿಡುತ್ತಾರೆ. ಅದರಲ್ಲೂ ಮಹಾನಗರ ಬೆಂಗಳೂರಿನಲ್ಲಿ ಸಿಗರೇಟ್‌ ಸೇದುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಸಾರ್ಜನಿಕ ಸ್ಥಳಗಳಲ್ಲಿ ಸಿಗರೇಟ್‌ ಹೊಗೆ ಬಿಡುವವರ ಸಂಖ್ಯೆ ಹೆಚ್ಚಾಗಿದ್ದು, ಇದರಿಂದ ಇನ್ನುಳಿದ ಜನರು ಕೂಡ ತೊಂದರೆ ಅನುಭವಿಸುವಂತಾಗಿದೆ. ಹೀಗೆ ಆರೋಗ್ಯವನ್ನೂ ಲೆಕ್ಕಿಸದೆ ಹೊಗೆ ಬಿಡುವವರಿಗೆ ಬಿಬಿಎಂಪಿ (BBMP) ಕಡಿವಾಣ ಹಾಕಲು ಮುಂದಾಗಿದ್ದು, ಹೋಟೆಲ್​​​ಗಳಲ್ಲಿ ಸ್ಮೋಕಿಂಗ್ ಝೋನ್ ಮಾಡುವಂತೆ ಆದೇಶ ಹೊರಡಿಸಿದೆ. ಇದೀಗ ಬಿಬಿಎಂಪಿ ಆದೇಶದ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ಮಹಾನಗರದಲ್ಲಿ ಸಾವಿರಾರು ಹೊಟೇಲ್‌ಗಳಿವೆ. ಅವುಗಳಲ್ಲಿ ಎಲ್ಲೆಲ್ಲಿ 30ಕ್ಕಿಂತ ಹೆಚ್ಚು ಸೀಟಿಂಗ್ ವ್ಯವಸ್ಥೆ ಇದೆಯೋ, ಅಲ್ಲೆಲ್ಲಾ ಕಡ್ಡಾಯವಾಗಿ ಸ್ಮೋಕಿಂಗ್ ಝೋನ್ ಅನ್ನು ಮಾಡಬೇಕು ಎಂದು ಬಿಬಿಎಂಪಿ ನೋಟಿಸ್ ನೀಡಿದೆ. ಹೊಟೇಲ್‌ಗಳಿಗೆ ಬರುವ ಕೆಲವು ಗ್ರಾಹಕರು ಎಲ್ಲಂದರಲ್ಲೇ ಸಿಗರೇಟ್‌ ಹೊಗೆ ಬಿಡುತ್ತಿದ್ದು, ಇದನ್ನು ತಡೆಗಟ್ಟಲು ಹೊಟೇಲ್‌ನವರಿಗೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಿಬಿಎಂಪಿ ಈ ಹೊಸ ನಿಯಮವನ್ನು ಜಾರಿಗೆ ತಂದಿದೆ.

 ಹೋಟೆಲ್‌ಗಳಿಗೆ ಬಿಬಿಎಂಪಿ ನೋಟಿಸ್‌

ಹೋಟೆಲ್‌ಗಳಿಗೆ ಬಿಬಿಎಂಪಿ ನೋಟಿಸ್‌

1. 30ಕ್ಕಿಂತ ಹೆಚ್ಚು ಆಸನವಿರುವ ಹೋಟೆಲ್​​ಗಳಲ್ಲಿ ಸ್ಮೋಕಿಂಗ್​ ಝೋನ್​ ಕಡ್ಡಾಯ

2. COTPA 2003ರ ಅಡಿಯಲ್ಲಿ ಪ್ರತ್ಯೇಕ ಸ್ಮೋಕಿಂಗ್​ ಝೋನ್​ ಮಾಡಬೇಕು.

3. ಬಾರ್​, ರೆಸ್ಟೋರೆಂಟ್​​, ಕಾಫಿ ಡೇಗಳಲ್ಲಿ ಕೂಡ ಸ್ಮೋಕಿಂಗ್​ ಝೋನ್​ ವ್ಯವಸ್ಥೆ ಮಾಡಬೇಕು.

4. ನಿಗದಿತ ಧೂಮಪಾನ ಪ್ರದೇಶ ಮೀಸಲಿಡುವುದು ಕಾನೂನಿನಲ್ಲಿ ಕಡ್ಡಾಯವಾಗಿದೆ

5. ಸ್ಮೋಕಿಂಗ್​ ಝೋನ್​ ಮಾಡದೇ ಉದ್ಯಮ ನಡೆಸುವುಸು ಕಾನೂನಿನ ಉಲ್ಲಂಘನೆಯಾಗುತ್ತದೆ.

6. ಶ್ರೀಘ್ರದಲ್ಲೇ ಸ್ಮೋಕಿಂಗ್​ ಝೋನ್ ಮಾಡಬೇಕು, ಇಲ್ಲದಿದ್ದರೆ ಪರವಾನಗಿ ರದ್ದು ಮಾಡಲಾಗುತ್ತದೆ.

 ಕೆಂಡಕಾರುತ್ತಿರುವ ಹೋಟೆಲ್‌ ಮಾಲೀಕರು

ಕೆಂಡಕಾರುತ್ತಿರುವ ಹೋಟೆಲ್‌ ಮಾಲೀಕರು

ಹೋಟೆಲ್​ಗಳಿಗೂ ಈ ನಿಯಮ ಅನ್ವಯವಾಗುತ್ತದೆ ಎಂದು ಬಿಬಿಎಂಪಿಯಿಂದ ನೋಟಿಸ್ ನೀಡಿದೆ.​ ಈ ಆದೇಶದ ವಿರುದ್ಧ ಇದೀಗ ಹೋಟೆಲ್‌ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಅವೈಜ್ಞಾನಿಕ ಆದೇಶವಾಗಿದೆ ಎನ್ನುತ್ತಿದ್ದಾರೆ. 30ಕ್ಕಿಂತ ಹೆಚ್ಚು ಆಸನಗಳಿರುವ ಕಡೆ ಸ್ಮೋಕಿಂಗ್‌ ಝೋನ್‌ ಮಾಡಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದ ಬೆನ್ನಲ್ಲೇ ಹೊಟೇಲ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ.

 ಹಳೆ ಹೋಟೆಲ್‌ ಮಾಲೀಕರು ಹೇಳುವುದೇನು?

ಹಳೆ ಹೋಟೆಲ್‌ ಮಾಲೀಕರು ಹೇಳುವುದೇನು?

ನಗರದಲ್ಲಿರುವ ಹಳೆಯ ಹೊಟೇಲ್‌ಗಳಲ್ಲಿ ಸ್ಮೋಕಿಂಗ್ ಝೋನ್ ನಿರ್ಮಿಸಲು ಜಾಗವಿಲ್ಲ. ಹೊಸ ಹೊಟೇಲ್‌ಗಳಲ್ಲಾದರೂ ಇದನ್ನು ಜಾರಿಗೆ ತರಬಹುದಾಗಿದೆ. ಜಾರಿಗೆ ತಂದರೂ ಕೂಡ ಮಹಿಳೆಯರು ಹಾಗೂ ಮಕ್ಕಳು ಹೋಟೆಲ್‌ಗೆ ಬರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ ಬಿಬಿಎಂಪಿ ನೀಡಿರುವ ಈ ನೋಟಿಸ್ ಅವೈಜ್ಞಾನಿಕವಾಗಿದೆ.

 ಸ್ಮೋಕಿಂಗ್ ಝೋನ್ ಆದೇಶಕ್ಕೆ ಆಕ್ರೋಶ

ಸ್ಮೋಕಿಂಗ್ ಝೋನ್ ಆದೇಶಕ್ಕೆ ಆಕ್ರೋಶ

ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ, ಹೀಗಿರುವಾಗ ಸ್ಮೋಕಿಂಗ್ ಝೋನ್ ಮಾಡಿ ಅದನ್ನು ಉತ್ತೇಜಿಸಿದಂತಾಗುತ್ತದೆ ಅನ್ನುವುದು ಹೊಟೇಲ್ ಮಾಲೀಕರ ವಾದವಾಗಿದೆ. ಬಿಬಿಎಂಪಿ ಸ್ಮೋಕಿಂಗ್ ಝೋನ್ ಮಾಡುವಂತೆ ಆದೇಶ ನೀಡಿದ್ದು, ಹೋಟೆಲ್ ಮಾಲೀಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಸದ್ಯದಲ್ಲೇ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಿ, ಆದೇಶ ಹಿಂಪಡೆಯು ಮನವಿ ಮಾಡುತ್ತೇವೆ ಎಂದು ಹೋಟೆಲ್ ಅಸೋಸಿಯೇಷನ್‌ನವರು ಹೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+