• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಬಿಎಂಪಿ ಸದಸ್ಯರೂ ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಕೆ ಕಡ್ಡಾಯ

|

ಬೆಂಗಳೂರು, ಜೂನ್ 11: ಲೋಕಾಯುಕ್ತ ಸಂಸ್ಥೆಗೆ ಇನ್ನುಮುಂದೆ ಬಿಬಿಎಂಪಿ ಸದಸ್ಯರು ಕೂಡ ಆಸ್ತಿ ವಿವರ ಸಲ್ಲಿಸುವುದು ಕಡ್ಡಾಯವಾಗಲಿದೆ.

ಇಷ್ಟು ದಿನ ವಿಧಾನ ಪರಿಷತ್, ವಿಧಾನಸಭೆ ಸದಸ್ಯರು ಮಾತ್ರ ಲೋಕಾಯುಕ್ತರಿಗೆ ಆಸ್ತಿ ವಿವರವನ್ನು ಸಲ್ಲಿಸುತ್ತಿದ್ದರು. ಆದರೆ ಇನ್ನು ಕೆಲ ತಿಂಗಳಲ್ಲಿ ರಾಜ್ಯದ ಎಲ್ಲಾ ಪಾಲಿಕೆಗಳ ಸದಸ್ಯರು , ಸಮಿತಿ, ಸೊಸೈಟಿ, ಮಂಡಳಿಗಳ ಅಧ್ಯಕ್ಷರು ಕೂಡ ಆಸ್ತಿ ವಿವರ ಸಲ್ಲಿಸಬೇಕಾಗುತ್ತದೆ.

ಬೆಂಗಳೂರಿಗರೇ ಎಚ್ಚರ, ಇಷ್ಟರಲ್ಲೇ ಆಸ್ತಿ ತೆರಿಗೆ ಹೆಚ್ಚಳವಾಗುತ್ತೆ!

ಈ ಕುರಿತು ಜ.15ರಂದೆ ಸಭೆ ಕರೆಯಲಾಗಿದೆ. ಬಿಬಿಎಂಪಿ ಸದಸ್ಯರ ಆಸ್ತಿ ಕೋರಿ ಸಾಮಾಜಿಕ ಕಾರ್ಯಕರ್ತ ಎಚ್.ಎಂ ವೆಂಕಟೇಶ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಆ ಅರ್ಜಿ ಮೂಲಕ ಪಾಲಿಕೆ ಸದಸ್ಯರು ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸದಿರುವುದು ಬಹಿರಂಗವಾಗಿತ್ತು.

1984ರಲ್ಲಿ ಜಾರಿಗೆ ಬಂದ ಲೋಕಾಯುಕ್ತ ಕಾಯಿದೆ ಪ್ರಕಾರ ಬಿಬಿಎಂಪಿ ಸೇರಿ ಯಾವುದೇ ಪಾಲಿಕೆ ಸದಸ್ಯರು ಹಾಗೂ ಸರ್ಕಾರದ ವಿವಿಧ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಆಸ್ತಿ ವಿವಿರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ರಾಜ್ಯಕ್ಕೆ ಅನ್ವಯವಾಗುವಂತೆ ಮಹತ್ವದ ಆದೇಶವೊಂದನ್ನು ಹೊರಡಿಸುವ ಸಾಧ್ಯತೆ ಇದೆ.

English summary
BBMP members should submit property report to Lokayukta Mandatory Soon. July 15 Lokayukta Conduct a meeting regarding property information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X