ಬಿಬಿಎಂಪಿ ಪಕ್ಷೇತರ ಸದಸ್ಯ ಏಳುಮಲೈ ನಿಧನ
ಬೆಂಗಳೂರು, ಡಿಸೆಂಬರ್ 6:ಬಿಬಿಎಂಪಿ ಕಾರ್ಪೊರೇಟರ್ ಏಳುಮಲೈ(40) ನಿಧನರಾಗಿದ್ದಾರೆ. ಕಳೆದ 28 ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಗಾಯಪುರ ವಾರ್ಡ್‌ನ ಪಕ್ಷೇತರ ಕಾರ್ಪೊರೇಟರ್ ಆಗಿದ್ದರು. ಸಗಾಯಪುರಂ ವಾರ್ಡ್ (ನಂ.60)ರ ಪಕ್ಷೇತರ ಬಿಬಿಎಂಪಿ ಸದಸ್ಯ ಏಳುಮಲೈ ಅವರು ಮೂಗಿನ ಮೇಲೆ ಗುಳ್ಳೆ ಆಗಿದೆ ಎಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಚಿಕಿತ್ಸೆ ನೀಡುವಾಗ ಹೈ ಡೋಸ್ ಅನಸ್ತೇಷಿಯಾ ನೀಡಿದ್ದರಿಂದ ಕೋಮಾ ಸ್ಥಿತಿಗೆ ತಲುಪಿದ್ದಾರೆ ಎಂಬ ಆರೋಪವಿತ್ತು. ಹಾಗಾಗಿ ಬಳಿಕ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಳುಮಲೈ ಅವರು ಕೋಮಾ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಸಚಿವ ಜಮೀರ್ ಅಹಮದ್ ಸೇರಿದಂತೆ ಹಲವರು ಬಂದು ಅವರ ಆರೋಗ್ಯ ವಿಚಾರಿಸಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.












Click it and Unblock the Notifications