ಬಿಬಿಎಂಪಿಯಿಂದ 2 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ಸ್ವಚ್ಛತಾ ಕಾರ್ಯ
ಬೆಂಗಳೂರು, ಜು.3: ನಗರದಲ್ಲಿ ತ್ಯಾಜ್ಯ ಪ್ರಮಾಣ ವಿಪರೀತವಾಗಿದೆ, ಅದರ ವಿಲೇವಾರಿ ಸಮಸ್ಯೆಯೂ ಕಾಡುತ್ತಿದೆ, ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಯು ಪ್ರತಿ ವರ್ಷ ಒಂದು ಸಾವಿರ ಕೋಟಿ ಹಣವನ್ನು ವ್ಯಯಿಸುತ್ತಿದೆ. ಆದರೆ ಈ ಬಾರಿ ಅದು 2 ಸಾವಿರ ಕೋಟಿ ರೂ. ದಾಟುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಬಿಎಂಪಿ ನೀಡಿರುವ ಗುತ್ತಿಗೆ ಪ್ರಕಾರ ಸುಲ್ತಾನ್ ಪಾಳ್ಯ, ರೆಹಮತ್‌ನಗರ ಮುಖ್ಯರಸ್ತೆ, ಆರ್‌ಟಿನಗರ ಮುಖ್ಯರಸ್ತೆ ಪ್ರದೇಶವಿರುವ 5.5 ಕಿ.ಮೀ ರಸ್ತೆಯನ್ನು ಸ್ವಚ್ಛತೆಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆ ಪಡೆದಿರುವ ಎಸ್‌ಎನ್‌ಎಸ್ ಎಂಟರ್‌ಪ್ರೈಸಸ್‌ಗೆ 1 ಕಿ.ಮೀಗೆ 60,050 ರೂ.ನಂತೆ ಮಾಸಿಕ ಒಟ್ಟು 3,30,275 ಲಕ್ಷ ರೂ. ಪಾವತಿಸಲಾಗುತ್ತಿದೆ. ಈಗ ನೀಡಿರುವ ಗುತ್ತಿಗೆ ಅವಧಿ 6 ತಿಂಗಳಿಗೆ ಎಂದು ನಿಗದಿ ಮಾಡಲಾಗಿದೆ.
ಅದಕ್ಕೂ ಮುನ್ನ ಟೆಂಡರ್ ಪ್ರಕ್ರಿಯೆ ನಡೆಸಿ, ತ್ಯಾಜ್ಯ ನಿರ್ವಹಣೆಗೆ ಹೊಸ ಗುತ್ತಿಗೆದಾರರನ್ನು ನಿಯೋಜಿಸುವುದಾಗಿಯೂ ಬಿಬಿಎಂಪಿ ತಿಳಿಸಿದೆ. ಒಂದು ವೇಳೆ ಟೆಂಡರ್ ಪ್ರಕ್ರಿಯೆ ನಡೆಯದಿದ್ದರೆ, ಎಸ್‌ಎನ್‌ಎಸ್ ಎಂಟರ್‌ಪ್ರೈಸಸ್ ಸಂಸ್ಥೆಯನ್ನೇ ಮುಂದುವರೆಸುವುದಾಗಿಯೂ ತಿಳಿಸಿದೆ.

ನಗರದಲ್ಲಿರುವ 13 ಸಾವಿರ ಕಿ.ಮೀ 93,135 ರಸ್ತೆಗಳ ಸ್ವಚ್ಛತೆಗೆ ಅನ್ವಯಿಸಿದರೆ 2 ಸಾವಿರ ಕೋಟಿ ರೂ.ಗಳೂ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಆಗ ಬಿಬಿಎಂಪಿ ವಸೂಲಿ ಮಾಡುವ ಆಸ್ತಿ ತೆರಿಗೆಯ ಶೇ.95 ಭಾಗ ತ್ಯಾಜ್ಯ ನಿರ್ವಹಣೆಗೆ ಖರ್ಚಾಗಲಿದ್ದು, ಉಳಿದ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಅನುದಾನ ಅಥವಾ ಸಾಲದ ಮೊರೆ ಹೋಗಬೇಕಾಗುತ್ತದೆ.











Click it and Unblock the Notifications