ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರೇ ಗಮನಿಸಿ, ಆಸ್ತಿ ತೆರಿಗೆ ದರ ಹೆಚ್ಚಳ ಸಾಧ್ಯತೆ!

|
Google Oneindia Kannada News

ಬೆಂಗಳೂರು, ಸೆ .18: ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ತಿ ತೆರಿಗೆ ಹೆಚ್ಚಳ ಮಾಡಲು ಮುಂದಾಗಿರುವ ಸುದ್ದಿ ಬಂದಿದೆ. ಕೊರೊನಾವೈರಸ್ ದೆಸೆಯಿಂದ ಉಂಟಾಗಿರುವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗಿರುವ ಬೆಂಗಳೂರಿಗರಿಗೆ ಇದು ಆಘಾತಕಾರಿ ಸುದ್ದಿ ಎನಿಸಲಿದೆ.

ಸರಿ ಸುಮಾರು ಶೇ 18 ರಿಂದ ಶೇ 30ರ ತನಕ ಆಸ್ತಿ ತೆರಿಗೆ ಹೆಚ್ಚಳ ಸಾಧ್ಯತೆಯಿದೆ. ವಸತಿ ಹಾಗೂ ವಸತಿಯೇತರ ಆಸ್ತಿ ಎರಡಕ್ಕೂ ಇದು ಅನ್ವಯಿಸಲಿದೆ ಎಂಬ ಮಾಹಿತಿಯಿದೆ. ಇದಲ್ಲದೆ, ಶೇ 2 ರಿಂದ 5 ರಷ್ಟು ಖಾತಾ ಚಾರ್ಜ್ ಹಾಗೂ ನಕ್ಷೆ ಮಂಜೂರಾತಿ ಶುಲ್ಕ ಹೆಚ್ಚಳವಾಗಲಿದೆ.

ಆನ್ ಲೈನ್ ಮೂಲಕ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುವುದು ಹೇಗೆ? ಆನ್ ಲೈನ್ ಮೂಲಕ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುವುದು ಹೇಗೆ?

ನೋಂದಣಿ ಶುಲ್ಕ, ಖಾತಾ ಶುಲ್ಕ, ಪ್ಲ್ಯಾನ್ ಅಪ್ರೂವಲ್ ಶುಲ್ಕ ಹೀಗೆ ಅನೇಕ ಶುಲ್ಕಗಳ ಜೊತೆಗೆ ಗಾರ್ಬೇಜ್ ಸೆಸ್ ಕೂಡಾ ಹಾಕಲು ನಿರ್ಧಾರಿಸಲಾಗಿದೆ, ಹೆಚ್ಚುವರಿ ಶುಲ್ಕದಿಂದ ಸುಮಾರು 500 ಕೋಟಿ ರು ಸಂಗ್ರಹದ ನಿರೀಕ್ಷೆಯಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

 ತೆರಿಗೆ ಸಂಗ್ರಹ ಕುಸಿತ ಕಂಡಿದೆ

ತೆರಿಗೆ ಸಂಗ್ರಹ ಕುಸಿತ ಕಂಡಿದೆ

2020ರ ಸೆಪ್ಟೆಂಬರ್ 14ರ ತನಕ ಬಿಬಿಎಂಪಿ 1,916 ಕೋಟಿ ಆಸ್ತಿ ತೆರಿಗೆಯನ್ನು ಸಂಗ್ರಹ ಮಾಡಿದೆ. ಕಳೆದ ವರ್ಷ ಇದೇ ಸಮಯದಲ್ಲಿ 2000 ಕೋಟಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಕೋವಿಡ್ ಪರಿಸ್ಥಿತಿ ಕಾರಣ ತೆರಿಗೆ ಸಂಗ್ರಹ ಕುಸಿತ ಕಂಡಿದೆ.

ಆದಾಯ ತೆರಿಗೆಯೇ ಪಾಲಿಕೆಯ ಬಹುದೊಡ್ಡ ಆದಾಯದ ಮೂಲವಾಗಿದೆ. ಪಾಲಿಕೆ ಆದಾಯ ಹೆಚ್ಚಿಸಲು ಗಮನಹರಿಸುವಂತೆ ಅಧಿಕಾರಿಗಳಿಗೆ ಗೌರವ್ ಗುಪ್ತ ಮೌಖಿಕ ಆದೇಶ ನೀಡಿದ್ದಾರೆ. ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವವರ ಪಟ್ಟಿಯನ್ನು ಸಿದ್ಧಪಡಿಸಲು ಸೂಚನೆ ನೀಡಿದ್ದಾರೆ

 ಸತತವಾಗಿ ತೆರಿಗೆ ಸಂಗ್ರಹದಲ್ಲಿ ಇಳಿಕೆ

ಸತತವಾಗಿ ತೆರಿಗೆ ಸಂಗ್ರಹದಲ್ಲಿ ಇಳಿಕೆ

2017-18ನೇ ಸಾಲಿನಲ್ಲಿ ಬಿಬಿಎಂಪಿ 3,300 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿತ್ತು. ಆದರೆ, ಸಂಗ್ರಹವಾಗಿದ್ದು 2,133 ಕೋಟಿ ರೂ.ಗಳು ಮಾತ್ರ. 2018-19ನೇ ವರ್ಷದಲ್ಲಿಯೂ ಅದೇ ಗುರಿ ಇಟ್ಟುಕೊಳ್ಳಲಾಗಿತ್ತು. ಆಸ್ತಿ ತೆರಿಗೆ ಸಂಗ್ರಹ 2,545.59 ಕೋಟಿ ರೂ. ಆಗಿತ್ತು.

 2019-20ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಎಷ್ಟು?

2019-20ನೇ ಸಾಲಿನಲ್ಲಿ ತೆರಿಗೆ ಸಂಗ್ರಹ ಎಷ್ಟು?

2019-20ನೇ ಸಾಲಿನಲ್ಲಿ ಬಿಬಿಎಂಪಿ 3,500 ಕೋಟಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಗುರಿ ಹೊಂದಿತ್ತು. ಆದರೆ, ಸಂಗ್ರಹವಾದ ಮೊತ್ತ 2,688.97 ಕೋಟಿ ರೂ.ಗಳು ಮಾತ್ರ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ 100 ಕೋಟಿಯಷ್ಟು ಕಡಿಮೆ ಸಂಗ್ರಹವಾಗಿದೆ.

Recommended Video

Pulwama ಮಾದರಿಯ ಮತ್ತೊಂದು ದುರಂತವನ್ನು ತಪ್ಪಿಸಿದ ಭಾರತೀಯ ಸೇನೆ | Oneindia Kannada
 ಅನೇಕ ನಾಗರಿಕರು ತೆರಿಗೆ ಕಟ್ಟಿಲ್ಲವೇಕೆ?

ಅನೇಕ ನಾಗರಿಕರು ತೆರಿಗೆ ಕಟ್ಟಿಲ್ಲವೇಕೆ?

ಈ ಬಾರಿ ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಮೇ 31ರ ತನಕ ಆಸ್ತಿ ತೆರಿಗೆ ಪಾವತಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಹಲವಾರು ಮಾಲೀಕರು ತೆರಿಗೆ ಕಟ್ಟಿಲ್ಲ. ಬಾಡಿಗೆದಾರರು ಇಲ್ಲದ ಕಾರಣ ಮುಂದಿನ ವರ್ಷ ದಂಡದ ಮೊತ್ತದ ಸಹಿತ ತೆರಿಗೆ ಕಟ್ಟಲು ಚಿಂತನೆ ನಡೆಸುತ್ತಿದ್ದಾರೆ.

English summary
The Bruhat Bengaluru Mahanagara Palike (Palike) has prepared a proposal to hike the tax on residential properties by 18% to 30% The hike is expected to bring in an additional Rs 500 crore for the corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X