• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಮಸ್ಯೆಗೆ ಸ್ಪಂದಿಸಲು ಬಿಬಿಎಂಪಿಯಿಂದ 'Fix My Street' ಅಪ್ಲಿಕೇಷನ್

|

ಬೆಂಗಳೂರು, ಡಿಸೆಂಬರ್ 11: ಬಿಬಿಎಂಪಿಯಿಂದ ಸೋಮವಾರ ಫಿಕ್ಸ್ ಮೈ ಸ್ಟ್ರೀಟ್ (ನಮ್ಮ ಬಡಾವಣೆ ಸರಿಪಡಿಸಿ) ಎಂಬ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಲಾಯಿತು. ಇದು ಖಂಡಿತವಾಗಿಯೂ ಬೆಂಗಳೂರಿನ ಮಂದಿ ಖುಷಿ ಪಡುವ ಸಂಗತಿ. ತಮ್ಮ ಬಡಾವಣೆಯಲ್ಲಿನ ನಾಗರಿಕ ಸಮಸ್ಯೆಗಳನ್ನು ಪಾಲಿಕೆ ಗಮನಕ್ಕೆ ತರಬಹುದು.

ಅದಕ್ಕಾಗಿ ಏನು ಮಾಡಬೇಕು ಅಂದರೆ, ಸಮಸ್ಯೆ ಯಾವುದು ಎಂಬುದರ ಬಗ್ಗೆ ಒಂದು ಫೋಟೋ ತೆಗೆದು, ಆ ಮೂಲಕ ದೂರನ್ನು ಸಲ್ಲಿಸಬಹುದು. ಅಪ್ಲಿಕೇಷನ್ ಮೂಲಕ (ಫಿಕ್ಸ್ ಮೈ ಸ್ಟ್ರೀಟ್) ಮೂಲಕ ದೂರು ಸಲ್ಲಿಸಿದರೆ ಅದು ಸಂಬಂಧಿಸಿದ ಅಧಿಕಾರಿಯನ್ನು ತಲುಪುತ್ತದೆ. ಆ ಸಮಸ್ಯೆ ನಿವಾರಣೆ ಆದ ನಂತರ ದೂರುದಾರರ ಮೊಬೈಲ್ ಗೆ ಚಿತ್ರ ಸಮೇತ ಸಂದೇಶ ರವಾನೆಯಾಗುತ್ತದೆ.

ಬೆಂಗಳೂರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಲಂಡನ್ ಸಂಸ್ಥೆ ಜೊತೆ ಒಪ್ಪಂದ

ಈ ಅಪ್ಲಿಕೇಷನ್ ಅನ್ನು ಗೂಗಲ್ ಪ್ಲೇ ಸ್ಟೋರ್ ಮೂಲಕವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ರಸ್ತೆಯಲ್ಲಿ ಗುಂಡಿ ಬಿದ್ದಿದ್ದರೆ ಅಥವಾ ಬೀದಿ ದೀಪದ ಸಮಸ್ಯೆ ಇದ್ದರೆ ಹೀಗೆ ಬಡಾವಣೆಯಲ್ಲಿನ ನಾಗರಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬಿಬಿಎಂಪಿ ಗಮನವನ್ನಂತೂ ಸೆಳೆಯಬಹುದು. ಇಂಥದ್ದೇ ಪ್ರಯತ್ನ ದೆಹಲಿಯಲ್ಲಿ ಆಗಿದೆ.

ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.

ಈ ಅಪ್ಲಿಕೇಷನ್ ಹೇಗೆ ಕೆಲಸ ಮಾಡುತ್ತದೆ?

* 'Fix My Street' ಅಪ್ಲಿಕೇಷನ್ ಐಒಎಸ್ ಹಾಗೂ ಆಂಡ್ರಾಯಿಡ್ ಎರಡರಲ್ಲೂ ಲಭ್ಯವಿದೆ

* ನಾಗರಿಕರು ತಮ್ಮ ಬಡಾವಣೆಯ ಸಮಸ್ಯೆ ಬಗ್ಗೆ ಫೋಟೋ ತೆಗೆದು ಅಪ್ ಲೋಡ್ ಮಾಡಬೇಕು

* ಜಿಯೋ ಮ್ಯಾಪಿಂಗ್ ಮೂಲಕ ಯಾವ ನಿರ್ದಿಷ್ಟ ಸ್ಥಳದಲ್ಲಿ ಸಮಸ್ಯೆಯಿದೆ ಎಂಬುದು ಗೊತ್ತಾಗುತ್ತದೆ.

* ಆ ನಂತರ ವಾರ್ಡ್ ನ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ದೂರುದಾರರ ಸಂಪರ್ಕ ಕಲ್ಪಿಸಲಾಗುತ್ತದೆ.

* ರಿಜಿಸ್ಟರ್ ಆಗಿಯೋ ಅಥವಾ ಆಗದೆಯೋ ದೂರನ್ನು ದಾಖಲಿಸಬಹುದು. ಅದು ಯಶಸ್ವಿಯಾಗಿ ಸಲ್ಲಿಕೆಯಾದಾಗ ಎಸ್ಸೆಮ್ಮೆಸ್ ಬರುತ್ತದೆ

* ಸಮಸ್ಯೆಗೆ ಸಂಬಂಧಿಸಿದಂತೆ ಆದ ಕೆಲಸಗಳ ಬಗೆಗಿನ ಮಾಹಿತಿಯನ್ನು ಫೋಟೋ ಮತ್ತು ಇತರ ಮಾಹಿತಿಯೊಂದಿಗೆ ಅಪ್ಲಿಕೇಷನ್ ನಲ್ಲಿ ಅಪ್ ಡೇಟ್ ಮಾಡಲಾಗುತ್ತದೆ.

* ಈ ಅಪ್ಲಿಕೇಷನ್ ನಲ್ಲಿನ ದೂರು, ಮನವಿಗಳನ್ನು ಅಧಿಕಾರಿಗಳು ಹಾಗೂ ಎಂಜಿನಿಯರ್ ಗಳು ನೋಡಬಹುದು.

* ಕಸ ವಿಲೇವಾರಿಯಂಥ ಸಮಸ್ಯೆಯನ್ನು ಇಪ್ಪತ್ನಾಲ್ಕು ಗಂಟೆಯಲ್ಲಿ ಬಗೆಹರಿಸಬೇಕು, ಬೀದಿ ದೀಪದ ಸಮಸ್ಯೆಗಳನ್ನು ನಲವತ್ತೆಂಟು ಗಂಟೆಯಲ್ಲಿ ನಿವಾರಿಸಬೇಕು. ರಸ್ತೆ ಗುಂಡಿಗಳಿದ್ದರೆ ವಾರದ ಅವಧಿಯಲ್ಲಿ ಬಗೆಹರಿಸಬೇಕು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In an effort to resolve the civic woes across the city, the Bruhat Bengaluru Mahanagara Palike (BBMP) launched a mobile application ‘Fix My Street’ on 11 December. The app enables citizens to directly connect with the concerned ward engineers and elected representatives to resolve the problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more