Property: ಬೆಂಗಳೂರಿನಲ್ಲಿ ಈ ಆಸ್ತಿದಾರರು ಆಸ್ತಿ ತೆರಿಗೆ ಪಾವತಿಸಲು ಲಾಸ್ಟ್ ವಾರ್ನಿಂಗ್ ಕೊಟ್ಟ ಬಿಬಿಎಂಪಿ!
Property: ಬೆಂಗಳೂರಿನಲ್ಲಿ ಕೆಲವು ನಿರ್ದಿಷ್ಟ ಆಸ್ತಿದಾರರಿಂದ ಹೊಸ ಮಾದರಿಯ ಆಸ್ತಿ ತೆರಿಗೆ ಸಂಗ್ರಹ ಮಾಡುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಂದಾಗಿದೆ. ಇದರ ಬಗ್ಗೆ ಬಿಬಿಎಂಪಿಯ ಅಧಿಕಾರಿಗಳಿಗೆ ಕೆಲವೊಂದು ಪ್ರಮುಖ ಸೂಚನೆಗಳನ್ನು ನೀಡಲಾಗಿದೆ. ಕಳೆದ ವರ್ಷದಿಂದ ಬೆಂಗಳೂರಿನಲ್ಲಿ ಆಸ್ತಿದಾರರಿಂದ ಆಸ್ತಿ ತೆರಿಗೆ ಸಂಗ್ರಹಿಸುವುದಕ್ಕೆ ಹಲವು ಕಠಿಣ ಕ್ರಮಗಳನ್ನು ಅನುಸರಿಸಿಕೊಂಡು ಬರುತ್ತಿದ್ದು. ಇದೀಗ ಮತ್ತೊಂದು ಹೊಸ ಅಪ್ಡೇಟ್ಸ್ ನೀಡಿದೆ. ಬೆಂಗಳೂರಿನಲ್ಲಿ ಆಸ್ತಿ ಹೊಂದಿದ್ದು ನೀವು ಆ ಆಸ್ತಿಯಿಂದ ನಿರ್ದಿಷ್ಟವಾಗಿ ಲಾಭ ಮಾಡಿಕೊಳ್ಳುತ್ತಿದ್ದರೆ ನಿಮಗೆ ಈ ಹೊಸ ಆಸ್ತಿ ತೆರಿಗೆ ಅನ್ವಯಿಸಲಿದೆ. ಇಷ್ಟಕ್ಕೂ ಬಿಬಿಎಂಪಿ ಹೇಳಿರುವುದೇನು ಹಾಗೂ ಇದು ಯಾವ ಆಸ್ತಿದಾರರಿಗೆ ಅನ್ವಯಿಸಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಹೊಸ ಮಾದರಿಯ ಆಸ್ತಿ ತೆರಿಗೆ ಸಂಗ್ರಹಿಸುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮುಂದಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂಮಿ ಮತ್ತು ಕಟ್ಟಡಗಳ ಮೇಲೆ ಸ್ಥಾಪಿಸಲಾದ ದೂರ ಸಂಪರ್ಕ ಗೋಪುರಗಳು (ಟೆಲಿಕಾಂ ನೆಟ್‌ವರ್ಕ್ ಟವರ್) ಮೇಲೆ ಆಸ್ತಿ ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು. ಅದರಂತೆ ಟೆಲಿಕಾಂ ಟವರ್‌ಗಳನ್ನು ಹೊಂದಿರುವಂತಹ ಸ್ವತ್ತಿನ ಆಸ್ತಿ ಮಾಲೀಕರು ಟವರ್‌ಗಳನ್ನು ಘೋಷಿಸಿಕೊಂಡು 2014-15ನೇ ಸಾಲಿನ 2ನೇ ಕಂತಿನಿಂದ ಆಸ್ತಿತೆರಿಗೆಯನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಎಂದು ಹೇಳಲಾಗಿದೆ.

"ಒಂದು ಬಾರಿ ಪರಿಹಾರ ಯೋಜನೆ"ಯಡಿಯಲ್ಲಿ ಟವರ್‌ಗಳಿಗೆ ನಿಗದಿಪಡಿಸಿರುವ ಆಸ್ತಿತೆರಿಗೆ ಪಾವತಿಸುವಂತೆ ತಿಳಿಸಲಾಗಿದೆ. ಆದರೆ, ಈ ಯೋಜನೆಯನ್ನು ಕೆಲವು ಆಸ್ತಿದಾರರು ಮಾತ್ರ (Reliance jio, Summit and BSNL) ಉಪಯೋಗಿಸಿಕೊಂಡು ಆಸ್ತಿತೆರಿಗೆಯನ್ನು ಪಾವತಿಸಿರುತ್ತಾರೆ. ಇನ್ನುಳಿದ ಟವರ್ ಹೊಂದಿರುವ ಆಸ್ತಿಮಾಲೀಕರು ಈ ಗೋಪುರಗಳಿಗೆ ಆಸ್ತಿತೆರಿಗೆಯನ್ನು ಪಾವತಿಸಿಲ್ಲ. ಈ ಸಂಬಂಧ ಉಲ್ಲೇಖ-(3) ರಂತೆ ದಿ: 15-02-2025 ಮತ್ತು ದಿ:20-03-2025 ಸಭೆಯನ್ನು ಏರ್ಪಡಿಸಿ ಬಾಕಿತೆರಿಗೆಯನ್ನು ದಿನಾಂಕ:31-03-2025 ರ ಒಳಗಾಗಿ ಪಾವತಿಸುವಂತೆ ತಿಳಿಸಲಾಗಿದ್ದರೂ ಸಹ ತೆರಿಗೆಯನ್ನು ಬಾಕಿ ಉಳಿಸಿಕೊಂಡಿರುವುದು ಕಂಡುಬಂದಿರುತ್ತದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪಾಲಿಕೆಗೆ ಒಂದು ಬಾರಿ ಪರಿಹಾರ ಯೋಜನೆ ಅಡಿಯಲ್ಲಿ ಪಾವತಿಸಿರುವ ಟವರ್‌ಗಳನ್ನು ಹೊರತುಪಡಿಸಿ ಇನ್ನುಳಿದ ದೂರಸಂಪರ್ಕ ಟವರ್‌ಗಳ ಮಾಲೀಕರಿಂದ ಬಾಕಿ ಆಸ್ತಿತೆರಿಗೆಯನ್ನು ಶೀಘ್ರವಾಗಿ ವಸೂಲಾತಿ ಮಾಡುವಂತೆ ಈ ಮೂಲಕ ಸೂಚಿಸಿದೆ. ಮುಂದುವರಿದು ಟವರ್‌ಗಳ ಆಸ್ತಿತೆರಿಗೆ ಪಾವತಿಸುವಂತೆ ಅನೇಕ ಬಾರಿ ತಿಳಿಸಲಾಗಿ ಹಾಗೂ 'ಒಂದು ಬಾರಿ ಪರಿಹಾರ ಯೋಜನೆ' ಅಡಿಯೂ ಸಹ ತಿಳಿಸಲಾಗಿದೆ. ಈ ಅವಕಾಶವನ್ನು ಉಪಯೋಗಿಸಿಕೊಳ್ಳದೆ, ಬಾಕಿ ಆಸ್ತಿತೆರಿಗೆ ಉಳಿಸಿಕೊಂಡಿರುವ ತೆರಿಗೆದಾರರಿಗೆ ಈ ಕೆಳಕಂಡಂತೆ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಹೇಳಲಾಗಿದೆ.
* ಬಿಬಿಎಂಪಿ ಆಸ್ತಿತೆರಿಗೆ ನಿರ್ಧರಣೆ, ವಸೂಲಾತಿ ಮತ್ತು ಪರಿಷ್ಕರಣೆ ನಿಯಮಗಳು-2024 ರ ನಿಯಮಾವಳಿಗಳಂತೆ ಸ್ವತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
* ಟವರ್‌ಗಳನ್ನು ನಿರ್ಮಿಸಲು/ನಡೆಸಲು ಪಾಲಿಕೆಯಿಂದ ನೀಡಿರುವ ಪರವಾನಿಗೆಯನ್ನು ರದ್ದುಪಡಿಸಲಾಗುವುದು.
* ದೂರಸಂಪರ್ಕ ಗೋಪುರಗಳಿಗೆ BESCOM ವತಿಯಿಂದ ವಿದ್ಯುಚ್ಛಕ್ತಿ ಸರಬರಾಜು ನಿಲ್ಲಿಸುವ ಸಂಬಂಧ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವುದು.
ಈ ಮೇಲ್ಕಂಡ ಕಠಿಣ ಕ್ರಮಗಳನ್ನು ಕೈಗೊಂಡು ಬಾಕಿ ಇರುವ ಆಸ್ತಿತೆರಿಗೆಯನ್ನು ಅನ್ವಯವಾಗುವ ದಂಡ ಹಾಗೂ ಬಡ್ಡಿಯೊಂದಿಗೆ ವಸೂಲಾತಿ ಮಾಡಲು ಸೂಚಿಸಿದೆ ಎಂದು ಬಿಬಿಎಂಪಿಯ ವಿಶೇಷ ಕಂದಾಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.












Click it and Unblock the Notifications