ಬೆಂಗಳೂರು ಜೀವವೈವಿಧ್ಯ ರಕ್ಷಣೆ ಈ ಕ್ರಮ ಕೈಗೊಳ್ಳಲು ಬಿಬಿಎಂಪಿ ಸೂಚನೆ

ಬೆಂಗಳೂರು, ನವೆಂಬರ್ 17: ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ರಕ್ಷಣೆಗೆ ಸರ್ಕಾರ ಆದ್ಯತೆ ವಹಿಸಿದೆ. ಈ ಸಂಬಂಧ 'ಜನತಾ ಜೀವವೈವಿಧ್ಯ ದಾಖಲಾತಿ'ಯನ್ನು ಪುನರ್ ವಿಮರ್ಶಿಸಿ ಸಲಹೆ ಸೂಚನೆಗಳನ್ನು ಸ್ವೀಕರಿಸಿ ನವೀಕರಿಸಲು ಜೀವ ವೈವಿಧ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತಗಾರರಾದ ಬಿಬಿಎಂಪಿ ಸೂಚನೆ ನೀಡಿದೆ.

ಜೀವವೈವಿದ್ಯ ದಾಖಲಾತಿಗೆ ಸಂಬಂಧಿಸಿದಂತೆ ಇಂದು ಪಾಲಿಕೆ ಕೇಂದ್ರ ಕಛೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಮಿತಿಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು.

bbmp-instruct-to-make-survey

ಜೀವವೈವಿದ್ಯ ಉಳಿಸುವ ಅಂಗವಾಗಿ ಯಾವ ಯಾವ ಯಶಸ್ಸು ಕಂಡಿವೆ. ಅದನ್ನು ದಾಖಲಿಸುವ ಕೆಲಸವಾಗಬೇಕು. ಬೆಂಗಳೂರಿನಲ್ಲಿರುವ ಪಾರಂಪರಿಕವಾಗಿ ಇರುವಂತಹ ಜಾಗಗಳು, ಹಸಿರು ವನಗಳ ಬಗ್ಗೆ ಸಮಿಕ್ಷೆ ನಡೆಸಿ ವರದಿಸಲ್ಲಿಸಬೇಕು ಎಂದು ನಿರ್ದೇಶಿಸಿದರು. ಕ್ರಮಬದ್ಧವಾಗಿ ಜೀವ ವೈವಿಧ್ಯ ನಿರ್ವಹಣೆಗೆ ಬೇಕಾಗುವ ಎಲ್ಲಾ ಅಗತ್ಯ ಸೌಲಭ್ಯವನ್ನು ಪಾಲಿಕೆ ಒದಗಿಸಲಿದೆ ಎಂದು ಅವರು ತಿಳಿಸಿದರು.

ಸಂಪೂರ್ಣ ದಾಖಲಾತಿ ತಯಾರಿಸಿ

ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮಾತನಾಡಿ, ನಗರದಲ್ಲಿ ಕೃಷಿ, ಅರಣ್ಯ ಹಾಗೂ ವನ್ಯಜೀವಿ ವಿಭಾಗದಲ್ಲಿ ಜೀವ ವೈವಿಧ್ಯ ನಿರ್ವಹಣೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿ ತಯಾರಿಸಲು ಜೀವ ವೈವಿಧ್ಯ ನಿರ್ವಹಣಾ ಸಮತಿ ಸದಸ್ಯರಿಗೆ ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಸಂಬಂಧಪಟ್ಟ ನರ್ಸರಿಗೆ ಭೇಟಿ ನೀಡಿ ವಿಶಿಷ್ಟವಾದ ತಳಿಗಳ ಬಗ್ಗೆ ಸಮೀಕ್ಷೆ ನಡೆಸಬೇಕು. ಜೊತೆಗೆ ನಮ್ಮ ಬೆಂಗಳೂರಿನ ವಾತಾವರಣಕ್ಕೆ ತಕ್ಕಂತೆ ಬೆಳೆಯುತ್ತಿರುವ ಹೊಸ ತಳಿಗಳ ಬಗ್ಗೆ ಪಟ್ಟಿ ಮಾಡಬೇಕು. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಮರಗಳ ಬಗ್ಗೆ ಸಮೀಕ್ಷೆ ನಡೆಸಿ ಯಾವ ಮರಗಳು ವಿನಾಶದ ಅಂಚಿನಲ್ಲಿದೆ, ಯಾವ ಮರಗಳು ಹೆಚ್ಚಿವೆ ಎಂಬುದರ ಬಗ್ಗೆ ವಿವರ ಪಡೆಯಬೇಕು ಎಂದು ಹೇಳಿದರು.

ಇನ್ನೂ ವನ್ಯಜೀವಿ ಸಂಬಂಧಿಸಿದಂತೆ ಅಪಾಯದ ಅಂಚಿನಲ್ಲಿರುವ ಪಕ್ಷಿಗಳು ಹಾಗೂ ವಿಶಿಷ್ಟ ಜೀವಿಗಳ ಬಗ್ಗೆ ಸಮಿಕ್ಷೆ ನಡೆಸಿ ಅದರ ಉಳಿವಿಗಾಗಿ ಬೇಕಾಗುವ ಎಲ್ಲಾ ರೀತಿಯ ಕ್ರಮಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಲು ಅವರು ಸೂಚಿಸಿದರು.

bbmp-instruct-to-make-survey

ಸಭೆಯಲ್ಲಿ ಕೈಗೊಂಡ ನಿರ್ಣಯಗಳು

1. 2020ನೇ ಸಾಲಿನಲ್ಲಿ ಪ್ರಕಟಿಸಿರುವ ಜನತಾ ಜೀವವೈವಿಧ್ಯ ದಾಖಾಲಾತಿಯನ್ನು ಪುರ್ನವಿಮರ್ಶಿಸಿ ಸಲಹೆ ಸೂಚನೆಗಳನ್ನು ಸ್ವೀಕರಿಸಿ ನವೀಕರಿಸುವುದು.

2. ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವವೈವಿಧ್ಯ ಉಳಿಸಲು ಕಾರ್ಯತಂತ್ರ ರೂಪಿಸುವುದು ಮತ್ತು ಕಾರ್ಯಗತಗೊಳಿಸುವುದು.

3. ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವವೈವಿಧ್ಯ ಉಳಿಸಲು ಹಾಗೂ ಜನತಾ ಜೀವವೈವಿಧ್ಯ ದಾಖಾಲಾತಿ ನವೀಕರಿಸಲು ಆಸಕ್ತ ಸ್ವಯಂಸೇವಕರನ್ನು ಒಳಗೊಂಡ ತಂಡ ರೂಪಿಸುವುದು.

ಸಭೆಯಲ್ಲಿ ಅರಣ್ಯ ವಿಭಾಗದ ವಿಶೇಷ ಆಯುಕ್ತ ಪ್ರೀತಿ ಗೆಹ್ಲೋಟ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಜಿ.ಎಲ್.ಸ್ವಾಮಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್, ಸಮಿತಿಯ ಸದಸ್ಯರುಗಳಾದ ಅಕ್ಷಯ್ ಹೆಬ್ಲಿಕರ್, ಡಾ. ನಂದಿನಿ.ಎನ್. ಡಾ. ಉಷಾ ಆನಂದಿ, ವಿಜಯ್ ನಿಶಾಂತ್ ಮತ್ತಿತರರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+