ಬೆಂಗಳೂರಿಗರೇ... ಚರಂಡಿ, ಪುಟ್‌ಪಾತ್ ಹಾನಿ, ನಿರ್ಬಂಧಕ್ಕೆ ದಂಡ ಕಟ್ಟಬೇಕಿದೆ ಎಚ್ಚರ!
ಬೆಂಗಳೂರು, ಮಾರ್ಚ್. 26: ಸಿಲಿಕಾನ್ ಸಿಟಿಯಲ್ಲಿ ಜಾಗದ ಸಮಸ್ಯೆ ಇರುವುದು ಗೊತ್ತೆ ಇದೆ. ಇದರ ಜೊತೆಗೆ ಪಾರ್ಕಿಂಗ್‌ಗಾಗಿ ಪುಟ್‌ಪಾತ್‌ಗಳನ್ನೇ ಬಳಸುವುದನ್ನು ನಾವು ನೋಡುತ್ತಿದ್ದೇವೆ. ಇನ್ನು, ಪುಟ್‌ಪಾತ್, ಚರಂಡಿಗಳನ್ನು ಆಕ್ರಮಿಸಿಕೊಂಡಿರುವುದು, ನಿರ್ಬಂಧಿಸಿರುವುದರ ಬಗ್ಗೆ ನಾಗರಿಕರು ದೂರುಗಳನ್ನು ದಾಖಲಿಸುತ್ತಿದ್ದಾರೆ.
ಬೆಂಗಳೂರು ನಿವಾಸಿಗಳಿಂದ ಮತ್ತು ನಾಗರಿಕ ಸಂಸ್ಥೆಗಳ ಕಾರ್ಯಕರ್ತರಿಂದ ನಿರಂತರ ದೂರುಗಳು ಬರುತ್ತಿರುವ ನಂತರ ಎಚ್ಚೆತ್ತುಕೊಂಡಿರುವ ಬಿಬಿಎಂಪಿಯು ಆರೋಪಿಗಳ ವಿರುದ್ಧ ರೂ 5,000 ರಿಂದ ರೂ 10,000 ವರೆಗೆ ದಂಡವನ್ನು ಹಾಕಲು ಯೋಜನೆ ರೂಪಿಸುತ್ತಿದೆ. ಚರಂಡಿಗಳು ಅಥವಾ ಫುಟ್‌ಪಾತ್‌ಗಳನ್ನು ನಿರ್ಬಂಧಿಸುವ ಅಥವಾ ಹಾನಿ ಮಾಡುವ ಕಟ್ಟಡದ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಂದ 5,000 ರೂ.ನಿಂದ 10,000 ರೂ.ವರೆಗೆ ದಂಡ ವಿಧಿಸುತ್ತದೆ.

ನಿರ್ಮಾಣ ಚಟುವಟಿಕೆಗಳ ಸಂದರ್ಭದಲ್ಲಿ ಫುಟ್‌ಪಾತ್‌ಗಳು ಮತ್ತು ಚರಂಡಿಗಳಿಗೆ ಹಾನಿ ಮಾಡುವ ಉಲ್ಲಂಘಿಸುವವರನ್ನು ಗುರುತಿಸಲು ಬಿಬಿಎಂಪಿ ಇತ್ತೀಚೆಗೆ 10 ದಿನಗಳ ಅಭಿಯಾನವನ್ನು ನಡೆಸಿದೆ. ಪಾಲಿಕೆಯವರು ಈ ನಿಯಮು ಉಲ್ಲಂಘಿಸುವವರಿಗೆ ದಂಡ ವಿಧಿಸಿದ್ದು, ಚರಂಡಿಗಳಿಗೆ ಉಂಟಾದ ಹಾನಿಯನ್ನು ಸರಿಪಡಿಸಲು ಅವರಿಗೆ ಆದೇಶಿಸಿದೆ.
ಮಹದೇವಪುರ ವಲಯದಾದ್ಯಂತ ಸಮಸ್ಯೆ ಇದ್ದು, ಹಲವು ರಸ್ತೆಗಳು ನೀರಿನಿಂದ ತುಂಬಿ ಹರಿಯುತ್ತಿವೆ. ಸಾಮಾನ್ಯವಾಗಿ ಫುಟ್‌ಪಾತ್‌ಗಳ ಕೆಳಗೆ ಇರುವ ಮಳೆನೀರು ಚರಂಡಿಗಳಿಂದ ನೀರು ರಸ್ತೆಗಳಿಗೆ ನೀರು ಬರುತ್ತಿದೆ. ಈ ಕುರಿತು ಮಹದೇವಪುರ ಕಾರ್ಯಪಡೆಗೆ ನಿವಾಸಿಗಳು ನಿತ್ಯ ದೂರು ನೀಡುತ್ತಿದ್ದರು. ಭಾರೀ ವಾಹನಗಳಿಗೆ ಸುಲಭ ಮಾರ್ಗಗಳನ್ನು ನಿರ್ಮಿಸಲು ನಿರ್ಮಾಣ ಸ್ಥಳಗಳ ಸುತ್ತಮುತ್ತಲಿನ ಚರಂಡಿಗಳನ್ನು ಮಣ್ಣಿನಿಂದ ನಿರ್ಬಂಧಿಸಲಾಗಿದೆ. ಫುಟ್ ಪಾತ್ ಸ್ಲ್ಯಾಬ್ ಗಳನ್ನು ತೆಗೆದು ಮಣ್ಣು ತುಂಬಿಸಲಾಗಿದೆ ಎಂದು ಆರೋಪಿಸಲಾಗಿದೆ.
"ದೊಡ್ಡ ಮಳೆನೀರಿನ ಚರಂಡಿಗಳಿಗೆ ಸಂಪರ್ಕಿಸುವ ಸಣ್ಣ ಚರಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಮಾಲೀಕರಿಗೆ 5 ಸಾವಿರ-10 ಸಾವಿರ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ. ಚರಂಡಿ ಬದಲು ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿರುವ ಬಗ್ಗೆ ನಿವಾಸಿಗಳಿಂದ ದೂರುಗಳು ಬಂದಿವೆ" ಎಂದು ಮಹದೇವಪುರ ಟಾಸ್ಕ್ ಫೋರ್ಸ್ (ಮೊಬಿಲಿಟಿ) ಪ್ರಧಾನ ಕಾರ್ಯದರ್ಶಿ ಕ್ಲೆಮೆಂಟ್ ಜಯಕುಮಾರ್ ಹೇಳಿದ್ದಾರೆ.
"ದೂರುಗಳನ್ನು ಪರಿಶೀಲಿಸಲು ಬಿಬಿಎಂಪಿ ಅಧಿಕಾರಿಗಳನ್ನು ಕೇಳಿದಾಗ, ಅವರು ನಿರ್ಮಾಣ ಸ್ಥಳಗಳಿಂದ ಫುಟ್‌ಪಾತ್ ಸ್ಲ್ಯಾಬ್‌ಗಳನ್ನು ತೆಗೆದು ಮಣ್ಣು ತುಂಬುತ್ತಿರುವುದನ್ನು ಗಮನಿಸಿದ್ದಾರೆ. ಮಣ್ಣು ತುಂಬುವುದರಿಂದ ಭಾರೀ ವಾಹನಗಳು ಸುಲಭವಾಗಿ ಸಂಚರಿಸಲು ಅನುಕೂಲವಾಗುತ್ತದೆ. ಈ ಕಾಲುದಾರಿಗಳು ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳಿಗೆ ಇವೆ. ಆದರೆ, ಇದರಲ್ಲಿ ಭಾರೀ ವಾಹನಗಳನ್ನು ಓಡಿಸಲಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ವಲಯ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಮತ್ತು ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸೂಚಿಸಿದ್ದೇವೆ" ಎಂದು ಹೇಳಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ











Click it and Unblock the Notifications