ಗಮನಿಸಿ: ಬೆಂಗಳೂರು 'ಕರೆ, ಉದ್ಯಾನ, ಹಸಿರು' ರಕ್ಷಣೆಗೆ ಈ 3 ಆಪ್ ಬಳಸಿ: ಬಳಕೆ, ಲಿಂಕ್ ಮಾಹಿತಿ ಇಲ್ಲಿದೆ
ಬೆಂಗಳೂರು, ಜನವರಿ 14: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳು, ಕೆರೆಗಳ ಸಂರಕ್ಷಣೆಯ ಜೊತೆಗೆ ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗಿದೆ. ಜೊತೆಗೆ ನಗರವನ್ನು ಹಸರೀಕರಣಗೊಳಿಸುವುದು ಅವಶ್ಯಕತೆ ಇದೆ. ಅವಲ್ಲವುಗಳ ರಕ್ಷಣೆ ನಮ್ಮೆಲ್ಲ ಆದ್ಯ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಉದ್ಯಾನಗಳು, ಕೆರೆಗಳು ಹಾಗೂ ಹಸಿರೀಕರಣದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಂತೆ ಮಾಡಲು ಮೂರು ಪ್ರಮುಖ ಆಪ್ ಅನ್ನು ಪಾಲಿಕೆ ಬಿಡುಗಡೆ ಮಾಡಿದೆ.
ಬಿಬಿಎಂಪಿಯು ಭಾಉವಾರ ಬೆಂಗಳೂರನ್ನೂ ಹಸಿರಾಗಿರಿಸಲು, 'ಹಸಿರು ರಕ್ಷಕ' 'ಉದ್ಯಾನ ಮಿತ್ರ' ಹಾಗೂ 'ಕೆರೆ ಮಿತ್ರ' ಎಂಬ ಮೂರು ಮೊಬೈಲ್ ಆಪ್ ಗಳನ್ನು ಜೊತೆಗೆ ವೆಬ್ ಲಿಂಕ್ ಸಿದ್ದಪಡಿಸಿದೆ.

ಬೆಂಗಳೂರನ್ನು ಹಸಿರೀಕರಣ ಮಾಡಲು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಹಾಗೂ ಮರಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿಗೊಳಿಸುವ ಉದ್ದೇಶದಲ್ಲಿ ಬಿಬಿಎಂಪಿ ವ್ಯಾಪ್ತಿಯ 224 ಶಾಲಾ-ಕಾಲೇಜುಗಳ ಸುಮಾರು 52.015 ವಿದ್ಯಾರ್ಥಿಗಳು ನಡೆಲಾದ ಗಿಡಗಳಿಗೆ ಟ್ಯಾಗ್ ಮಾಡಿಸಿ ಹಸಿರು ರಕ್ಷಕ ಕಾರ್ಯಕ್ರಮ ಹಮ್ಮಿಕೊಂಡಿದೆ.
1. ಹಸಿರು ರಕ್ಷಕ ಮೊಬೈಲ್ ಆಪ್
ಮೊಬೈಲ್ ಆಪ್‌ನಲ್ಲಿ ಟ್ಯಾಗ್ ಮಾಡಲಾದ ವಿದ್ಯಾರ್ಥಿಗಳು ಟ್ಯಾಗ್ ಐಡಿಯೊಂದಿಗೆ ಲಾಗಿನ್ ಆಗಿ ತಮಗೆ ಟ್ಯಾಗ್ ಮಾಡಲಾದ ಗಿಡದ ವಿವರ, ಬೆಳವಣಿಗೆ ಬಗ್ಗೆ ಹಾಗೂ ಪೋಷಣೆಯ ಬಗ್ಗೆ ಮಾಹಿತಿ ಪಡೆದುಕೊಂಡು ಗಿಡದ ಪೋಷಣೆಯ ಬಗ್ಗೆ ದೂರುಗಳು ಹಾಗೂ ಸಲಹೆಗಳನ್ನು ನೀಡಿದ್ದಲ್ಲಿ ಸದರಿ ದೂರುಗಳನ್ನು ಸಂಯೋಜಕರು /ಗುತ್ತಿಗೆದಾರರು ಬಗೆಹರಿಸಿ ಮಾಹಿತಿಯನ್ನು ಆಪ್‌ನಲ್ಲಿ ನಮೂದಿಸಲಾಗುತ್ತದೆ. 03 ವರ್ಷಗಳ ಕಾಲ ಯಶಸ್ವಿಯಾಗಿ ಗಿಡಗಳನ್ನು ಉಸ್ತುವಾರಿ ಮಾಡಿದ ವಿದ್ಯಾರ್ಥಿಗಳಿಗೆ 'ಹಸಿರುರಕ್ಷಕ'ಎಂಬ ಪ್ರಮಾಣಪತ್ರವನ್ನು ನೀಡಲಾಗುವುದು.
* ಮೊಬೈಲ್ ಆಪ್‌ನಲ್ಲಿ ಗುತ್ತಿಗೆದಾರರಿಂದ 2023-24ನೇ ಸಾಲಿನಲ್ಲಿ ನೆಡಲಾದ ಗಿಡಗಳನ್ನು ಜಿಯೋ ಟ್ಯಾಗ್ ಮಾಡಲಾಗಿರುತ್ತದೆ.
* ಶಾಲಾ-ಮಕ್ಕಳು ತಮಗೆ ಟ್ಯಾಗ್ ಮಾಡಿರುವ ಐ.ಡಿಯಿಂದ ಹಾಗೂ ನೀಡಲಾಗಿರುವ Pass-Word ಬಳಸಿ''ನನ್ನ ಮರವನ್ನು ಪರಿಶೀಲಿಸಿ(Go to my tree)'' ಟ್ಯಾಬ್ ಬಳಸಿ ಗಿಡಗಳ ಬಳಿ ಹೋಗಿ ಗಿಡವನ್ನು ಪರಿಶೀಲಿಸಿ ಗಿಡದ ಬೆಳವಣಿಗೆಯ ಬಗ್ಗೆ ಮಾಹಿತಿಯನ್ನು ಆಪ್-ಲೋಡ್ ಮಾಡಬಹುದಾಗಿದೆ.
* ಗಿಡದ ಬೆಳವಣಿಗೆಯಲ್ಲಿ ಏನಾದರೂ ತೊಂದರೆ ಇದ್ದಲ್ಲಿ ಮರಗಳ ಮಾಹಿತಿಯನ್ನು ದಾಖಲಿಸಲಾಗುವುದು.
* ದಾಖಲಾತಿಯ ದೂರನ್ನು ಗುತ್ತಿಗೆದಾರರು ಹಾಗೂ ಸಮನ್ವಯರಿಗೆ ಅಲರ್ಟ್ ಕಳುಹಿಸಲಾಗುತ್ತದೆ.
* ಗುತ್ತಿಗೆದಾರರ ದೂರನ್ನು ಪರಿಶೀಲಿಸಿ ಸರಿಪಡಿಸಲಾಗುತ್ತದೆ.
ಹಸಿರು ರಕ್ಷಕ ವೆಬ್ ಆಪ್
hasirurakshaka.bbmpgov.in ಸದರಿ ವೆಬ್‌ಆಪ್‌ನಲ್ಲಿ ಸಾರ್ವಜನಿಕರು 2023-24ನೇ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನೆಡಲಾದ ಗಿಡಗಳ ವಿವರಗಳನ್ನು ವೀಕ್ಷಿಸಬಹುದಾಗಿದೆ. ಈ ಲಿಂಕ್‌ನಲ್ಲಿಯೇ ಪಾಲಿಕೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಹಾಯ 2.0ಗೆ ನೇರವಾಗಿ ಹಸಿರು ರಕ್ಷಕ ಸಂಬಂಧಿಸಿದ ದೂರನ್ನು ಸಹ ನೀಡುವ ಅವಕಾಶ ಒದಗಿಸಲಾಗಿದೆ.

2. ಉದ್ಯಾನ ಮಿತ್ರ ಮೊಬೈಲ್ ಆಫ್, ಬಳಕೆ ಮಾಹಿತಿ
* ಉದ್ಯಾನವನ ನಿರ್ವಹಣೆಯನ್ನು ವಿಕ್ಷೀಸುವ ಮೊಬೈಲ್ ಆಪ್ಲೀಕೇಷನ್‌ನಲ್ಲಿ ದೈನಂದಿನ ನಿರ್ವಹಣೆ ಕಾಮಗಾರಿಯ ತಪಾಸಣೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಲ್ಪಿಸಲಾದ ಮೊಬೈಲ್ ಆಪ್ಲೀಕೇಷನ್ ಆಗಿದ್ದು, ಸದರಿ ಆಪ್ಲೀಕೇಷನ್‌ನಿಂದ ತುರ್ತಾಗಿ ದೈನಂದಿನ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳು ಕಾಲಕಾಲಕ್ಕೆ ವರದಿ ಪಡೆಯುವಂತೆ ಸಿದ್ದಪಡಿಸಲಾಗಿದೆ.
ಈ ಆಪ್ಲಿಕೇಷನ್ ಬಳಕೆಯನ್ನು ಉದ್ಯಾನಗಳ ಅಧಿಕಾರಿಗಳು, ನಿರ್ವಹಣೆಯ ಗುತ್ತಿಗೆದಾರರು, ನೋಡಲ್ ಅಧಿಕಾರಿಗಳು ಹಾಗೂ ಹಸಿರು ಮಿತ್ರರು (ಉದ್ಯಾನವನಗಳ ನಿರ್ವಹಣೆಯ ಉಸ್ತುವರಿಯನ್ನು ವಹಿಸಲು ಇಚ್ಚಿಸಿರುವ ಸಾರ್ವಜನಿಕರಲ್ಲಿ ಆಯ್ಕೆಯಾಗಿರುವ ಉದ್ಯಾನವನ ಮಿತ್ರರು) ಮಾಡಲಿದ್ದಾರೆ.
ತಪಾಸಣೆಯ ವೇಳೆಯಲ್ಲಿ ಆಪ್ಲಿಕೇಷನ್‌ನಲ್ಲಿ ಕಲ್ಪಿಸಲಾದ ವಿವಿಧ ನಿರ್ವಹಣೆಯ ಅಂಶಗಳಾದ ಒಳಹರಿವಿನ ಸ್ವಚ್ಚತೆ, ಕಸ ಗುಡಿಸುವಿಕೆ, ಕಳೆ ತೆಗೆಯುವುದು, ಲಾನ್ ಮೂವಿಂಗ್, ಟ್ರೀಮಿಂಗ್,ಮರಗಿಡಗಳಿಗೆ ನೀರುಣಿಸುವಿಕೆ ಇತರೆ ನಿರ್ವಹಣೆಯ ಕಾಮಗಾರಿಗಳ ಬಗ್ಗೆ ದಿನನಿತ್ಯ ಪರಿಶೀಲಿಸಿ ಛಾಯಾಚಿತ್ರಗಳೊಂದಿಗೆ ಇದರಲ್ಲಿ ಆಪ್‌ಲೋಡ್ ಮಾಡಬಹುದು.
ಆಪ್ ನಿರ್ವಹಣೆ ಅಂಶಗಳು
ಸದರಿ ಆಪ್ಲಿಕೇಷನ್ ಬಳಕೆಯಿಂದ ಮೇಲಾಧಿಕಾರಿಗಳು, ದೈನಂದಿನ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವ ಅವಕಾಶ ಇದೆ. ತ್ವರಿತವಾಗಿ ಸಾರ್ವಜನಿಕರ ಅವಾಹಲುಗಳಿಗೆ ಪರಿಹಾರ ನೀಡಬಹುದಾಗಿದೆ.
* ಉದ್ಯಾನವನಗಳ ನಿರ್ವಹಣೆಯ ಆಪ್ಲಿಕೇಷನ್ ಹಾಗೂ ವೆಬ್ ಸೈಟ್ನಲ್ಲೂ ಸಹ ಸಾರ್ವಜನಿಕರಿಗೆ ಅನುಕೂಲವಾಗುವಂತೆ https://pms.bbmpgov.in/park ಸದರಿ ಲಿಂಕ್‌ನ ಮೂಲಕ ಉದ್ಯಾನವನ ಸೌಲಭ್ಯಗಳ ಬಗ್ಗೆ ಮಾಹಿತಿ ಉದ್ಯಾನವನಗಳ ನಿರ್ವಹಣೆಯ ಕುರಿತು ಸಾರ್ವಜನಿಕರು ವಿಕ್ಷೀಸಬಹುದು. ಈ https://pms.bbmpgov.in/park ಲಿಂಕ್‌ನಲ್ಲಿಯೇ ಪಾಲಿಕೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಹಾಯ2.0ಗೆ ನೇರವಾಗಿ ಉದ್ಯಾನವನಗಳಿಗೆ ಸಂಬಂಧಿಸಿದ ದೂರನ್ನು ನೀಡಬಹುದಾಗಿದೆ.
* ಒಂದು ತಿಂಗಳಿನ ತಪಾಸಣೆಯ ಮಾಹಿತಿಗಳನ್ನು ಯಾವುದೇ ಸಂದರ್ಭದಲ್ಲಿ ವೀಕ್ಷಿಸುವ ಅವಕಾಶವನ್ನು ಕಲ್ಸಿಸಲಾಗಿರುತ್ತದೆ.
* ಉದ್ಯಾನ ಮಿತ್ರ- ಉದ್ಯಾನ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಲು ಇಚ್ಚಿಸಿರುವ ಸಾರ್ವಜನಿಕರ ಆಯ್ಕೆಗಾಗಿ ನೋಂದಣಿ ಪ್ರಕ್ರಿಯೆನ್ನು ಹೊಸದಾಗಿ ಆರಂಭಿಸಲಾಗುವುದು.

3. ಕೆರೆ ಮಿತ್ರ ಆಪ್ ಬಳಕೆ, ಮಾಹಿತಿ
ಸದರಿ ಮೊಬೈಲ್ ಆಪ್ಲೀಕೇಷನ್‌ನಲ್ಲಿ ದೈನಂದಿನ ಕೆರೆ ನಿರ್ವಹಣೆ ಕಾಮಗಾರಿಯ ತಪಾಸಣೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಲ್ಪಿಸಲಾದ ಮೊಬೈಲ್ ಆಪ್ಲೀಕೇಷನ್ ಆಗಿದ್ದು ಸದರಿ ಆಪ್ಲೀಕೇಷನ್‌ನಿಂದ ತುರ್ತಾಗಿ ದೈನಂದಿನ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳು ಕಾಲ ಕಾಲಕ್ಕೆ ವರದಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿರುತ್ತದೆ.
ಸದರಿ ಆಪ್ಲಿಕೇಷನ್ ಬಳಕೆಯನ್ನು ಕೆರೆಯ ಅಧಿಕಾರಿಗಳು, ನಿರ್ವಹಣೆಯ ಗುತ್ತಿಗೆದಾರರು, ನೋಡಲ್ ಅಧಿಕಾರಿಗಳು ಹಾಗೂ ಕೆರೆ ಮಿತ್ರರು (ಕೆರೆಯ ನಿರ್ವಹಣೆಯ ಉಸ್ತುವಾರಿಯನ್ನು ವಹಿಸಲು ಇಚ್ಚಿಸಿರುವ ಸಾರ್ವಜನಿಕರಲ್ಲಿ ಆಯ್ಕೆಯಾಗಿರುವ ಕೆರೆ ಮಿತ್ರರು).
ತಪಾಸಣೆಯ ವೇಳೆಯಲ್ಲಿ ಆಪ್ಲಿಕೇಷನ್‌ನಲ್ಲಿ ಕಲ್ಪಿಸಲಾದ ವಿವಿಧ ನಿರ್ವಹಣೆಯ ಅಂಶಗಳಾದ ಒಳಹರಿವಿನ ಸ್ವಚ್ಚತೆ, ಹೊರಹರಿವಿನ ಸ್ವಚ್ಚತೆ, ಪಥ ಗುಡಿಸುವಿಕೆ, ಕಳೆ ತೆಗೆಯುವುದು, ನೀರಿನಲ್ಲಿರುವ ಕಳೆಯನ್ನು ತೆಗೆಯುವುದು, ಲಾನ್ ಟ್ರೀಮಿಂಗ್, ಮರಗಿಡಗಳಿಗೆ ನೀರುಣಿಸುವಿಕೆ ಇತರೆ ನಿರ್ವಹಣೆಯ ಕಾಮಗಾರಿಗಳ ಬಗ್ಗೆ ದಿನನಿತ್ಯ ಪರಿಶೀಲಿಸಿ ಛಾಯಾಚಿತ್ರಗಳೊಂದಿಗೆ ಆಪ್ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಸದರಿ ಆಪ್ಲಿಕೇಷನ್ ಬಳಕೆಯಿಂದ ಮೇಲಾಧಿಕಾರಿಗಳು, ದೈನಂದಿನ ನಿರ್ವಹಣೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವ ಅವಕಾಶ ಇದೆ, ತ್ವರಿತವಾಗಿ ಸಾರ್ವಜನಿಕರ ಅವಾಹಲುಗಳಿಗೆ ಪರಿಹಾರ ನೀಡಲು ಇದರಿಂದ ಸಾಧ್ಯವಾಗುತ್ತದೆ.
ಆಪ್ ನಿರ್ವಹಣೆ ಅಂಶಗಳು
* ಕೆರೆಗಳ ನಿರ್ವಹಣೆಯ ಆಪ್ಲಿಕೇಷನ್ ಹಾಗೂ ವೆಬ್ ಸೈಟ್ನಲ್ಲೂ ಸಹ ಸಾರ್ವಜನಿಕರಿಗೆ ಅನುಕೂಲವಾಗುವಂತೆ lms.bbmpgov.in/lake ಸದರಿ ಲಿಂಕ್ ಮೂಲಕ ಕೆರೆಯ ಸೌಲಭ್ಯಗಳ ಬಗ್ಗೆ ಮಾಹಿತಿ ಕೆರೆಯ ನಿರ್ವಹಣೆಯ ಕುರಿತು ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಯ ಹಾಜರಾತಿ ಸಹ ಸಾರ್ವಜನಿಕರು ವಿಕ್ಷೀಸಬಹುದು. ಇದೇ ಲಿಂಕ್ ಬಳಸಿ ಸಂಬಂಧಿಸಿದ ದೂರು ಸಹ ಕೊಡಬಹುದು.
* ಒಂದು ತಿಂಗಳಿನ ತಪಾಸಣೆಯ ಮಾಹಿತಿಗಳನ್ನು ಯಾವುದೇ ಸಂದರ್ಭದಲ್ಲಿ ವೀಕ್ಷಿಸುವ ಈ ಆಪ್‌ನಿಂದ ಸಾಧ್ಯವಾಗುತ್ತದೆ.
* ಕೆರೆ ಮಿತ್ರ- ಕೆರೆಯ ನಿರ್ವಹಣೆಯ ಉಸ್ತುವಾರಿ ವಹಿಸಲು ಇಚ್ಚಿಸಿರುವ ಸಾರ್ವಜನಿಕರ ಆಯ್ಕೆಗಾಗಿ ನೋಂದಣಿ ಪ್ರಕ್ರಿಯೆನ್ನು ಹೊಸದಾಗಿ ಆರಂಭಿಸಲಾಗುವುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
-
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ












Click it and Unblock the Notifications