ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಶಿಥಿಲ ಕಟ್ಟಡಗಳ ತೆರವಿಗೆ ಬಿಬಿಎಂಪಿ ನೋಟಿಸ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 08: ಮಳೆ ಬಂದಾಗ ಬಿಬಿಎಂಪಿಗೆ ಶಿಥಿಲ ಕಟ್ಟಡಗಳು ಕಣ್ಣಿಗೆ ಬೀಳುತ್ತದೆ. ಮಳೆಗೂ ಮುನ್ನವೇ ಮಾಡಬೇಕಿರುವ ಕೆಲಸಕ್ಕೆ ನೊಟೀಸ್ ಕೊಟ್ಟು ಸುಮ್ಮನಾಗಿದ್ದವರು. ಅತೀಯಾಗಿ ಮಳೆ ಬರುತ್ತಿರುವಾಗ ಮತ್ತೆ ಶಿಥಿಲ ಕಟ್ಟಡಗಳ ನೆನಪಾಗಿದೆ. ಶಿಥಿಲ ಕಟ್ಟಡಗಳ 423 ಮಾಲೀಕರಿಗೆ ಕಟ್ಟಡ ತೆರೆವುಗೊಳಿಸಲು ನೋಟಿಸ್ ಅನ್ನು ಬಿಬಿಎಂಪಿ ನೀಡಿದೆ.

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಾಲಿಕೆ ವ್ಯಾಪ್ತಿಯಲ್ಲಿ ಶಿಥಿಲಗೊಂಡ ಕಟ್ಟಡಗಳ ಸರ್ವೆಯನ್ನು ಮಾಡಿತ್ತು. ಈಗಾಗಲೇ ಶಿಥಿಲವಾದ ಕಟ್ಟಡಗಳ ಪಟ್ಟಿ ಸಿದ್ದ ಪಡಿಸಿದ ಪಾಲಿಕೆ ಬರೋಬ್ಬರಿ 629 ಹಳೇ ಕಟ್ಟಡಗಳನ್ನ ಗುತಿಸಿದೆ. ಬಿಬಿಎಂಪಿ ಗುರುತಿಸಿರುವ 629 ಪೈಕಿ 423 ಕಟ್ಟಡ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ.

ಬಿಬಿಎ‍ಪಿ ನೀಡಲಾಗಿರುವ ನೊಟೀಸ್‌ನಲ್ಲಿ ತಾವು ಕಟ್ಟಡವನ್ನ ಡೆಮಾಲೀಷನ್ ಮಾಡಿ. ಇಲ್ಲವಾದರೆ ಕಟ್ಟಡ ಡೆಮಾಲಿಷನ್ ವೆಚ್ಚ ಬರಿಸಿ ಅಂತ ನೋಟೀಸ್‌ನಲ್ಲಿ ಸೂಚಿಸಲಾಗಿದೆ. ಕಟ್ಟಡ ಡೆಮಾಲಿಷನ್ ಗೆ ಈಗಾಗಲೇ ಏಜೆನ್ಸಿ ಜೊತೆ ಒಪ್ಪಂದ ಮಾಡಿರುವ ಬಿಬಿಎಂಪಿ ಶಿಥಿಲ ಕಟ್ಟಡಗಳನ್ನು ತೆರವು ಮಾಡಲು ಮುಂದಾಗಿದೆ.

BBMP has issued notices to 423 owners of dilapidated buildings to vacate the buildings

ಯಾವ ವಲಯದಲ್ಲಿ ಎಷ್ಟು ಶಿಥಿಲ ಕಟ್ಟಡ
*ಪೂರ್ವ ವಲಯದಲ್ಲಿ- 101 ಶಿಥಿಲ ಕಟ್ಟಡ
*ಪಶ್ಚಿಮ ವಲಯದಲ್ಲಿ- 160 ಶಿಥಿಲ ಕಟ್ಟಡ
*ದಕ್ಷಿಣ ವಲಯದಲ್ಲಿ- 216 ಶಿಥಿಲ ಕಟ್ಟಡ
*ಬೊಮ್ಮನಹಳ್ಳಿ ವಲಯದಲ್ಲಿ- 11 ಶಿಥಿಲ ಕಟ್ಟಡ
*ದಾಸರಹಳ್ಳಿ ವಲಯದಲ್ಲಿ - 11 ಶಿಥಿಲ ಕಟ್ಟಡ
*ಮಹದೇವಪುರ ವಲಯದಲ್ಲಿ- 37 ಶಿಥಿಲ ಕಟ್ಟಡ
*ರಾಜರಾಜೇಶ್ವರಿ ವಲಯದಲ್ಲಿ- 9 ಶಿಥಿಲ ಕಟ್ಟಡ
*ಯಲಹಂಕ ವಲಯದಲ್ಲಿ - 84 ಶಿಥಿಲ ಕಟ್ಟಡ

ಪೂರ್ವ ವಲಯದಲ್ಲಿ- 101 ಶಿಥಿಲ ಕಟ್ಟಡ , ಪಶ್ಚಿಮ ವಲಯದಲ್ಲಿ- 160 ಶಿಥಿಲ ಕಟ್ಟಡ, ದಕ್ಷಿಣ ವಲಯದಲ್ಲಿ- 216 ಶಿಥಿಲ ಕಟ್ಟಡ, ಬೊಮ್ಮನಹಳ್ಳಿ ವಲಯದಲ್ಲಿ- 11 ಶಿಥಿಲ ಕಟ್ಟಡ, ದಾಸರಹಳ್ಳಿ ವಲಯದಲ್ಲಿ - 11 ಶಿಥಿಲ ಕಟ್ಟಡ, ಮಹದೇವಪುರ ವಲಯದಲ್ಲಿ- 37 ಶಿಥಿಲ ಕಟ್ಟಡ, ರಾಜರಾಜೇಶ್ವರಿ ವಲಯದಲ್ಲಿ- 9 ಶಿಥಿಲ ಕಟ್ಟಡ, ಯಲಹಂಕ ವಲಯದಲ್ಲಿ - 84 ಶಿಥಿಲ ಕಟ್ಟಡಗಳು ಇರುವ ಬಗ್ಗೆ ಬಿಬಿಎಂಪಿ ಸರ್ವೆಯನ್ನು ಮಾಡಿದೆ.

BBMP has issued notices to 423 owners of dilapidated buildings to vacate the buildings

ಮಳೆಗಾಲ ಮುಗಿಯವಷ್ಟರಲ್ಲಿ ಶಿಥಿಲ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸು ವಿಶ್ವಾಸವನ್ನು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರರವರು ವ್ಯಕ್ತಪಡಿಸಿದ್ದಾರೆ.

English summary
BBMP has issued notices to 423 owners of dilapidated buildings to vacate the buildings,Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X