ಮೊಹಮ್ಮದ್ ನಲಪಾಡ್ ಬೆಂಬಲಿಗರ ಮೇಲೆ ಬಿಬಿಎಂಪಿ ಕೇಸ್
ಬೆಂಗಳೂರು ಫೆಬ್ರವರಿ 1: ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಜನ್ಮದಿನಕ್ಕೆ ಶುಭಕೋರಿ ಬ್ಯಾನರ್ ಹಾಕಿದ್ದ ಬೆಂಬಲಿಗರಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ.
ಶುಕ್ರವಾರ ಜ 31 ರಂದು ಮೊಹಮ್ಮದ್ ನಲಪಾಡ್ ಜನ್ಮದಿನವಿತ್ತು. ನಗರದಲ್ಲಿ ಪ್ಲೆಕ್ಸ ಬ್ಯಾನರ್‌ಗಳನ್ನು ಹಾಕಲು ಅವಕಾಶ ಇಲ್ಲದಿದ್ದರೂ ನಲಪಾಡ್ ಬೆಂಬಲಿಗರು ವಾರ್ಡ್ ನಂಬರ್ 89 ರ ಅಪ್ಪಾರೆಡ್ಡಿ ಪಾಳ್ಯದಲ್ಲಿ ಅನುಮತಿ ಪಡೆಯದೇ ಹಾಕಲಾಗಿತ್ತು. ಈ ಕುರಿತು ಶನಿವಾರ ದೊಮ್ಮಲೂರು ಉಪ ವಿಭಾಗದ ಸಹ ಕಂದಾಯ ಅಧಿಕಾರಿ ಬಸವರಾಜ ಮಾಗಿ ಅವರು ಶಾಂತಿನಗರ ಪೊಲೀಸ್ ಠಾಣೆಯಲ್ಲಿ ರಾಮನಾಯಕ್ ಎಂಬವರ ಮೇಲೆ ದೂರು ದಾಖಲಿಸಿದ್ದಾರೆ.
ಶಾಂತಿನಗರದ ಪ್ರಭಾವಿ ಶಾಸಕರಾಗಿರುವ ಎನ್ ಎ ಹ್ಯಾರಿಸ್‌ರ ಮುಂದಿನ ರಾಜಕೀಯ ಶಕ್ತಿಯಾಗಿ ಬೆಳೆಯುತ್ತಿರುವ ಮೊಹಮ್ಮದ್ ನಲಪಾಡ್‌ಗೆ ಅವರ ಬೆಂಬಲಿಗರು ಜನ್ಮದಿನದ ನೆಪದಲ್ಲಿ ಪ್ರಚಾರ ಕೊಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಆದರೆ, ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಇರುವುದರಿಂದ ವಿವಾದಿತ ಮೊಹಮ್ಮದ್ ನಲಪಾಡ್ ಬೆಂಬಲಿಗರಿಗೆ ಬ್ಯಾನರ್ ಹಾಕುವ ವಿಷಯ ಬಿಬಿಎಂಪಿಯಲ್ಲಿ ರಾಜಕೀಯ ಬಣ್ಣ ಪಡೆದುಕೊಂಡಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಹ್ವಾನ ಪತ್ರಿಕೆಯಲ್ಲಿ ಮೊಹಮ್ಮದ್ ನಲಪಾಡ್‌ನ್ನು ಕರುನಾಡ ಯುವರಾಜ, ಯುವಕರ ಕಣ್ಮಣಿ ಎಂದು ಬಣ್ಣಿಸಲಾಗಿತ್ತು.












Click it and Unblock the Notifications