ಬೆಂಗಳೂರಲ್ಲಿ ಶ್ವಾನ ಪರವಾನಗಿ ಕಡ್ಡಾಯಕ್ಕೆ ತಾತ್ಕಾಲಿಕ ತಡೆ
ಬೆಂಗಳೂರು, ಜೂನ್ 10: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಯಿ ಸಾಕಲು ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು ಎಂಬ ನಿಯಮಕ್ಕೆ ತಾತ್ಕಾಲಿಕವಾಗಿ ತಡೆ ಬಿದ್ದಿದೆ.
ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಕುಟುಂಬಗಳು ಒಂದಕ್ಕಿಂತ ಹೆಚ್ಚು ಮತ್ತು ಪ್ರತ್ಯೇಕ ಸ್ವಂತ ಮನೆಗಳಲ್ಲಿ ಮೂರಕ್ಕಿಂತ ಹೆಚ್ಚು ನಾಯಿಗಳನ್ನು ಸಾಕುವಂತಿಲ್ಲ ಎಂಬ ನಿಯಮವನ್ನು ಬಿಬಿಎಂಪಿ ಕ್ರಮಕ್ಕೆ ಶ್ವಾನಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸಾಕಿಕೊಂಡ ನಾಯಿಗಳನ್ನು ಎಲ್ಲಿಗೆ ಕಳುಹಿಸಬೇಕು ಏನು ಮಾಡಬೇಕು ಎನ್ನುವ ಪ್ರಶ್ನೆಗಳಿಗೆ ಬಿಬಿಎಂಪಿ ಅಧಿಕಾರಿಗಳ ಬಳಿ ಉತ್ತರವಿಲ್ಲ. ಕಾನೂನು ತಜ್ಞರ ಸಲಹೆ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.

ಅಪಾರ್ಟ್‌ಮೆಂಟ್ ಗಳು ಮತ್ತು ಪ್ರತ್ಯೇಕ ಸ್ವಂತ ಮನೆಗಳಲ್ಲಿ ಇಂತಿಷ್ಟೇ ನಾಯಿಗಳನ್ನು ಸಾಕಬೇಕೆಂಬ ನಿಯಮಕ್ಕೆ ಮಾಲೀಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮಕ್ಕಳಂತೆ ಸಲಹಿರುವ ನಾಯಿಗಳನ್ನು ಬದುಕಲು ಸಾಧ್ಯವಿಲ್ಲ, ಹೀಗಾಗೀ ಈ ನಿಯಮವನ್ನು ಮಾರ್ಪಾಡು ಮಾಡಬೇಕೆಂಬ ಒತ್ತಾಯಗಳು ಕೇಳಿಬಂದಿದೆ.
ಶ್ವಾನ ಮಾಲೀಕರು ಸಲಹೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಪರವಾನಗಿ ಕಡ್ಡಾಯ ನಿಯಮವನ್ನು ಜಾರಿಗೊಳಿಸುವುದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications