ಪೌರ ಕಾರ್ಮಿಕರಿಗೆ ಕೊನೆಗೂ ವೇತನ ಬಿಡುಗಡೆ ಮಾಡಿದ ಬಿಬಿಎಂಪಿ!

Recommended Video

      ಕೊನೆಗೂ ಪೌರಕಾರ್ಮಿಕರ ಸಂಬಳವನ್ನ ಬಿಡುಗಡೆ ಮಾಡಿದ ಬಿಬಿಎಂಪಿ | Oneindia Kannada

      ಬೆಂಗಳೂರು, ಜು.10: ಕಳೆದೆರೆಡು ದಿನದಿಂದ ಭಾರಿ ವಿವಾದಕ್ಕೆ ಕಾರಣವಾಗಿದ್ದ ಬಿಬಿಎಂಪಿ ಪೌರಕಾರ್ಮಿಕರ ವೇತನ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ, ಕೊನೆಗೂ ಗುತ್ತಿಗೆ ಕಾರ್ಮಿಕ ಸುಬ್ರಮಣಿ ಅವರ ಸಾವಿನ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಮಂಗಳವಾರ ಬಾಕಿ ಇದ್ದ 27 ಕೋಟಿ ವೇತನವನ್ನು ಬಿಡುಗಡೆ ಮಾಡಿದೆ.

      ಈ ಕುರಿತು ಬಿಬಿಎಂಪಿ ಆಯುಕ್ತ ಎಂ. ಮಂಜುನಾಥ್ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ. ಈ ಕೂಡಲೇ ಪೌರಕಾರ್ಮಿಕರ ವೇತನವನ್ನು ಆಯಾ ಪೌರಕಾರ್ಮಿಕರ ಖಾತೆಗಳಿಗೆ ಬಯೋಮೆಟ್ರಕ್‌ ಪರಿಶೀಲನೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.

      ಜನವರಿ ತಿಂಗಳಿನಿಂದ ಪೌರಕಾರ್ಮಿಕರು ಸಂಬಳವಿಲ್ಲದೆ ಪರದಾಡುತ್ತಿದ್ದರು. ನಗರದ ಹಲವು ವಾರ್ಡ್‌ಗಳಲ್ಲಿ ಪೌರಕಾರ್ಮಿಕರ ವೇತನ ನೀಡದಿರುವ ಕ್ರಮವನ್ನು ವಿರೋಧಿಸಿ ಹಲವಾರು ಪೌರಕಾರ್ಮಿಕರು ಪ್ರತಿಭಟನೆ ನಡೆಯುತ್ತಲೇ ಬಂದಿದ್ದವು.

      BBMP finally releases Poura Karmikas salary

      ಆದರೆ ಎಚ್ಚೆತ್ತುಕೊಂಡಿರಲಿಲ್ಲ, ಈ ಮಧ್ಯೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಕೂಡಾ ಕಳೆದ ವಾರ ಧರಣಿ ನಿರತ ಪೌರಕಾರ್ಮಿಕರನ್ನು ಭೇಟಿ ಮಾಡಿ ವೇತನವನ್ನು ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದರು ಆದಾಗ್ಯೂ ಕೂಡ ಒಂದು ವಾರದಿಂದ ಬಿಬಿಎಂಪಿ ವೇತನ ನೀಡಿರಲಿಲ್ಲ.

      ಸೋಮವಾರವಷ್ಟೇ ಪೌರಕಾರ್ಮಿಕ ಸುಬ್ರಮಣಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪೌರಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದರು ಇದರಿಂದ ಎಚ್ಚೆತ್ತುಕೊಂಡಿರುವ ಪಾಲಿಕೆ ಮಂಗಳವಾರ ಮಧ್ಯಾಹ್ನ ವೇತನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

      ಇದರಿಂದ ಪೌರಕಾರ್ಮಿಕರ ವೇತನ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ಪ್ರತಿ ತಿಂಗಳು 7 ರಂದು ವೇತನವನ್ನು ನೀಡಬೇಕು ಹಾಗೂ ಪ್ರತಿ ತಿಂಗಳ 1ರಂದು ಬಯೋಮೆಟ್ರಿಕ್‌ ಪರಿಶೀಲಿಸುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್‌ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+