ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜೆಟ್ ಗೆ ಅನುಮೋದನೆ ಪಡೆಯುವಲ್ಲಿ ವಿಫಲವಾದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಮಾರ್ಚ್ 28: ಬಿಬಿಎಂಪಿಯು 2018-19ನೇ ಸಾಲಿನ ಬಜೆಟ್ ಅನುಮೋದನೆ ಪಡೆಯಲು ವಿಫಲವಾಗಿದೆ. ನೀತಿ ಸಂಹಿತೆ ಜಾರಿ ಮುನ್ಸೂಚನೆ ಇದ್ದರೂ ಕೂಡ ಅನುಮತಿಯನ್ನು ಪಡೆದುಕೊಂಡಿಲ್ಲ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ 3ನೇ ಬಾರಿಗೆ ಬಜೆಟ್ ಮಂಡಿಸಿದರ, ಸರ್ಕಾರದಿಂದ ಅನುಮೋದನೆ ಪಡೆಯಲು ವಿಳಂಬ ಮಾಡಿದೆ. ರಾಜ್ಯದಲ್ಲೀಗ ಚುನಾವಣಾ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬಜೆಟ್ ಗೆ ಅನುಮೋದನೆ ಪಡೆಯಲು ಹೊಸ ಸರ್ಕಾರ ರಚನೆಯಾಗುವವರೆಗೂ ಕಾಯಬೇಕಾದ ಪರಿಸ್ಥಿತಿ ಬಂದೊದಗಿದೆ.

ಬಿಬಿಎಂಪಿ ಬಜೆಟ್: 10,208 ಕೋಟಿ ಗಾತ್ರಕ್ಕೆ ಪರಿಷ್ಕರಣೆ ಬಿಬಿಎಂಪಿ ಬಜೆಟ್: 10,208 ಕೋಟಿ ಗಾತ್ರಕ್ಕೆ ಪರಿಷ್ಕರಣೆ

ಫೆ.28ರಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವ್ 9,325,53 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದರು. ಒಂದು ವಾರದ ಸುರ್ದೀರ್ಘ ಚರ್ಚೆ ಬಳಿಕ 883 ಕೋಟಿ ರೂ. ಹೆಚ್ಚುವರಿ ಆದಾಯ ಹಾಗೂ ವೆಚ್ಚ ಸೇರಿಸಿ 201-19ನೇ ಸಾಲಿನ ಆಯವ್ಯಯ ಮೊತ್ತವನ್ನು 10,208 ಕೋಟಿ ರೂ.ಗೆ ಹೆಚ್ಚಿಸಿ ಕೌನ್ಸಿಲ್ ಅನುಮೋದನೆ ಪಡೆಯಲಾಗಿತ್ತು.

BBMP fails to get approval for budget

ಬಜೆಟ್ ಗೆ ಅನುಮೋದನೆ ಪಡೆಯದಿದ್ದರೂ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ವೇತನ ಹಾಗೂ ಇತರೆ ಸೌಲಭ್ಯಗಳನ್ನು ನೀಡಲು ಲೇಖಾನುದಾನ ಪಡೆಯಬೇಕಾದ ಅನಿವಾರ್ಯತೆ ಇದೀಗ ಎದುರಾಗಿದೆ.

English summary
BBMP has failed to get approval for budget from the state government as the model code of conduct has been imposed.The corporation should wait for at least two months to get approval as the new government to be formed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X