ಬಿಬಿಎಂಪಿ ಉಪ ಮೇಯರ್ ಬಿ.ಭದ್ರೇಗೌಡ ಪರಿಚಯ

ಬೆಂಗಳೂರು, ಡಿಸೆಂಬರ್ 07 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ಆಗಿ ಬಿ.ಭದ್ರೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಮೀಳಾ ಉಮಾ ಶಂಕರ್ ಅವರ ನಿಧನದಿಂದಾಗಿ ಉಪ ಮೇಯರ್ ಸ್ಥಾನ ತೆರವಾಗಿತ್ತು.

ಬಿ.ಭದ್ರೇಗೌಡ ಅವರು ನಾಗಾಪುರ ವಾರ್ಡ್‌ನ ಬಿಬಿಎಂಪಿ ಸದಸದ್ಯರು. ಡಿಸೆಂಬರ್ 3ರಂದು ನಡೆದ ಚುನಾವಣೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪ ಮೇಯರ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ.

ಪ್ರತಿಕ್ಷದಿಂದ ಯಾವುದೇ ಅಭ್ಯರ್ಥಿ ಸ್ಪರ್ಧೆ ಮಾಡದ ಕಾರಣ ಚುನಾವಣಾಧಿಕಾರಿ ಶಿವಯೋಗಿ ಕಳಸದ್ ಅವರು ಬಿ.ಭದ್ರೇಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.

BBMP deputy mayor B Badregowda profile

ಮಾಧ್ಯಮಗಳ ಜೊತೆ ಮಾತನಾಡಿದ ಭದ್ರೇಗೌಡ ಅವರು, 'ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಅವರಿಗೆ ಸಹಕಾರ ನೀಡಿ, ನಗರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಉಪ ಮೇಯರ್ ಆಗಿ ಮಾಡಿದ್ದಕ್ಕೆ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆಸ ಅಭಿನಂದನೆ ಸಲ್ಲಿಸುತ್ತೇನೆ' ಎಂದರು.

ಬಿ.ಭದ್ರೇಗೌಡ ಪರಿಚಯ

* ಬಿ.ಭದ್ರೇಗೌಡ (16/6/1967)
* ತಂದೆ ಬೋರಪ್ಪ, ತಾಯಿ ಬೋರಮ್ಮ
* ಪತ್ನಿ ಮಂಜುಳಾ, ಹರ್ಷಿತ್‌ ಗೌಡ, ಬಿ.ಪ್ರಕೃತಿ ಮಕ್ಕಳು
* ನಾಗಾಪುರ ವಾರ್ಡ್‌ (67) ನಿಂದ ಬಿಬಿಎಂಪಿ ಸದಸ್ಯರಾಗಿ ಆಯ್ಕೆ
* ಮಹಾಲಕ್ಷ್ಮೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿ
* ಮಾಜಿ ಅಧ್ಯಕ್ಷರು ವಾರ್ಡ್‌ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+