ಕೋವಿಡ್ ಸಂಖ್ಯೆ ಇಳಿಕೆ; ಬೆಂಗಳೂರಲ್ಲಿ ಕೇರ್ ಸೆಂಟರ್‌ ಬೆಡ್‌ ಖಾಲಿ

ಬೆಂಗಳೂರು, ಫೆಬ್ರವರಿ 01; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಜನರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದು, ಕೋವಿಡ್ ಕೇರ್‌ ಸೆಂಟರ್‌ಗಳ ಬೆಡ್‌ಗಳು ಖಾಲಿಯಾಗಿವೆ.

ಸೋಮವಾರ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 10,692 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ವಿವಿಧ ವಲಯಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿತ್ತು. ಕೋವಿಡ್ ಸೋಂಕಿತರಿಗೆ ಸಹಾಯಕವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.

bed

ಹೋಂ ಐಸೋಲೇಷನ್ ವ್ಯವಸ್ಥೆ ಇಲ್ಲದವರು, ಸೋಂಕಿನ ಲಕ್ಷಣಗಳು ಇರುವ ಜನರಿಗೆ ಸಹಾಯಕವಾಗಲಿ ಎಂದು ಕೋವಿಡ್ ಕೇರ್‌ ಸೆಂಟರ್‌ಗಳಲ್ಲಿ ಸಾಮಾನ್ಯ, ಆಕ್ಸಿಜನ್ ವ್ಯವಸ್ಥೆ ಇರುವ ಬೆಡ್‌ಗಳನ್ನು ಹಾಕಲಾಗಿತ್ತು. ಬಿಬಿಎಂಪಿ ಇನ್ನೂ ಬೆಡ್‌ಗಳನ್ನು ಹಾಗೆ ಇಟ್ಟುಕೊಂಡಿದೆ.

ಕಳೆದ ವಾರದ ಬಿಬಿಎಂಪಿ ಮಾಹಿತಿಯಂತೆ ನಗರದಲ್ಲಿನ ಕೋವಿಡ್ ಕೇರ್‌ ಸೆಂಟರ್‌ಗಳಲ್ಲಿ 1687 ಹಾಸಿಗೆಗಳು ಲಭ್ಯವಿದೆ. ಇದರಲ್ಲಿ 69 ಬೆಡ್‌ಗಳಲ್ಲಿ ಮಾತ್ರ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಂಟರ್‌ಗೆ ದಾಖಲಾಗುವ ರೋಗಿಗಳ ಸಂಖ್ಯೆ ನೋಡಿಕೊಂಡು ಅವುಗಳನ್ನು ಮುಚ್ಚಲು ಬಿಬಿಎಂಪಿ ಚಿಂತನೆ ನಡೆಸುತ್ತಿದೆ.

ಜನವರಿ ಮೊದಲ ವಾರದಲ್ಲಿ ನಾವು 90 ಬೆಡ್‌ಗಳ ಎರಡು ಕೋವಿಡ್ ಕೇರ್ ಸೆಂಟರ್ ಮಾತ್ರ ಹೊಂದಿದ್ದೆವು. ಆಗ 70 ಬೆಡ್ ಭರ್ತಿಯಾಗಿದ್ದವು. ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾದ ಮೇಲೆ ನಾವು ಹೋಂ ಐಸೋಲೇಷನ್ ಸಾಧ್ಯವಿಲ್ಲದವರಿಗಾಗಿ ಕೋವಿಡ್ ಕೇರ್‌ ಸೆಂಟರ್ ಆರಂಭಿಸಿದೆವು ಎನ್ನುತ್ತಾರೆ ಅಧಿಕಾರಿಗಳು.

ಕೋವಿಡ್ ಕೇರ್ ಸೆಂಟರ್‌ಗೆ ಜನರು ಕಡಿಮೆಯಾಗುವ ನಿರೀಕ್ಷೆ ಇತ್ತು. 3ನೇ ಅಲೆಯಲ್ಲಿ ಜನರು ಸೌಮ್ಯ ಸೋಂಕಿನ ಲಕ್ಷಣಗಳನ್ನು ಹೊಂದಿದ್ದು, ಮನೆಯಲ್ಲಿಯೇ ಗುಣಮುಗೊಳ್ಳುತ್ತಿದ್ದಾರೆ. ಆದ್ದರಿಂದ ಬೆಡ್‌ಗಳಿಗೆ ಬೇಡಿಕೆ ಕುಸಿದಿದೆ.

ಬಿಬಿಎಂಪಿ ವಾರ್ ರೂಂ ಅಂಕಿ ಸಂಖ್ಯೆಯಂತೆ ಡಿಸೆಂಬರ್ 26ರ ಬಳಿಕ ಕೋವಿಡ್ ಕೇರ್ ಸೆಂಟರ್ ದಾಖಲಾತಿಗಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಡಿಸೆಂಬರ್ 26 ರಂದು ಕೆಲವು ಸೆಂಟರ್‌ನಲ್ಲಿ ಒಬ್ಬರೇ ರೋಗಿಯಿದ್ದರೆ, ಜನವರಿ ವೇಳೆಗೆ ದಾಖಲಾತಿಗಳ ಸಂಖ್ಯೆ 51ಕ್ಕೆ ಏರಿಕೆಗೊಂಡಿತು. ಜನವರಿ 7ರಂದು 51, ಜನವರಿ 17ರಂದು 110ಕ್ಕೆ ಏರಿತು.

ಪ್ರಸ್ತುತ ಕೋವಿಡ್ ಕೇರ್ ಸೆಂಟರ್‌ನ ಸಾಮಾನ್ಯ ಬೆಡ್‌ಗಳಲ್ಲಿ 69 ರೋಗಿಗಳು ಇದ್ದಾರೆ. ಆದರೆ ಎಲ್ಲಾ ಕೋವಿಡ್ ಕೇರ್ ಸೆಂಟರ್‌ನಲ್ಲಿ ಆಕ್ಸಿಜನ್ ಬೆಡ್‌ನಲ್ಲಿ ಯಾರೂ ಸಹ ದಾಖಲಾಗಿಲ್ಲ. ನಗರದ ದಾಸರಹಳ್ಳಿ ವಲಯದಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 18 ಬೆಡ್‌ಗಳು ಭರ್ತಿಯಾಗಿವೆ. ನಗರದಲ್ಲಿ ಅತಿ ಹೆಚ್ಚಿನ ಜನರು ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿರುವುದು ಇದೇ ವಲಯದಲ್ಲಿ.

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಹೆಚ್ಚು ಎಂದರೆ ಒಟ್ಟು 6 ಕೋವಿಡ್ ಕೇರ್ ಸೆಂಟರ್‌ಗಳಿವೆ, ಇವುಗಳಲ್ಲಿ ನಾಲ್ಕು ಸೆಂಟರ್‌ಗಳಲ್ಲಿ ಯಾವುದೇ ರೋಗಿಗಳು ದಾಖಲಾಗಿಲ್ಲ. ಆರ್. ಆರ್‌. ನಗರ, ಯಲಹಂಕ, ಬೊಮ್ಮನಹಳ್ಳಿ ವಲಯದಲ್ಲಿಯೂ ಯಾವುದೇ ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಾಗಿಲ್ಲ.

ಕೋವಿಡ್ ಪ್ರಕರಣ ಇಳಿಕೆ; ಜನವರಿ 30ಕ್ಕೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 4000ದಷ್ಟು ಕಡಿಮೆ ಆಗಿದೆ. ರಾಜ್ಯದ ಪಾಸಿಟಿವಿಟಿ ದರ ಶೇ 17.11ಕ್ಕೆ ಇಳಿಕೆಯಾಗಿದೆ.

ರಾಜ್ಯದ ಒಟ್ಟು ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 2,44,331 ಆಗಿದೆ. ಇದರಲ್ಲಿ ಬೆಂಗಳೂರು ನಗರದಲ್ಲಿ 1,34,038 ಸಕ್ರಿಯ ಪ್ರಕರಣಗಳಿವೆ.

ಸೋಮವಾರದ ವರದಿಯಂತೆ ಬೆಂಗಳೂರು ನಗರದಲ್ಲಿ 10,692 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಉಳಿದಂತೆ ಮೈಸೂರು 1327, ಧಾರವಾಡ 1044, ತುಮಕೂರು 1090 ಕೋವಿಡ್ ಹೊಸ ಪ್ರಕರಣ ದಾಖಲಾಗಿದೆ.

Recommended Video

      ಕೇಂದ್ರ ಬಜೆಟ್ ನಿಂದ ಕರ್ನಾಟಕದ ನಿರೀಕ್ಷೆಗಳೇನು?ಇವೆಲ್ಲವೂ ಸಿಗುತ್ತಾ? | Budget 2022 | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+