• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಡ್ ಬ್ಲಾಕಿಂಗ್ ದಂಧೆ ಗೊಂದಲ, ಆರೋಪದ ಬಗ್ಗೆ ತೇಜಸ್ವಿ ಸೂರ್ಯ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಮೇ 10: ಬೆಡ್ ಬ್ಲಾಕಿಂಗ್ ದಂಧೆ ಕುರಿತಂತೆ ಸಾರ್ವಜನಿಕರಲ್ಲಿ ಇರುವ ಕೆಲವು ಗೊಂದಲಗಳು, ಹಾಗೂ ಎದುರಿಸಿರುವ ಆರೋಪದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ ನೀಡಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ನಾನು ನೂರು ಗಂಟೆಗಳಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕೆಂದು ಬಯಸಿದ್ದೆ, ಅದೇ ನೂರು ಗಂಟೆಗಳಲ್ಲಿ ಜನರ ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕೆಲವರು ಮಾಡಿದ್ದಾರೆ, ಆದರೆ ಆಸ್ಪತ್ರೆಗಳ ಲೋಪದೋಷಗಳನ್ನು ತಿದ್ದಿ ಸಾವಿರಾರು ಜನರಿಗೆ ಹಾಸಿಗೆಗಳು ಸಿಗುವಂತೆ ಮಾಡಲಾಗಿದೆ ಎನ್ನುವ ಹೆಮ್ಮೆ ನನಗಿದೆ ಎಂದರು.

ಕ್ಷಮೆಯಾಚನೆ ಸುದ್ದಿ ಅಲ್ಲಗೆಳೆದ ಸಂಸದ ತೇಜಸ್ವಿ ಸೂರ್ಯಕ್ಷಮೆಯಾಚನೆ ಸುದ್ದಿ ಅಲ್ಲಗೆಳೆದ ಸಂಸದ ತೇಜಸ್ವಿ ಸೂರ್ಯ

ನಾನು ಒಂದೆಡೆ ಜನರು ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ ಸಾಯುತ್ತಿದ್ದಾರೆ, ಅವರಿಗೆ ಹಾಸಿಗೆ ಕೊಡಿಸಲು ಶತ ಪ್ರಯತ್ನ ಮಾಡುತ್ತಿದ್ದರೆ, ಕಾಂಗ್ರೆಸ್ ಪಕ್ಷವು ಈ ವಿಷಯವನ್ನು ಡೈವರ್ಟ್ ಆಗುವಂತೆ ನೋಡಿಕೊಂಡಿತು. ಈ ವಿಚಾರವಾಗಿ ಕೆಲವು ಸ್ಪಷ್ಟನೆಗಳನ್ನು ನೀಡಬಯಸುತ್ತೇವೆ ಎಂದರು.

ಯಾರನ್ನೂ ಕೆಲಸದಿಂದ ತೆಗೆಸಿಹಾಕಿಲ್ಲ

ಯಾರನ್ನೂ ಕೆಲಸದಿಂದ ತೆಗೆಸಿಹಾಕಿಲ್ಲ

-ತೇಜಸ್ವಿ ಸೂರ್ಯ ಒಂದೇ ಸಮುದಾಯದ 16 ಮಂದಿಯನ್ನು ತೆಗೆಸಿಹಾಕಿ, ಕೂಮುವಾದ ಸೃಷ್ಟಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಬೆಡ್ ಬ್ಲಾಕಿಂಗ್ ದಂಧೆ ಕುರಿತು ಕೋವಿಡ್ ವಾರ್ ರೂಂಗೆ ಹೋದಾಗ ಬಿಬಿಎಂಪಿ ಆಯುಕ್ತರೇ ಈ ಪಟ್ಟಿಯನ್ನು ಕೊಟ್ಟು ಇದರಲ್ಲಿರುವ 16 ಮಂದಿಯನ್ನು ರಿಸ್ಟ್ರಕ್ಚರ್ ಮಾಡಲಾಗಿದೆ ಎಂದು ಹೇಳಿದ್ದರು, ನಾನು ಆ ಲಿಸ್ಟ್‌ನಲ್ಲಿರುವ ಹೆಸರನ್ನು ಓದಿದ್ದಷ್ಟೇ ನಾನು ಯಾರನ್ನು ಕೆಲಸದಿಂದ ತೆಗೆಸಿಹಾಕಿಲ್ಲ, ಅಥವಾ ಅವರು ಯಾವ ಧರ್ಮದವರೆಂದೂ ನೋಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಹಾಗೆಯೇ 205 ಹೆಸರುಗಳಲ್ಲಿ ಇನ್ನೂ ಕೆಲವರು ಅದೇ ಸಮುದಾಯಕ್ಕೆಸೇರಿದವರಿದ್ದರು ನಾನೊಂದೊಮ್ಮೆ ಅವರ ಸಮುದಾಯವನ್ನೇ ಟಾರ್ಗೆಟ್ ಮಾಡುವುದಾಗಿದ್ದರೇ ಅವರ ಹೆಸರುಗಳನ್ನು ಸೇರಿಸುತ್ತಿದ್ದೆ ಎಂದರು. ಆದರೆ ಇಷ್ಟು ಜನರನ್ನು ಕೆಲಸಕ್ಕೆ ಸೇರಿಸಿಕೊಂಡವರು ಯಾರು ಎಂದು ಪ್ರಶ್ನೆ ಮಾಡಿದ್ದು ಸತ್ಯ ಎಂದರು.

ಪೊಲೀಸ್ ಕ್ಲೀನ್ ಚಿಟ್ ಕೊಟ್ಟಿದ್ದಾರೆ

ಪೊಲೀಸ್ ಕ್ಲೀನ್ ಚಿಟ್ ಕೊಟ್ಟಿದ್ದಾರೆ

205 ಮಂದಿ ಸಿಬ್ಬಂದಿ ಪೈಕಿ 16 ಮಂದಿಗೆ ಪೊಲೀಸರು ಕ್ಲೀನ್ ಚಿಟ್ಟ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ, ಮೊದಲನೆಯದಾಗಿ ಈ ಸಿಬ್ಬಂದಿ ಮೇಲೆ ಯಾರೂ ಕೂಡ ಕ್ರಿಮಿನಲ್ ಆರೋಪಗಳನ್ನು ಮಾಡಲೇ ಇಲ್ಲ ಹೀಗಿದ್ದಾಗ ಕ್ಲೀನ್ ಚಿಟ್ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬೆಡ್ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರುಬೆಡ್ ಬ್ಲಾಕಿಂಗ್ ಪ್ರಕರಣ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ದೂರು

ಯಾವ ಸಮುದಾಯವನ್ನೂ ಟಾರ್ಗೆಟ್ ಮಾಡಿಲ್ಲ

ಯಾವ ಸಮುದಾಯವನ್ನೂ ಟಾರ್ಗೆಟ್ ಮಾಡಿಲ್ಲ

ನಾವು ಯಾವ ಸಮುದಾಯವನ್ನು ಟಾರ್ಗೆಟ್ ಮಾಡಿಲ್ಲ, ಡಿಸಿಪಿ ಬೆಂಗಳೂರು ಸೌತ್‌ಗೆ ಮಾಹಿತಿ ನೀಡಿ ಒಂದು ದಿನ ಮುಂಚಿತವಾಗಿಯೇ ನೇತ್ರಾವತಿ ಹಾಗೂ ರೋಹಿತ್‌ನನ್ನು ಬಂಧಿಸುವಂತೆ ಮಾಡಿದ್ದೇನೆ, ಹಾಗೆಯೇ ಉನ್ನತಾಧಿಕಾರಿಗಳು ನೀಡಿರುವ ಪಟ್ಟಿಯಲ್ಲಿದ್ದ ಹೆಸರನ್ನು ಓದಿದ್ದೇನೆ ವಿನಃ ಯಾವ ಸಮುದಾಯವನ್ನೂ ಟಾರ್ಗೆಟ್ ಮಾಡಿಲ್ಲ, ಜನರ ಉಸಿರು ಉಳಿಯುವುದು ಮುಖ್ಯ ಎಂದು ಹೇಳಿದರು.

ಕ್ಷಮೆ ಕೇಳಿಲ್ಲ

ಕ್ಷಮೆ ಕೇಳಿಲ್ಲ

ವಾರ್ ರೂಂಗೆ ಹೋಗಿದ್ದು ಸತ್ಯ ಆದರೆ ಯಾವುದೋ ಒಂದು ಸಮುದಾಯದವರ ಹೆಸರನ್ನು ಹೇಳಿದ್ದಕ್ಕಾಗಿ ಸಮುದಾಯದ ಕ್ಷಮೆ ಕೇಳಿಲ್ಲ, ಪಟ್ಟಿಯಲ್ಲಿರುವ ಹೆಸರು ಲೀಕ್ ಆಗಿ ಅಲ್ಲಿರುವ ಸಿಬ್ಬಂದಿಗೆ ತೊಂದರೆಯಾಗುತ್ತಿತ್ತು. ನಿತ್ಯ ನೂರಾರು ಕರೆಗಳು ಬರುತ್ತಿದ್ದವು, ಹೀಗಾಗಿ ಹೊಸ ಸಿಮ್‌ಕಾರ್ಡ್‌ಗಳನ್ನು ಮಹಿಳಾ ಸಿಬ್ಬಂದಿಗೆ ಒದಗಿಸುವಂತೆ ಕೇಳಿ ಆಗುತ್ತಿರುವ ತೊಂದರೆಗೆ ಕ್ಷಮೆ ಕೇಳಿದ್ದೇನೆ.

ಯಾವ ಪಕ್ಷದವರಿದ್ದರೂ ಶಿಕ್ಷೆ

ಯಾವ ಪಕ್ಷದವರಿದ್ದರೂ ಶಿಕ್ಷೆ

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿಯಾಗಿರಬಹುದು, ಉದಯ ಗರುಡಾಚಾರ್ ಯಾರೇ ಆಗಿರಲಿ, ಅವರವರ ಕ್ಷೇತ್ರದಲ್ಲಿ ತಮ್ಮನ್ನು ಆಯ್ಕೆ ಮಾಡಿರುವ ಜನರಿಗೆ ಹಾಸಿಗೆಗಳನ್ನು ಒದಗಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದಾರೆ ಅದನ್ನೇ ತಪ್ಪು ಎಂದು ಕಾಂಗ್ರೆಸ್ ಬಿಂಬಿಸುತ್ತಿದೆ.

  #VaccinationDrive,10-05-2021 ಬೆಂಗಳೂರು: 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಅಭಿಯಾನ | Oneindia Kannada
  ವ್ಯವಸ್ಥೆ ಬದಲಿಸಲು ಹೊರಟಾಗ ಹಲವು ಆರೋಪಗಳು

  ವ್ಯವಸ್ಥೆ ಬದಲಿಸಲು ಹೊರಟಾಗ ಹಲವು ಆರೋಪಗಳು

  ನೂರು ದಿನಗಳಲ್ಲಿ ವ್ಯವಸ್ಥೆಯನ್ನು ಬದಲಿಸುತ್ತೇನೆ ಎಂದು ಹೊರಟೆ ಆದರೆ ಉಗ್ರ ಅಜ್ಮಲ್ ಕಸಬ್‌ಗೆ ನನ್ನನ್ನು ಹೋಲಿಸದರು, ಮನಸ್ಸಿಗೆ ತುಂಬಾ ನೋವಾಯಿತು. ರೋಗಿಗಳು ಆಸ್ಪತ್ರೆಗೆ ಹೋದಾಗ ಯಾವುದೇ ತೊಂದರೆ ಇಲ್ಲದೆ ಹಾಸಿಗೆಗಳು ದೊರೆತಾಗ ತೇಜಸ್ವಿ ಸೂರ್ಯ, ಯಡಿಯೂರಪ್ಪನವರನ್ನೇ ಜನರು ನೆನೆಯುತ್ತಾರೆ ವಿನಃ ಹಲ್ಲುಕಚ್ಚಿ ಮಾತನಾಡಿದವರನ್ನಲ್ಲ. ನಾನು ಸಂಸದನಾಗಿ ಇರುವವರೆಗೂ ಇಂತಹ ವ್ಯವಸ್ಥೆ ವಿರುದ್ಧ ಹೋರಾಡುತ್ತಿರುತ್ತೇನೆ, ಜನರ ಸೇವೆಗೆ ಸಿದ್ಧನಿದ್ದೇನೆ ಎಂದು ನುಡಿದರು.

  English summary
  MP Tejasvi Surya press conference on reforms made in the BBMP bed allocation system.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X